ಕೊರೋನ 2 ಗಂಟೆಗಳಲ್ಲಿ ಪಾಸಿಟಿವ್ / ನೆಗೆಟಿವ್ ವರದಿ ಪಡೆಯುವ ಅತ್ಯಾಧುನಿಕ ತಂತ್ರಜ್ಞಾನದ ಮೊಬೈಲ್ ವಾಹನ ಜಿಲ್ಲೆಗೆ ತರಲು ಕೋಲಾರ ಸಂಟ್ರಲ್ ರೋಟರಿಯ ಆಲೋಚನೆ.

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ,ಜೂ.4: ಕೊರೋನ ಸೋಂಕಿತರಿಗೆ ರೋಟರಿ ಸೆಂಟ್ರಲ್ ಮೂಲಕ ಕೇವಲ 2 ಗಂಟೆಗಳಲ್ಲಿ ಪಾಸಿಟಿವ್ ಹಾಗೂ ನೆಗೆಟಿವ್ ವರದಿಯನ್ನು ಪಡೆಯುವ ಅತ್ಯಾಧುನಿಕ ತಂತ್ರಜ್ಞಾನದ ಮೊಬೈಲ್ ವಾಹನವನ್ನು ಜಿಲ್ಲೆಗೆ ತರಲು ರೋಟರಿ ಕೋಲಾರ ಸಂಟ್ರಲ್ ಸದ್ಯಸರ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ರೋಟರಿ ಕೋಲಾರ ಸಂಟ್ರಲ್‍ನ ನಿಯೋಜಿತ ಅಧ್ಯಕ್ಷ ಸಿಎಂಆರ್ ಶ್ರೀನಾಥ್ ಹೇಳಿದರು.
ನಗರದ ರೋಟರಿ ಕೋಲಾರ ಸಂಟ್ರಲ್ ಭವನದಲ್ಲಿ ಭಾರತ್ ಸೇವಾದಳ ಹಾಗೂ ರೋಟರಿ ಕೋಲಾರ ಸಂಟ್ರಲ್ ಆಶ್ರಯದಲ್ಲಿ ಪತ್ರಿಕಾ ವಿತರಕರಿಗೆ ದಿನಸಿ ಕಿಟ್ ವಿತರಿಸಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಮಾಡದ ಕಾರ್ಯವನ್ನು ರೋಟರಿ ಸಂಟ್ರಲ್ ಕೋಟ್ಯಾಂತರ ರೂ ವೆಚ್ಚಗಳಲ್ಲಿ ಸುಸಜ್ಜಿತ ಅತ್ಯಾಧುನಿಕ ಮೊಬೈಲ್ ವಾಹನ ಸಿದ್ದಪಡಿಸಲು ಮುಂದಾಗಿರುವ ಶ್ರಮ ಅಪಾರವಾಗಿದೆ ಎಂದು ತಿಳಿಸಿ, ಈ ಮೊಬೈಲ್ ವ್ಯಾನ್ ಸೌಲಭ್ಯ ಜಿಲ್ಲೆಗೆ ಒದಗಿ ಬಂದರೆ ಶೀಘ್ರದಲ್ಲೇ ನಗರ ಹಾಗೂ ಗ್ರಾಮಾಂತರ ಪ್ರದೇಶದ ಭಾಗಗಳಿಗೆ ಯಾವುದೇ ಶುಲ್ಕವಿಲ್ಲದೆ ಉಚಿತವಾಗಿ ಸ್ಥಳದಲ್ಲೇ ಕೋವಿಡ್ 19 ವರದಿಯನ್ನು ನೀಡಿ, ವರದಿಯಲ್ಲಿ ಪಾಸಿಟಿವ್ ಬಂದ ಸೋಂಕಿತರಿಗೆ ಸ್ಥಳದಲ್ಲೇ ಜೀವ ರಕ್ಷಕ ಮೆಡಿಸಿನ್ ಕಿಟ್ ಅನ್ನು ವಿತರಣೆ ಮಾಡಿ, ಸೋಂಕಿತರು ಹೋಂ ಐಸೋಲೇಶನ್ ಮತ್ತು ಕೋವಿಡ್ ಕೇರ್ ಸೆಂಟರ್‍ಗಳಲ್ಲಿ ಚಿಕಿತ್ಸೆಯನ್ನು ಪಡೆದು ಶೀಘ್ರದಲ್ಲೇ ಗುಣಮುಖರಾಗಿ ಬರುವಂತೆ ಆಶಿಸಿದರು.
ರೋಟರಿ ಕೋಲಾರ ಸಂಟ್ರಲ್ ಜಿಲ್ಲಾಧ್ಯಕ್ಷ ಎಸ್.ಸುಧಾಕರ್ ಮಾತನಾಡಿ, ಸಮಾಜ ಸೇವಕರಾದ ಸಿ.ಎಂ.ಆರ್ ಶ್ರೀನಾಥ್ ರವರು ಕೋವಿಡ್ ಪಾಸಿಟಿವ್ ಬಂದಿರುವವರ ಮನೆಗೆ ತೆರಳಿ ಮೆಡಿಸನ್ ಕಿಟ್ ನೀಡಿ ಆತ್ಮಸ್ತೈರ್ಯವನ್ನು ತುಂಬುವಂತ ಕೆಲಸವನ್ನು ಮಾಡುತ್ತಿರುವುದು ಶ್ಲಾಘನೀಯ ಎಂದ ಅವರು ಪತ್ರಿಕಾ ವಿತರಕರು ಪ್ರತಿ ದಿನ ಗಾಳಿ, ಮಳೆ, ಚಳಿ ಎನ್ನದೇ ಮನೆಮನೆಗೂ ಪತ್ರಿಕೆಯನ್ನು ವಿತರಿಸುವ ಅವರ ಶ್ರಮ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ಅವರಿಗೆ ತಮ್ಮ ಕೈಲಾದ ಸಹಾಯವನ್ನು ಮಾಡಬೇಕೆಂದು ತಿಳಿಸಿದಾಗ ಅವರು ದಿನಸಿ ಕಿಟ್ ನೀಡಲು ವ್ಯವಸ್ತೆ ಮಾಡುವ ಮೂಲಕ ತಮ್ಮ ಸಾಮಾಜಿಕ ಕಳಕಳಿಯನ್ನು ತೋರ್ಪಡಿಸಿದ್ದಾರೆ ಎಂದರು. ಈಗಾಗಲೇ ರೋಟರಿ ಸಂಸ್ತೆಯು ರಾಜ್ಯಾದ್ಯಂತ ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸುತ್ತಾ ಬರುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಕಾರ್ಯಕ್ರಮಗಳನ್ನು ನಡೆಸಿಕೊಂಡು ಹೋಗುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾರತ್ ಸೇವಾದಳದ ಜಿಲ್ಲಾಧ್ಯಕ್ಷ ಕೆ.ಎಸ್ ಗಣೇಶ್, ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಕೆ ಚಂದ್ರಶೇಖರ್, ಜಯ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಕೆ.ಆರ್ ತಾಗರಾಜ್, ರೋಟರಿ ಕೋಲಾರ ಸಂಟ್ರಲ್ ರಾಜಕುಮಾರ್, ಚಂಪಕ್ ರಮೇಶ್, ಪತ್ರಕರ್ತರಾದ ಎಂ.ಡಿ ಚಾಂದ್‍ಪಾಷ, ಟಮಕ ವಿಶ್ವ, ಕಾರಂಜಿಕಟ್ಟೆ ಶಿವಕುಮಾರ್ ಉಪಸ್ಥಿತರಿದ್ದರು
.