ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ : ನೆರೆಯ ರಾಜ್ಯದ ವಿದ್ಯಾಂವತರು ಬೆಂಗಳೂರಿನಲ್ಲಿ ಕೆಲಸದ ನಿಮಿತ್ತ ವಾಸಗಿದ್ದು, ಕರೋನಾ ಮಹಾಮಾರಿಯಿಂದ ತಮ್ಮ ಸ್ವಂತ ಗ್ರಾಮಕ್ಕೆ ಹಿಂತುರುಗುತ್ತಿದ್ದಾರೆ. ಇಂತಹ ಸಮಯದಲ್ಲಿ ಪೊಲೀಸರು ಹಣಕೊಟ್ಟರೆ ಗಾಡಿ ಬಿಡುತ್ತೇವೆ ಇಲ್ಲವಾದರೆ ಇಲ್ಲವೆಂದು ಮನ ಬಂದಂತೆ ನಿಂದಿಸುವುದು. ಮೊದಲೇ ಮಾನಸಿಕವಾಗಿ ಹಾಗೂ ದೈಹಿಕವಾಗಿ ಶ್ರಮದಿಂದ ಬಳುಲುತ್ತಿರುವ ಪ್ರಯಾಣೀಕರಿಗೆ ಪೊಲೀಸರಿಂದ ತಪ್ಪಿಸಿಕೊಳ್ಳುವುದೇ ದೊಡ್ಡ ಪರೀಕ್ಷೆಯಾಗಿ ಇತ್ತೀಚಿನ ದಿನಗಳಲ್ಲಿ ಸೃಷ್ಟಿಯಾಗಿರುವುದು ನನ್ನ ಗಮನಕ್ಕೆ ಬಂದಿದೆ ಎಂದು ಶಾಸಕರಾದ ಕೆ.ಆರ್.ರಮೇಶ್‍ಕುಮಾರ್ ಹೇಳಿದರು.
ರಾಯಲ್ಪಾಡ್‍ನ ಹಕ್ಕಿಪಿಕ್ಕಿ ಚಕ್‍ಪೋಸ್ಟ್‍ನಲ್ಲಿ ಗುರುವಾರ ಪೊಲೀಸ್ ಇಲಾಖೆಯ ವಿರುದ್ಧ ಏಕಾಂಗಿಯಾಗಿ ಧರಣಿಗೆ ಕುಳಿತು ಮಾತನಾಡಿದರು.

ನಮಗೆ ಎಂದು ಅರಿಯದ, ನಮಗೆ ತಿಳಿಯದ ರೋಗವೊಂದು ದೇಶವ್ಯಾಪ್ತಿಯಾಗಿ ಜನರನ್ನು ಪೀಡಿಸುತ್ತಿದೆ. ರೋಗವನ್ನ ತಡೆಗಟ್ಟುವ ಸಲುವಾಗಿ ರಾಜ್ಯ ಹಾಗು ನೆರೆಯ ರಾಜ್ಯ ಸರ್ಕಾರವು ಕೆಲ ಮಾರ್ಗೋಪಾಯಗಳನ್ನು ಅನುಸರಿಸುತ್ತಿದೆ. ಇದರ ಹಿನ್ನಲೆಯಲ್ಲಿ ವಾಹನಗಳಿಗೆ ಕೆಲ ನಿರ್ಬಂಧನಗಳನ್ನು ಎರಡು ಸರ್ಕಾರಗಳು ವಿಧಿಸಿದೆ.ಸದುದ್ದೇಶದಿಂದ ಮಾಡಿರುವ ಮಾರ್ಗೋಪಾಯ ಮಾನವೀಯತೆ ಇಲ್ಲದೆ, ಒಂದಿಬ್ಬರು ಅಧಿಕಾರಿಗಳು ಇದೇ ಅವಕಾಶವನ್ನು ಬಳಿಸಿಕೊಂಡು ಇರಡು ರಾಜ್ಯಗಳ ರೈತ ವರ್ಗ ಹಾಗು ಸಾಮಾನ್ಯ ಜನತೆ ಬಳಿ ಇಲಾಖೆಯು ಅಮಾನೀಯವಾಗಿ ತೊಂದರೆ ಕೊಡುತ್ತಿದೆ ಎಂದು ಇಲಾಖೆಯ ವಿರುದ್ಧ ಗುಡುಗಿದರು .
ಭ್ರಷ್ಟಾಚಾರ, ಲಂಚವನ್ನು ಸ್ವೀಕರಿಸುವವರ ವಿರುದ್ದ ಅನೇಕ ಭಾರಿ ಹೋರಾಟಗಳನ್ನು ನಡೆಸಿದ್ದೇನೆ. ಅಮಾನತ್ತು ದಿನಕಳೆದಂತೆ ಪುನಃ ಇಲಾಖೆಗೆ ಸೇರ್ಪಡೆಯಾಗುತ್ತಾರೆ. ಆದರೆ ಇಂತಹ ಅಧಿಕಾರಿಯನ್ನ ವಜಾ ಮಾಡಿ ಇಲಾಖೆಯ ಗೌರವ ಕಾಪಾಡಿಕೊಳ್ಳುವಂತೆ ಇಲಾಖಾಧಿಕಾರಿಗಳಿಗೆ ಸೂಚಿಸಿದರು. ಇಲಾಖೆಯಲ್ಲಿ ಇಂತಹ ಘಟನೆ ಪುನಾರಾವರ್ತನೆಯಾಗದಂತೆ ಇಲಾಖೆ ಎಚ್ಚರ ವಹಿಸಬೇಕು.
ಜಿಲ್ಲೆಯ ಹಿರಿಯ ಅಧಿಕಾರಿಗಳು ಧರಣಿಯ ಸ್ಥಳಕ್ಕೆ ಬರುವ ತನಕ ಸ್ಥಳದಿಂದ ನಿರ್ಗಮಿಸುವುದಿಲ್ಲ ಎಂದಾಗ , ಜಿಲ್ಲೆಯ ಹಿರಿಯ ಅಧಿಕಾರಿಗಳು ಧರಣಿ ನಿರತ ಸ್ಥಳಕ್ಕೆ ಬೇಟಿ ನೀಡಿ ಶಾಸಕರರೊಂದಿಗೆ ಚರ್ಚೆ ಮಾಡಿದರು. ನಂತರ ಠಾಣಾಧಿಕಾರಿಯವರನ್ನ ಅಮಾನತ್ತು ಮಾಡಿದ ನಂತರ ಶಾಸಕರಾದ ಕೆ.ಆರ್.ರಮೇಶ್‍ಕುಮಾರ್‍ರವರು ಧರಣಿ ವಾಪಸ್ಸು ಪಡೆದರು.
ಅಡಿಸಿನಲ್ ಎಸ್ಪಿ ಬಿ.ಎಂ.ನಾರಾಯಣಸ್ವಾಮಿ, ಡಿವೈಎಸ್‍ಪಿ ಗಿರಿ, ಸಿಐ ಗಳಾದ ರಾಘವೇಂದ್ರಪ್ರಕಾಶ್,ರವಿಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಂಜಯ್‍ರೆಡ್ಡಿ, ಟಿಎಪಿಸಿಎಂಎಸ್ ತಾಲೂಕು ಅಧ್ಯಕ್ಷ ಬಗ್ಗಲಘಟ್ಟ ಶ್ರೀನಿವಾಸ್‍ರೆಡ್ಡಿ, ಮುಖಂಡರಾದ ಕೆ.ಕೆ.ಮಂಜುನಾಥರೆಡ್ಡಿ, ರಾಯಲ್ಪಾಡು ಗ್ರಾ.ಪಂ.ಅಧ್ಯಕ್ಷೆ ಅರುಣ್‍ವೆಂಕಟ್, ಸದಸ್ಯರಾದ ಆರ್.ಗಂಗಾದರ್,ಅಶೋಕ್‍ರೆಡ್ಡಿ,ನಾಗೇಶ್, ಮುದಿಮಡುಗು ಗ್ರಾ.ಪಂ.ಅಧ್ಯಕ್ಷ ಚಿಕ್ಕನಾರಾಯಣಪ್ಪ, ಕೂರಿಗೇಪಲ್ಲಿ ಗ್ರಾ.ಪಂ.ಅಧ್ಯಕ್ಷ ವಿಶ್ವನಾಥರೆಡ್ಡಿ ಇತರರಿದ್ದರು.
