JANANUDI.COM NETWORK
ತೆಲಂಗಾಣ, ಕೊವಿಡ್ 19 ಸೋಂಕಿಗೆ ತುತ್ತಾದ ಮಹಿಳೆಯೊಬ್ಬರು, ತಮ್ಮ ಸೊಸೆಯನ್ನು ಬಲವಂತವಾಗಿ ಅಪ್ಪಿಕೊಂಡು ಆಕೆಗೂ ಸೋಂಕಿಗೆ ತುತ್ತಾಗುವಂತೆ ಮಾಡಿದ ಉತ್ತರ ತೆಲಂಗಾಣದ ರಾಜಣ್ಣ ಸಿರಿಸಿಲ್ಲಾ ಜಿಲ್ಲೆಯ ಸೋಮಪೇಟ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಮೊದಲು ಅತ್ತೆ ಕೊರೊನಾಕ್ಕೆ ತುತ್ತಾದರು. ಅವರನ್ನು ಪ್ರತ್ಯೇಕವಾಗಿ ಇಟ್ಟು ಆಹಾರ ಔಷಧ ನೀಡುತಿದ್ದೆವು. ಅವಳ ಮೊಮ್ಮಕ್ಕಳನ್ನು ಅವರ ಹತ್ತಿರ ಹೋಗಲು ಅವಕಾಶ ನೀಡಲ್ಲಿಲ್ಲ.
“ನೀವೆಲ್ಲ ನನ್ನನ್ನು ದೂರ ಮಾಡುತ್ತಿರಿ, ತಾವೊಬ್ಬರೇ ಪ್ರತ್ಯೇಕವಾಗಿ ಇರಲು ಒಪ್ಪದ ಅತ್ತೆ, ಹೀಗಾಗಿ ಅವರು ತುಂಬ ಬೇಸರಗೊಂಡು ನಾನು ಸತ್ತರೆ ನಿಮಗೆಲ್ಲ ಖುಷಿಯಾಗುತ್ತದೆಯಾ ಎಂದು ಕೂಗಾಡುತ್ತಿದ್ದರು, ನೀನು ಕೋವಿಡ್ -19 ಸೋಂಕಿಗೆ ಒಳಗಾಗಬೇಕು ಎಂದು ನನ್ನ ಅತ್ತೆ ನನ್ನನ್ನು ತಬ್ಬಿಕೊಂಡರು” ಎಂದು ಸೊಸೆ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಅದಾದ ಬಳಿಕ ಸೊಸೆಯಲ್ಲೂ ಕೊವಿಡ್ ಲಕ್ಷಣಗಳು ಕಾಣಿಸಿಕೊಂಡು, ಆಕೆಯನ್ನು ತಪಾಸಣೆಗೆ ಒಳಪಡಿಸಿದಾಗ ವರದಿ ಪಾಸಿಟಿವ್ ಬಂದಿದೆ.
ಈಗ ಗಂಡನ ಮನೆಯವರು ಕೊರೊನಾ ಸೋಂಕಿತ ಸೊಸೆಯನ್ನು ಮನೆಯಿಂದ ಹೊರಹಾಕಿದ್ದು,ಈಗ ಅವಳನ್ನು ತಿಮ್ಮಾಪುರ ಗ್ರಾಮದಲ್ಲಿರುವ ಆಕೆಯ ತವರು ಮನೆಗೆ ಸೋದರಿ ಕರೆದುಕೊಂಡು ಹೋಗಿದ್ದಾಳೆ. ಸದ್ಯ ಸೊಸೆ ತನ್ನ ಸೋದರಿಯ ಮನೆಯಲ್ಲೇ ಇದ್ದುಕೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.