ಯುವ ಕಾಂಗ್ರೆಸ್‍ನಿಂದ ಆಮ್ಲಜನಕ ಸಾಂದ್ರಕ ಕೊಡುಗೆ ಅಗತ್ಯವುಳ್ಳ ಪತ್ರಕರ್ತರು ಬಳಸಿಕೊಳ್ಳಿ-ವಿ.ಮುನಿರಾಜು

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ಪತ್ರಕರ್ತರ ಜೀವ ರಕ್ಷಣೆ ದೃಷ್ಟಿಯಿಂದ ಯುವ ಕಾಂಗ್ರೆಸ್ ಕೊಡುಗೆಯಾಗಿ ನೀಡಿರವ 2 ಆಮ್ಲಜನಕ ಸಾಂದ್ರಕಗಳನ್ನು ಪತ್ರಕರ್ತರು ಮತ್ತು ಅವರ ಕುಟುಂಬದವರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿ.ಮುನಿರಾಜು ಕರೆ ನೀಡಿದರು.
ನಗರದ ಪತ್ರಕರ್ತರ ಭವನದಲ್ಲಿ ಯುವ ಕಾಂಗ್ರೆಸ್‍ನಿಂದ ಪತ್ರಕರ್ತರ ಸಂಘಕ್ಕೆ ಕೊಡುಗೆಯಾಗಿ ನೀಡಲಾದ 2 ಆಮ್ಲಜನಕ ಸಾಂದ್ರಕಗಳನ್ನು ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
ಕೋವಿಡ್ ಮಾರಿಯಿಂದಾಗಿ ಉಸಿರಾಟದ ತೊಂದರೆ, ಆಮ್ಲಜನಕ ಕೊರತೆಯಿಂದ ಅನೇಕ ರೋಗಿಗಳು ಜೀವ ಕಳೆದುಕೊಂಡಿದ್ದನ್ನು ಕಂಡಿದ್ದೇವೆ, ಇಂತಹ ಸಂದರ್ಭದಲ್ಲಿ ರಾಜ್ಯದಲ್ಲಿ ನಮ್ಮ ಸಹೋದ್ಯೋಗಿಗಳು ಜೀವ ಕಳೆದುಕೊಂಡಿದ್ದಾರೆ ಎಂದರು.
ಇಂತಹ ಸಂಕಷ್ಟದ ಸ್ಥಿತಿಯಲ್ಲಿ ಜಿಲ್ಲಾಯುವ ಕಾಂಗ್ರೆಸ್ ಅಧ್ಯಕ್ಷ ಫ್ರಾನ್ಸಿಸ್ ಬೆನಿಟೋ ಆಮ್ಲಜನಕ ಸಾಂದ್ರಕ ಒದಗಿಸಿದ್ದು, ಅದನ್ನು ಬಳಸಿಕೊಳ್ಳುವುದಾಗಿ ತಿಳಿಸಿದರು.
ಪತ್ರಕರ್ತರ ಭವನದಲ್ಲೇ ಈ ಸಾಂದ್ರಕಗಳು ಇರಲಿದ್ದು, ಪತ್ರಕರ್ತರು ಮತ್ತು ಅವರ ಕುಟುಂಬದವರು ಉಸಿರಾಟದ ತೊಂದರೆಯಾದರೆ ಕಚೇರಿಯ ಗಂಗಾಧರ್ ಅವರನ್ನು ಸಂಪರ್ಕಿಸಿ ಬಳಸಿಕೊಳ್ಳಬಹುದು ಎಂದು ತಿಳಿಸಿದರು.
ಈ ಸಾಂದ್ರಕಗಳು ವಾತಾವರಣದಲ್ಲಿನ ಆಮ್ಲಜನಕವನ್ನು 5 ಲೀಟರ್ ಪ್ರಮಾಣದಲ್ಲಿ ರೋಗಿಗೆ ಸದಾ ಒದಗಿಸಲಿದ್ದು, ಉಸಿರಾಟದ ತೊಂದರೆ ಕಂಡು ಬಂದರೆ ಪತ್ರಕರ್ತ ಬಂಧುಗಳು ಇದರ ಪ್ರಯೋಜನ ಪಡೆಯಲು ಮನವಿ ಮಾಡಿದರು.
ಯುವ ಕಾಂಗ್ರೆಸ್‍ನ
ಸಾಮಾಜಿಕ ಸೇವೆ
ಜಿಲ್ಲಾಯುವ ಕಾಂಗ್ರೆಸ್ ಅಧ್ಯಕ್ಷ ಫ್ರಾನ್ಸಿಸ್ ಬೆನಿಟೋ ಆಮ್ಲಜನಕ ಸಾಂದ್ರಕಗಳನ್ನು ಹಸ್ತಂತರಿಸಿ, ಪತ್ರಕರ್ತರಿಗೆ ಸ್ಯಾನಿಟೈಸರ್,ಮಾಸ್ಕ್ ವಿತರಿಸಿ ಮಾತನಾಡಿ, ಮಾಧ್ಯಮ ಇಂದು ಕೋವಿಡ್ ತಡೆಗೆ ಪ್ರಮುಖ ಪಾತ್ರ ವಹಿಸಿದೆ ಜನತೆಗೆ ಜಾಗೃತಿ ಮೂಡಿಸಿದೆ ಎಂದರು.
ಕೋವಿಡ್ ಫ್ರಂಟ್‍ಲೈನ್ ವರ್ಕರ್ಸ್ ಆಗಿ ಜನರ ಕೆಲಸ ಮಾಡುತ್ತಿರುವ ಪತ್ರಕರ್ತರ ಆರೋಗ್ಯ ರಕ್ಷಣೆಯೂ ಅತಿ ಮುಖ್ಯವಾಗಿದೆ, ಸಮಾಜಕ್ಕೆ ಸರ್ಕಾರದ ತಪ್ಪುಗಳ ಅರಿವು ಮೂಡಿಸಿದ್ದಲ್ಲದೇ ಆಮ್ಲಜನಕಕ ಕೊರತೆ ನೀಗಿಸಲು ಸರ್ಕಾರದ ಮೇಲೆ ಒತ್ತಡ ತರುವಲ್ಲಿಯೂ ಪತ್ರಕರ್ತರು ಶ್ರಮಿಸಿದ್ದಾರೆ ಎಂದರು
ಪತ್ರಕರ್ತರ ನೆರವಿಗೆ ಯುವ ಕಾಂಗ್ರೆಸ್ ಬಂದಿದ್ದು, ಆಮ್ಲಜನಕ ಸಾಂದ್ರಕಗಳನ್ನು ಸದುಪಯೋಗ ಮಾಡಿಕೊಳ್ಳುವಂತೆ ಅವರು ಮನವಿ ಮಾಡಿದರು.
ಪತ್ರಕರ್ತರ ಸಂಘದ ಸದಸ್ಯರ ಕುಟುಂಬದವರು ಕೊರೋನಾ ಸೊಂಕಿನಿಂದ ಆಕ್ಸಿಜನ್ ಕೊರತೆ ಉಂಟಾದಲ್ಲಿ ಯುವ ಕಾಂಗ್ರೇಸ್ ಸಮಿತಿ ನೀಡಿರುವ ಆಮ್ಲಜನಕ ಸಾಂದ್ರಕಗಳನ್ನು ತುರ್ತು ಅವಶ್ಯಕತೆಗೆ ಸದ್ಬಳಿಸಿಕೊಳ್ಳಿ ಎಂದರು.


ಈ ಸಂದರ್ಭದಲ್ಲಿ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಬಿ.ವಿ. ಗೋಪಿನಾಥ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಚಂದ್ರಶೇಖರ್, ಖಜಾಂಚಿ ಎ.ಜಿ. ಸುರೇಶ್ ಕುಮಾರ್, ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಅಬ್ದುಲ್ ಲತೀಫ್,ಬ್ಲಾಕ್ ಕಾಂಗ್ರೆಸ್ ಘಟಕದ ಅಧ್ಯಕ್ಷ ದಿನೇಶ್, ಪ್ರಧಾನಕಾರ್ಯದರ್ಶಿ ಭರತರೈ, ಗ್ರಾಮಾಂತರ ಅಧ್ಯಕ್ಷ ನವೀದ್ ಪಾಷ, ತಾಲ್ಲೂಕು ಪ್ರಧಾನಕಾರ್ಯದರ್ಶಿ ಅಕ್ಮಲ್ ಬೇಗ್, ನಗರಘಟಕ ಅಧಕ್ಷ ಜುಲೇಧ್ ಖಾನ್ ಮತ್ತಿತರರು ಹಾಜರಿದ್ದರು
.