ವೈದ್ಯೆಯೇ ನವಜಾತ ಶಿಶುವನ್ನು ಕದ್ದಳು, ಯಾಕೆ? ಈಗ ವೈದ್ಯೆ ಸೆರೆ: ಬೆಂಗಳೂರು ಪೊಲೀಸರ ಯಶಸ್ವಿ ಕಾರ್ಯಾಚರಣೆ.

JANANUDI.COM NETWORK

[ನಂಬಿದರೆ ನಂಬಿ, ವೈದ್ಯೆಯೇ ನವಜಾತ ಶಿಶುವನ್ನು ಕದ್ದಳು, ಈಗಿನ ಕಾಲದಲ್ಲಿ ಯಾರನ್ನು ನಂಬಬಹುದು,ನಂಬಬಾರದು ಎಂಬ ಸಂದ್ಘಿದ ಪರಿಸ್ಥಿತಿಯಲ್ಲಿ ನಾವು ಬದುಕುತಿದ್ದೇವೆ,ಸಮಾಜದಲ್ಲಿ ಎಲ್ಲಾ ರೀತಿಯ ಮೋಸ ವಂಚನೆ ನಡೆಯುತ್ತದೆ , ಹಣದಾಶೆಯಿಂದ ಮನುಷ್ಯತ್ವವೇ ಮರೆಯಾಗುತಿದೆ ಅನ್ನಿಸುತ್ತದೆ]

ಬೆಂಗಳೂರು: ರಾಜಧಾನಿಯ ಚಾಮಪರಾಜಪೇಟೆ ಬಿಬಿಎಂಪಿ ಆಸ್ಪತ್ರೆಯಲ್ಲಿ ನಡೆದಿದ್ದ ನವಜಾತ ಶಿಶು ಕಳವು,ಕಳೆದ ಒಂದು ವರ್ಷದ ಹಳೆ ಪ್ರಕರಣ ಭೇದಿಸುವಲ್ಲಿ ಬೆಂಗಳೂರು  ದಕ್ಷಿಣ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದು, ಈ ಸಂಬಂಧ ಒರ್ವ ವೈದ್ಯೆಯನ್ನು ಬಂಧಿಸಿದ್ದಾರೆ.

   ಏನಿದು ಪ್ರಕರಣ

 ಜಗಜೀವನ್ರಾಮ್ ನಗರದ ಹುಸ್ನಾ ಬಾನು ಎಂಬಾಕೆ 2020ರ ಮೇ 29 ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಳು. ಆದರೆ ಕೆಲವೆ ಕ್ಷಣದಲ್ಲಿ ಮಗು ಕಾಣೆಯಾಗಿತ್ತು ದಂಪತಿಗಳು ದೂರು ದಾಖಲಿಸಿದ್ದರು.  ವರ್ಷ ಕಳೆದರೂ ಮಗು ಪತ್ತೆಯಾದ ಹಿನ್ನೆಲೆ ಬೇಸರಗೊಂಡ ಪೋಷಕರು ಹೈ ಕೋರ್ಟಿಗೆ ಮೊರೆ ಹೋಗಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಶೀಘ್ರವೇ ಮಗು ಪತ್ತೆ ಹಚ್ಚುವಂತೆ ಸೂಚಿಸಿತ್ತು. ಸಿಸಿಟಿವಿ ದೃಶ್ಯಾವಳಿಗಳನ್ನು ಆದರಿಸಿ ತನಿಖೆ ನಡೆಸಿ, ಕರೆಗಳ ಪರಿಶೀಲನೆ ನಡೆಸಿದ್ದ ವೇಳೆ ಕೆಲವು ಮಾಹಿತಿ ಸಿಕ್ಕಿದೆ….

     ನಗರದ ಬನ್ನೇರುಘಟ್ಟ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಯ ಮನೋವೈದ್ಯೆ ಡಾ.ರಶ್ಮಿ (34) ಬಂಧಿತ ಆರೋಪಿ. ವಿಚಾರಣೆ ನಡೇಸಿದಾಗ  ಅಪಹರಿಸಿ ನವಜಾತ ಶಿಶುವನ್ನು 15 ಲಕ್ಷ ರೂ.ಗಳಿಗೆ ಕೊಪ್ಪಳದ ಮೂಲದ ದಂಪತಿಗೆ ಮಾರಾಟ ಮಾಡಿದೆ, ಎಂದು ಬಾಯಿ ಬಿಟ್ಟಳು’ ಎಂದು ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ಹೇಳಿದ್ದಾರೆ.

ಮಗುವನ್ನು ಕೊಂಡ ಕೊಪ್ಪಳ ಮೂಲದ ದಂಪತಿಗೆ ಒಂದು ಬುದ್ದಮಾಂದ್ಯ ಮಗುವಿತ್ತು. ಅದರ ಚಿಕಿತ್ಸೆಗೆ ಅವರು 2014ರಲ್ಲಿ ಹುಬ್ಬಳ್ಳಿಯ ಸುತ್ತೂರಿನಲ್ಲಿರುವ ಆಸ್ಪತ್ರೆಗೆ ತೆರಳಿದ್ದಾಗ, ಅಲ್ಲಿ ಅವರಿಗೆ ಡಾ.ರಶ್ಮಿ ಪರಿಚಯವಾಗಿ, ಆ ಮಗುವಿವ ಚಿಕಿತ್ಸೆ ಡಾ.ರಶ್ಮಿ ಮಾಡುತಿದ್ದಳು. ಹೀಗೆ ಒಡನಾಟ ಬೆಳೆದ ಬಳಿಕ ರಶ್ಮಿ, ದಂಪತಿಗೆ ನೀವು ಭಯಪಡುವ ಅಗತ್ಯವಿಲ್ಲ. ಮತ್ತೊಂದು ಮಗು ನೀವು ಪಡೆಯಬಹುದು. ವೀರ್ಯಾಣು ಮತ್ತು ಅಂಡಾಣು ತೆಗೆದುಕೊಂಡು ಬಾಡಿಗೆ ತಾಯಿ ಹೊಟ್ಟೆಯಲ್ಲಿ ಇಟ್ಟರೆ ನಿಮ್ಮದೇ ಮಗು ಹುಟ್ಟುತ್ತದೆ, ಅದಕ್ಕಾಗಿ 15 ಲಕ್ಷ ರೂ. ಖರ್ಚಾಗುತ್ತದೆ. ಮಗು ಜನಿಸಿದ ಬಳಿಕ ನಿಮಗೆ ತಂದುಕೊಡುತ್ತೇನೆಂದು ತಿಳಸಿ,ಹಣ ಪಡೆಸಿದ್ದರು. ಇತ್ತ ಬಾಡಿಗೆ ತಾಯಿಂದ ಮಗು ಪಡೆಯದೆ, ವೈದ್ಯೆ ಶಿಶುವನ್ನೆ ಕದ್ದು ಕೊಟ್ಟಿದ್ದಳು.