ಟಾರ್ಜನ್ ಖ್ಯಾತಿಯ ಸಿನಿಮಾ ನಟ ಜೋ ಲಾರಾ, ಪತ್ನಿ ಸೇರಿ ವಿಮಾನ ದುರಂತದಲ್ಲಿ ಏಳು ಮಂದಿ ಸಾವು

JANANUDI.COM NETWORK

ವಾಷಿಂಗ್ಟನ್: ಬಾಲಿವುಡ್ ಸಿನಿಮಾದ ಸ್ಟಾರ್ ನಟ ಟಾರ್ಜನ್ ಜೋ ಲಾರಾ 58 ವರ್ಷ, ಮತ್ತು ಆತನ ಪತ್ನಿ ಗ್ವೆನ್ ಶಾಂಬ್ಲಿನ್ ಸೇರಿದಂತೆ ಒಟ್ಟು ಏಳು ಮಂದಿ ಅಮೆರಿಕದ ನ್ಯಾಶ್ವಿಲ್ಲೆ ನಗರದ ಸರೋವರದ ಬಳಿ ವಿಮಾನ ದುರಂತದಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

    ಫ್ಲೋರಿಡಾದ ಪಾಮ್ ಬೀಚಿನ  ಸ್ಮಿರ್ನಾ, ಟೆನ್ನೆಸೀ ವಿಮಾನ ನಿಲ್ದಾಣದಿಂದ ಹೊರಟ ಸ್ವಲ್ಪ ಸಮಯದಲ್ಲಿಯೇ ಸಣ್ಣ ಬ್ಯುಸಿನೆಟ್ ಜೆಟ್ ವಿಮಾನ ಪತನಗೊಂಡಿರುವುದಾಗಿ ಫ್ಲೋರಿಡಾದ ರುದರ್ ಫೋರ್ಡ್ ಕೌಂಟಿಯ ಅಗ್ನಿ ಮತ್ತು ರಕ್ಷಣಾ ತಂಡ(ಆರ್ ಸಿಎಫ್ ಆರ್) ಫೇಸ್ ಬುಕ್ ನಲ್ಲಿ ವಿವರಿಸಿದೆ.

ವಿಮಾನದಲ್ಲಿ ಬಾಲಿವುಡ್ ನಟ ಲಾರಾ ಸೇರಿದಂತೆ ಏಳು ಮಂದಿ ಇದ್ದಿರುವುದಾಗಿ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ಖಚಿತಪಡಿಸಿರುವುದಾಗಿ ಸಿಎನ್ ಎನ್ ವರದಿ ಮಾಡಿದೆ. ಶನಿವಾರ ರಾತ್ರಿಯಿಂದ ಶೋಧ ಮತ್ತು ರಕ್ಷಣಾ ಕಾರ್ಯ ನಡೆಸಲಾಗುತ್ತಿದೆ ಎಂದು ಆರ್ ಸಿಎಫ್ ಆರ್ ಕಮಾಂಡರ್ ಕ್ಯಾಪ್ಟನ್ ಜೋಶುವಾ ಸ್ಯಾಂಡರ್ಸ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ವಿಮಾನವು ನ್ಯಾಶ್ವಿಲ್ಲೆಯಿಂದ ದಕ್ಷಿಣಕ್ಕೆ 12 ಮೈಲಿ (19 ಕಿಲೋಮೀಟರ್) ದೂರದಲ್ಲಿರುವ ಪರ್ಸಿ ಪ್ರೀಸ್ಟ್ ಸರೋವರಕ್ಕೆ ಭಾನುವಾರ ಮಧ್ಯಾಹ್ನ ಮೈದಾನದ ಸುಮಾರು ಅರ್ಧ ಮೈಲು ದೂರದಲ್ಲಿ ವಿಮಾನದ ಹಲವಾರು ತುಂಡುಗಳು ಮತ್ತು ಮಾನವನ ಅವಶೇಷಗಳು ರಕ್ಷಣಾ ಕಾರ್ಯಾಚರಣೆ ವೇಳೆ ಪತ್ತೆಯಾಗಿರುವುದಾಗಿ ಆರ್ ಸಿಎಫ್ ಆರ್ ತಿಳಿಸಿದೆ.

  1989ರ ಟೆಲಿವಿಷನ್ ಸಿನಿಮಾ “ಟಾರ್ಜನ್ ಇನ್ ಮ್ಯಾನಹಟ್ಟನ್” ನಲ್ಲಿ ಲಾರಾ ನಟಿಸಿದ್ದರು. ನಂತರ ಟೆಲಿವಿಷನ್ ಸರಣಿಯಾದ ಟಾರ್ಜನ್; ದ ಎಪಿಕ್ ಅಡ್ವೆಂಚರಸ್ ನಲ್ಲಿ ನಟಿಸುವ ಮೂಲಕ ಜನಪ್ರಿಯಗೊಂಡಿದ್ದರು

ವಿಮಾನದ ಅವಶೇಷಗಳು