JANANUDI.COM NETWORK
ಉಡುಪಿ : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಲಾಕ್ ಡೌನ್ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಸಾಲ ತೆಗೆದುಕೊಂಡವರ ಮೇಲೆ ಯಾವುದೇ ರೀತಿಯ ಸಾಲ ವಸೂಲಾತಿಯ ಬಗ್ಗೆ ಉಡುಪಿ ಜಿಲ್ಲೆಯಲ್ಲಿ ಒತ್ತಡ ಹೇರುವಂತಿಲ್ಲ. ಸಾಲ ಮರುಪಾವತಿಗೆ ಒತ್ತಾಯಿಸಿದಲ್ಲಿ, ಅಂತವರ, ಅಂತಹ ಸಂಸ್ಥೆಯ ವಿರುದ್ದ ಪ್ರಕರಣ ದಾಖಲಿಸಲಾಗುವುದು, ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಸಿದ್ದಾರೆ.
ಲಾಕ್ ಡೌನ್ ಹಿನ್ನೆಲೆಯಲ್ಲಿ ವ್ಯಾಪರ ವಹಿವಾಟುಗಳು ನಿಂತು ಹೋಗಿದ್ದು. ಜನರು ಸಂಕಷ್ಟದಲ್ಲಿದ್ದಾರೆ. ಮೈಕ್ರೋ ಫೈನಾನ್ಸ್ ಗಳು, ಸಹಕಾರಿ ಸಂಘಗಳು ಹಾಗೂ ಇತರೆ ಹಣಕಾಸು ಸಂಸ್ಥೆಗಳ ಸಾಲ ವಸೂಲಾತಿದಾರರು, ಮನೆ ಮನೆಗೆ ಭೇಟಿ ನೀಡುವುದನ್ನು ಜೂನ್ 6 ರವರೆಗೆ ನೀಶೆಧಿಸಲಾಗಿದೆ.
ಹಾಗೇ ಮೈಕ್ರೋ ಫೈನಾನ್ಸ್, ಸಹಕಾರಿ ಸಂಘಗಳು/ ಇತರೆ ಹಣಕಾಸು ಸಂಸ್ಥೆಗಳು ಸಾಲಗಾರರಿಗೆ ಸಾಲ ಮರು ಪಾವತಿ ಮಾಡಲು ಒತ್ತಡ ಹೇರುವಂತಿಲ್ಲ, ಒಂದು ವೇಳೆ ಸಾಲ ಮರುಪಾವತಿ ಮಾಡಲು ಒತ್ತಡ ಹೇರಿದ್ದಲ್ಲಿ , ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ ಸೂಕ್ತ ಕ್ರಮ ಕೈಗೊಳ್ಳಲು ನೋಡೆಲ್ ಅಧಿಕಾರಿಗಳನ್ನಾಗಿ , ರುದ್ರೇಶ್ ಡಿ.ಸಿ , ಲೀಡ್ ಡಿಸ್ಟ್ರಿಕ್ಟ್ ಮ್ಯಾನೆಜರ್ (9449860858) ಮತ್ತು ಪ್ರವೀಣ್ ಬಿ.ನಾಯಕ್, ಸಹಕಾರ ಸಂಘಗಳ ಉಪನಿಬಂಧಕರು (9448633338) ಇವರನ್ನು ನೇಮಿಸಲಾಗಿದ್ದು,ಇವರಿಗೆ ದೂರುಗಳನ್ನು ನೀಡಬಹುದಾಗಿದೆ.
ಸಾರ್ವಜನಿಕರಿಂದ ಸ್ವೀಕೃತವಾದ ಸಾಲ ಮರುಪಾವತಿ ಕುರಿತು ದೂರುಗಳಿಗೆ ತಕ್ಷಣವೇ ಈ ನೋಡೆಲ್ ಅಧಿಕಾರಿಗಳು ಸ್ಪಂದಿಸುವುದು. ಮೈಕ್ರೋ ಫೈನಾನ್ಸ್ಗಳು, ಸಹಕಾರಿ ಸಂಘಗಳು, ಇತರೆ ಹಣಕಾಸು ಸಂಸ್ಥೆಗಳು ಹಾಗೂ ಸಾರ್ವಜನಿಕರ ಮಧ್ಯೆ ಸಮನ್ವಯತೆಯಿಂದ ಯಾವುದೇ ಗೊಂದಲ ಹಾಗೂಸಂಘರ್ಷ ಉಂಟಾಗದಂತೆ ಸಾರ್ವಜನಿಕ ಸಮಸ್ಯೆಗಳಿಗೆ ಪರಿಹಾರ ನೀಡವುದು ಇವರ ಕರ್ತವ್ಯವಾಗಿದೆ’ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ