ಆಂಬ್ಯುಲೆನ್ಸ್ ಗಳ ಧನ ದಾಹ : ಕಾರಿನಲ್ಲಿ ಮಗಳ ಶವ ಸಾಗಿಸಿದ ತಂದೆ

JANANUDI.COM NETWORK


ಜೈಪುರ : ಮಗಳ ಶವವನ್ನು ಆಂಬುಲೆನ್ಸಲ್ಲಿ ಸಾಗಿಸಲು, ಅಂಬುಲೆನ್ಸವನು ದುಪ್ಪಟ್ಟು ಹಣ ಕೇಳಿದ ಆತ ಕೇಳಿದ ಹಣ ನೀಡಲು ಸಾಧ್ಯವಾಗದೆ, ಹತಂದೆಯೋರ್ವನು ತನ್ನ ಮಗಳ ಶವವನ್ನು ಕಾರಿನಲ್ಲಿಯೇ ತೆಗೆದುಕೊಂಡು ಹೋದ ಘಟನೆ, ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.
ಕೋವಿಡ್ ಸೋಂಕಿನಿಂದ ಮೃತ ಪಟ್ಟವರ ಶವಗಳನ್ನು ಸಾಗಿಸಲು ಆಂಬುಲೆನ್ಸ್ ನವರು ದುಪ್ಪಟ್ಟು ಹಣ ಪಡೆಯುವ ಹಲವಾರು ಘಟನೆಗಳು ಮುಂದುವರೆದಿದ್ದು. ರಾಜಸ್ಥಾನದ ಜೈಪುರದಲ್ಲಿ ಕೇವಲ 85 ಕಿ.ಮೀ ದೂರ ಶವ ಸಾಗಿಸಲು ಆಂಬುಲೆನ್ಸ್ ಡ್ರೈವರ್ ಗಳು 35 ಸಾವಿರ ರೂ. ಬೇಡಿಕೆ ಇಟ್ಟಿದ್ದು ತಂದೆ ಹತಶನಾಗಿ ಕಾರಲ್ಲೆ ಶವವನ್ನು ಕೊಂಡುಹೋಗುವ ಪರಿಸ್ಥಿತಿ ನಿರ್ಮಾಣವಾಯಿತು.
ಕೋವಿಡ್ ಸೋಂಕಿನಿಂದ ಬಳಲುತ್ತಿದ್ದ ಸೀಮಾ ಎಂಬುವರನ್ನು ಜೈಪುರದಾ ಕೋಟಾದಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಆಕೆ ಚಿಕಿತ್ಸಗೆ ಸ್ಪಂದಿಸದೆ ಭಾನುವಾರ ಕೊನೆಯುಸಿರೆಳೆದಿದ್ದಳು. ಈ ವೇಳೆ ಶವವನ್ನು ತಮ್ಮೂರಿಗೆ ತೆಗೆದುಕೊಂಡು ಹೋಗಲು ಆಂಬುಲೆನ್ಸ್ ನವರನ್ನು ಸಂಪರ್ಕಿಸಿದಾಗ, ಅವರು ಹೆಚ್ಚಿಗೆ ಹಣಕ್ಕೆ ಬೇಡಿಕೆ ಇಟ್ಟಿದ್ದು. ಅಷ್ಟು ಹಣ ಕೊಡಲು ಶಕ್ತಿ ಇಲ್ಲದ ಮೃತ ಯುವತಿಯ ತಂದೆ ಕೊನೆಗೆ ತನ್ನ ಕಾರಿನ ಮುಂದಿನ ಸೀಟಿನಲ್ಲಿ ಮಗಳ ಹೆಣ ಇಟ್ಟುಕೊಂಡು ಹೋಗಿದ್ದಾನೆ.
ಈ ಘಟನೆಯ ಬಗ್ಗೆ ಈಗ ಫೋಟೊ ಹಾಗೂ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಜೈಪುರಾದ ಕೋಟಾ ಜಿಲ್ಲಾಧಿಕಾರಿ ಉಜ್ವಲ್ ರಾಥೋಡ್ ತನಿಖೆಗೆ ಆದೇಶಿಸಿದ್ದಾರೆ. ಆಂಬ್ಯುಲೆನ್ಸ್ ಡ್ರೈವರ್ ಗಳ ಕುರಿತು ವಿವರ ನೀಡುವಂತೆ ಮೃತ ಯುವತಿಯ ತಂದೆಗೆ ತಿಳಿಸಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಮೃತ ಯುವತಿಯ ತಂದೆ, ಮಗಳ ಶವ ಸಾಗಿಸಲು ಆಂಬ್ಯುಲೆನ್ಸ್ ನವರು 16,000 ರಿಂದ 35000 ರೂ. ಕೇಳಿದರು. ಅಷ್ಟೊಂದು ಹಣ ನಮ್ಮ ಬಳಿ ಇರಲಿಲ್ಲ. ಹಾಗಾಗಿ ಅನಿವಾರ್ಯವಾಗಿ ನನ್ನ ಕಾರಿನ ಮುಂದಿನ ಸೀಟಿನಲ್ಲಿ ಇಟ್ಟುಕೊಂಡು ಊರಿಗೆ ಹೋಗಬೇಕಾಯ್ತೆಂದು ’ಎಂದಿದ್ದಾರೆ.