ರಾಜ್ಯದ ವಿವಿಧ ಪ್ರಗತಿಪರ ಸಂಘಟನೆಗಳ ಸಹಬಾಗಿತ್ವದಲ್ಲಿ ‘ಜನಾಂದೋಲನ ಸಮಿತಿ’ ಯ ಅಡಿಯಲ್ಲಿ ‘ನಾವು ಬದುಕಬೇಕು’

JANANUDI.COM NETWORK

ಕುಂದಾಪುರ,ಮೇ.24; ರಾಜ್ಯದ ವಿವಿಧ ಪ್ರಗತಿಪರ ಸಂಘಟನೆಗಳ ಸಹಬಾಗಿತ್ವದಲ್ಲಿ ‘ಜನಾಂದೋಲನ ಸಮಿತಿ’ ಯ ಅಡಿಯಲ್ಲಿ ‘ನಾವು ಬದುಕಬೇಕು’ಎಂಬ ಪ್ರತಿಭಟನಾ ಕಾರ್ಯಕ್ರಮವು ಇಂದು ಬೆಳಿಗ್ಗೆ 8.30 ರಿಂದ 10.30 ರ ಅವಧಿಯಲ್ಲಿ ರಾಜ್ಯದ ಎಲ್ಲಾ ಗ್ರಾಮದಲ್ಲಿಯೂ ನಡೆಯಲಿದೆ.

ನಾವು ಮಾಡಬೇಕಾದುದು ಇಷ್ಟೇ: ಖಾಲಿ ಕಾಗದದಲ್ಲಿ ದೊಡ್ಡದಾಗಿ ‘ನಾವು ಬದುಕಬೇಕು’ ಎಂದು ದಪ್ಪ ಅಕ್ಷರದಲ್ಲಿ ಬರೆದ ಪೋಸ್ಟರ್ ಹಿಡಿದು ನಮ್ಮ ನಮ್ಮ ಮನೆಯ ಬಾಗಿಲಲ್ಲಿ ನಿಂತು ಫೋಟೋ ತಗೆದು ಬ್ಲಾಕ್ ಕಾಂಗ್ರೆಸ್ ಗ್ರೂಪಿಗೆ ಹಾಕೋಣ! ಈ ಫೋಟೋವನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಮೂಲಕ ರಾಜ್ಯದ ಜನಾಂದೋಲನ ಸಮಿತಿಗೆ ತಲುಪಿಸಲಾಗುವುದು
ಬನ್ನಿ ನಾವೂ ಕೈಜೋಡಿಸೋಣ… ನಮ್ಮ ಹಕ್ಕುಗಳನ್ನು ಪಡೆಯೋಣ!


ಬೇಡಿಕೆಗಳು:
*ಕೊರೊನಾ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಸರ್ಕಾರ ಭರಿಸಬೇಕು ಹಾಗೂ ಸರ್ವರಿಗೂ ತ್ವರಿತಗತಿಯಲ್ಲಿ ವ್ಯಾಕ್ಸಿನ್ ವ್ಯವಸ್ಥೆ ಮಾಡಬೇಕು.
*ಗ್ರಾಮ ಪಂಚಾಯತ್ ಮಟ್ಟದಲ್ಲೂ ಕೋವಿಡ್ ಕೇರ್ ಸೆಂಟರ್ ಆರಂಬಿಸಬೇಕು.
*ದುಡಿವ ವ್ಯಕ್ತಿಯನ್ನು ಕಳೆದುಕೊಂಡ ಸಂಸಾರಕ್ಕೆ ಐದು ಲಕ್ಷ ರೂಪಾಯಿ ಪರಿಹಾರ ಬೇಕು…
ಪೋಸ್ಟರ್ ಹಿಡಿದು ಕುಂದಾಪುರ ನಗರದಲ್ಲಿ ಇಂದು ನಡೆದ ಪ್ರತಿಭಟನೆಯಲ್ಲಿ ವಿನೋದ್ ಕ್ರಾಸ್ಟೊ, ದೇವಕಿ ಸಣ್ಣಯ್ಯ, ಗಣೇಶ ಶೇರಿಗಾರ್, ಕೆ.ಜಿ.ನಿತ್ಯಾನಂದ, ಕುಮಾರ ಖಾರ್ವಿ, ಜ್ಯೋತಿ ಡಿ.ನಾಯ್ಕ, ಕೋಡಿ ಸುನೀಲ್ ಪೂಜಾರಿ, ಕೇಶವ ಭಟ್, ಆಶಾ ಕರ್ವಾಲ್ಲೊ, ಶೋಭ ಸಚಿದಾನಂದ ಶಿವಕುಮಾರ್ ಕೆ. ಸ್ಟೀವನ್ ಡಿಕೋಸ್ತಾ, ರೋಶನ್ ಶೆಟ್ಟಿ, ಅಶೋಕ ಸುವರ್ಣ, ಅಬ್ದುಲ್ಲಾ ಕೋಡಿ, ಚಂದ್ರಶೇಖರ ಶೆಟ್ಟಿ, ಚಂದ್ರ ಅಮೀನ್, ಮುನಾಫ್, ಗಂಗಾಧರ ಶೆಟ್ಟಿ, ಕೆ.ಶಿವಕುಮಾರ್, ಸುನೀಲ್ ಪೂಜಾರಿ, ಶಸಿ ರಾಜ್,ಅಶ್ವಿನ್ ಕುಮಾರ್,ಡೋಲ್ಫಿ ಡಿಕೋಸ್ತಾ, ಶಿಶರ್ ಕುಮಾರ್ ಕೆ.,ಅರುಣ್ ಕುಮಾರ್, ಆಲೆಕ್ಸಾಂಡರ್ ಡೆಸಾ, ಸುರೇಶ್ ಕೆ. ಮುಂತಾದ ಬ್ಲಾಕ್ ಕಾಂಗ್ರೆಸ್ ಪುರಸಭಾ ವ್ಯಾಪ್ತಿಯ ಪದಾಧಿಕಾರಿಗಳು ಮತ್ತು ಸದಸ್ಯರು ಹಾಜರಿದ್ದರು.