ಕೋವಿಡ್ ಚಿಕಿತ್ಸಾ ಪ್ಲಾಸ್ಮಾ ವಿಧಾನವನ್ನು ಥೆರಪಿ ಕೈ ಬಿಟ್ಟ ಸರ್ಕಾರ: ವೈದ್ಯ ತಜ್ಞರಿಂದ ಸ್ವಾಗತ

ಪ್ಲಾಸ್ಮಾ ಥೆರಪಿಯಿಂದ ರೂಪಾಂತರಿ ವೈರಸ್ ಗಳ ಜನ್ಮ!!

JANANUDI.COM NETWORK


ನವದೆಹಲಿ:ಮೇ. ದೇಶದಲ್ಲಿ ಕೋವಿಡ್ 19 ಚಿಕಿತ್ಸೆಯಲ್ಲಿ ಪ್ಲಾಸ್ಮಾ ಥೆರಪಿಯನ್ನು ಯಶಸ್ವಿಯೆಂದು ನಂಬಿ ವೈದ್ಯರು ಸೋಂಕಿತರ ಮೇಲೆ ಪ್ಲಾಸ್ಮಾ ಥೆರೆಪಿ ಚಿಕಿತ್ಸೆಯನ್ನು ನೀಡುತಿದ್ದರು ಅದರೀಗ ದೇಶಾದ್ಯಂತ ಕೋವಿಡ್-19 ಪ್ರಕರಣಗಳಲ್ಲಿ ಈ ಪ್ಲಾಸ್ಮಾ ಬಳಕೆಯಿಂದಾಗಿ ಒಳ್ಳೆಯದಕ್ಕಿಂತ ಹೆಚ್ಚಿನ ಹಾನಿ ಸಂಭವಿಸುತ್ತಿದೆ ಎಂದು ಅನೇಕ ತಜ್ಞರು ಅಭಿಪ್ರಾಯಪಟ್ಟಿದ್ದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಈವಿಧಾನವನ್ನು ಕೈ ಬಿಡ ಬೇಕೆಂದು ಆಶಿಸಿದೆ. ಕೇಂದ್ರ ಸರ್ಕಾರದ ಈ ನಡೆಯನ್ನು ವೈದ್ಯಕೀಯ ತಜ್ಞರು ಸ್ವಾಗತಿಸಿದ್ದಾರೆ.
ದೇಶದಲ್ಲಿ ಕೋವಿಡ್ 19 ಚಿಕಿತ್ಸೆಗೆ ಸಂಬಂಧಿಸಿ ನಿಯಮಾವಳಿಗಳನ್ನು ಸರ್ಕಾರ ಸೋಮವಾರ ಪರಿಷ್ಕರಿಸಿದ್ದು, ಪ್ರಸ್ತುತ ಬಳಕೆಯಲ್ಲಿದ್ದ ಪ್ಲಾಸ್ಮಾ ಥೆರಪಿಯನ್ನು ಕೈಬಿಟ್ಟಿದೆ. ಇದು ಅನಿವಾರ್ಯದ ನಡೆ ಎಂದು ಹೇಳಿದ್ದಾರೆ.
ಈ ಕುರಿತಂತೆ ಮಾತನಾಡಿರುವ ದೆಹಲಿಯ ಗಂಗಾರಾಮ್ ಆಸ್ಪತ್ರೆಯ ಮುಖ್ಯಸ್ಥ ಡಾ.ಡಿಎಸ್ ರಾಣಾ ಅವರು, ಪ್ಲಾಸ್ಮಾ ಚಿಕಿತ್ಸೆಯು ಕೋವಿಡ್ ಸೋಂಕಿತರ ಮರಣ ಪ್ರಮಾಣವನ್ನು ತಗ್ಗಿಸುವಲ್ಲಿ ವಿಫಲವಾಗಿದೆ. ಹೀಗಾಗಿ ಈ ಚಿಕಿತ್ಸಾ ವಿಧಾನ ಫಲಪ್ರದವಲ್ಲ ಎಂಬುದು ಸಾಬೀತಾಗಿತ್ತು ಎಂದು ತಿಳಿಸಿದ್ದಾರೆ.


ಪ್ಲಾಸ್ಮಾ ಥೆರಪಿಯಿಂದ ರೂಪಾಂತರಿ ವೈರಸ್ ಗಳ ಜನ್ಮ!!


ಇದೇ ವೇಳೆ ಪ್ಲಾಸ್ಮಾ ಥೆರಪಿಯಿಂದ ರೂಪಾಂತರಿ ವೈರಸ್ ಗಳ ಜನ್ಮತಾಳುತ್ತಿವೆ ಎಂಬ ವಾದದ ಕುರಿತು ಮಾತನಾಡಿದ ಅವರು, ‘ಕೆಲವು ವಿಜ್ಞಾನಿಗಳು ಕೋವಿಡ್ ವೈರಸ್ ರೂಪಾಂತರಗಳು ಮತ್ತು ರೂಪಾಂತರಗಳನ್ನು ಹೊಂದಲು ಮತ್ತು ಉತ್ತೇಜಿಸಲು ಈ ಪ್ಲಾಸ್ಮಾ ಚಿಕಿತ್ಸೆ ಸಹಾಯ ಮಾಡುತ್ತಿದೆ’ ಎಂದು ಅಭಿಪ್ರಾಯ ಪಡಲಾಗಿದೆ
ಒಂದು ವರ್ಷದ ಅವಧಿಯಲ್ಲಿ ಮರಣದ ಪ್ರಮಾಣವನ್ನು ಈ ಪ್ಲಾಸ್ಮಾ ಚಿಕಿತ್ಸೆ ತಗ್ಗಿಸುವಲ್ಲಿ ವಿಫಲವಾಗಿದೆ. ಪ್ಲಾಸ್ಮಾ ಚಿಕಿತ್ಸೆ ವಿಧಾನದಿಂದ ಕೋವಿಡ್ ರೋಗ ಗುಣಪಡಿಸುವುದರಲ್ಲಿ ಹೆಚ್ಚಿನ ಪ್ರಯೋಜನ ಇಲ್ಲದೇ ಇರುವುದರಿಂದ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ಹೇಳಿದರು.
ಕೋವಿಡ್ 19 ಸಂಬಂಧ ಐಸಿಎಂಆರ್ ನ್ಯಾಶನಲ್ ಟಾಸ್ಕ್ ಫೋರ್ಸ್ ಕಳೆದ ವಾರ ಸಭೆ ಸೇರಿ ಚರ್ಚಿಸಿದ್ದು, ಈ ಸಂದರ್ಭದಲ್ಲಿ ಪ್ಲಾಸ್ಮಾ ಥೆರಪಿಯನ್ನು ಕೈಬಿಡುವ ನಿರ್ಧಾರ ಕೈಗೊಳ್ಳಲಾಗಿದ್ದು ಹಲವಾರು ಪ್ರಕರಣಗಳಲ್ಲಿ ಪ್ಲಾಸ್ಮಾ ಬಳಕೆಯಿಂದ ಯಾವುದೇ ಪ್ರಯೋಜನವಾಗಿಲ್ಲ, ಅಲ್ಲದೆ ಸಮರ್ಪಕ ವಿಧಾನದಲ್ಲಿ ಬಳಕೆಯಾಗದ ಕಾರಣ ಅದನ್ನು ಕೈಬಿಟ್ಟಿದ್ದು, ಪರಿಷ್ಕೃತ ನಿಯಮಾವಳಿಯನ್ನು ಸರ್ಕಾರ ಪ್ರಕಟಿಸಿದೆ.
‘ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್)’ ಅಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿದ್ದು, ವಯಸ್ಕ ಕೋವಿಡ್ 19 ರೋಗಿಗಳ ಚಿಕಿತ್ಸೆ ವಿಧಾನದ ಮಾರ್ಗಸೂಚಿ ಪರಿಷ್ಕರಿಸಲಾಗಿದೆ, ದೇಶದಲ್ಲಿ ಇನ್ನು ಪ್ಲಾಸ್ಮಾ ಚಿಕಿತ್ಸೆ ಬಳಸುವಂತಿಲ್ಲ. ಈ ಮೊದಲ ನಿಯಮಾವಳಿಯಲ್ಲಿ ಕೋವಿಡ್ 19 ಚಿಕಿತ್ಸೆಯಲ್ಲಿ ದಾನಿಗಳ ನೆರವಿನಿಂದ ಪಡೆದ ಪ್ಲಾಸ್ಮಾವನ್ನು ವೈದ್ಯರು ಬಳಸಿಕೊಳ್ಳಲು ಅವಕಾಶವಿತ್ತು ಈಗ ಸಾಧ್ಯವಿಲ್ಲ. ವೈದ್ಯರ ಈ ಚಿಕಿತ್ಸಾ ಪ್ರಯತ್ನದಿಂದ ಅಡ್ಡ ಪರಿಣಾಮಗಳಿಂದ ಹಲವು ಸಾವು ಕೂಡ ಸಂಭಸಿವೆ ಎಂದು ಹೇಳಲಾಗುತಿತ್ತು.