JANANUDI.COM NETWORK
ಕುಂದಾಪುರ,ಮೇ.15: ತೌಕ್ತೆ ಚಂಡಮಾರುತದಲ್ಲಿ ಕುಂದಾಪುರ ಪುರಸಭೆ ವ್ಯಾಪ್ತಿಯಲ್ಲಿಯೂ ಅನಾಹುತಗಳಾಗಿವೆ. ರಭಸವಾದ ಗಾಳಿ ಮಳೆಗೆ ಹಲವಾರು ಮರಗಳು ಮತ್ತು ವಿದ್ಯುತ್ ಕಂಬಗಳು ಉರುಳಿವೆ. ನಿನ್ನೆ ಕುಂದಾಪುರ ಚರ್ಚಿನ ವಠಾರದಲ್ಲಿ ಮರಬಿದ್ದರೆ, ಇಂದು ಮುಂಜಾನೆ 3.30 ಕ್ಕೆ ಕುಂದಾಪುರದಲ್ಲಿ ಚಿಕ್ಕನಸಾಲು ರಸ್ತೆಯಲ್ಲಿನ ಪಿಯುಸ್ ಕರ್ವಾಲ್ಲೊ ಎಂಬವರ ಮನೆ ಮೇಲೆ ಬ್ರಹತ್ ಮರ ಮನೆಯ ಮೇಲೆ ಉರುಳಿದೆ, ಬೆಳಗ್ಗಿನ ಜಾವ ಮನೆಯವರು ನಿದ್ರೆ ಮಾಡುವ ಹೊತ್ತಿನಲ್ಲಿ ಮರ ಮನೆ ಮೇಲೆ ಎರಗಿ, ಮನೆಗೆ ತುಂಬ ಹಾನಿಯಾಗಿದೆ.ಇತ್ತೀಗಷ್ಟೆ ಮನೆ ಮಾಡು ಹೊಸತಾಗಿ ನಿರ್ಮಿಸಿದ್ದು, ಹಾನಿಯಾಗಿ ನಷ್ಟ ಉಂಟಾಗಿದೆ. ಮನೆ ಸಮೀಪವಿದ್ದ ಹಲಸಿನ ಮರ ಕೂಡ ಗಾಳಿ ಮಳೆಗೆ ವಾಲಿದ್ದು, ಬೀಳುವ ಸ್ಥಿತಿಯಲ್ಲಿದೆ ಪುರಸಭಾ ಸದಸ್ಯ ಸಂತೋಷ್ ಮತ್ತು ಪುರಸಭಾ ಅಧಿಕಾರಿಗಳು ಭೇಟಿ ಮಾಡಿದ್ದಾರೆ. ಬರೆಕಟ್ಟು ಬೈಲು ಪರಿಸರದಲ್ಲಿ ವಿದ್ಯುತ್ ಕಂಬದ ಮೇಲೆ ಮರ ಬಿದ್ದು ವಿದ್ಯುತ್ ಕಂಬಕ್ಕೆ ಹಾನಿಯುಂಟಾಗಿದೆಯೆಂದು ವರದಿಯಾಗಿದೆ.