JANANUDI.COM NETWORK
ಭಾರತವು ಕೋವಿಡ್ -19 ರ ಎರಡನೇ ಅಲೆಯಲ್ಲಿ ಸಾವು ನೋವಿನ ಸಂಕಷ್ಟದಲ್ಲಿರುವಾಗ ಆನೇಕ ರೀತಿಯ ಹ್ರದಯ ವಿದ್ರಾವಕ ದುಃಖದ ಘಟನೆಗಳು ನಡೆಯುತ್ತಾ ಇವೆ. ಇದೀಗ ಪಂಜಾಬಿನ ಗ್ರೇಟರ್ ನೋಯ್ಡಾದ ಪಶ್ಚಿಮದ ಜಲಾಲ್ಪುರ ಗ್ರಾಮದಲ್ಲಿ ಕೊರೊನಾ ರೋಗ ತಾಂಡವ ಆಡುತ್ತಿದೆ. ಈ ಮಾರಣಾಂತಿಕ ಕಾಯಿಲೆಯಿಂದ ನೋಯ್ಡಾ ಗ್ರಾಮಗಳಲ್ಲಿ 14 ದಿನಗಳಲ್ಲಿ 18 ಸಾವುಗಳು ಸಂಭವಿಸಿವೆ.
ಅದರಲೊಂದು ಹ್ರದಯ ತಲ್ಲಣ ಗೊಳ್ಳುವ ಘಟನೆ ನಡೆದಿದೆ. ನೋಯ್ಡಾದಲ್ಲಿ ಒಂದೇ ಕುಟುಂಬದ ಇಬ್ಬರು ಗಂಡು ಮಕ್ಕಳನ್ನು ಒಬ್ಬರ ಹಿಂದೊಬ್ಬರಂತೆ ಕೊರೊನಾಕ್ಕೆ ಬಲಿಯಾದ ಘಟನೆ ನೋಯ್ಡಾ ಪಶ್ಚಿಮದ ಜಲಾಲ್ ಪುರ ಗ್ರಾಮದಲ್ಲಿ ನಡೆದಿದ್ದು, ಇಲ್ಲಿನ ಜಲಾಲ್ ಪುರ ಗ್ರಾಮದ ಅವ್ತಾರ್ ಸಿಂಗ್ ಎಂಬವರ ಪುತ್ರ ಪಂಕಜ್ ಇದ್ದಕ್ಕಿದ್ದಂತೆಯೇ ಅಸ್ವಸ್ಥಗೊಂಡು ಸಾವನ್ನಪ್ಪಿದ್ದಾನೆ. ಅವನನ್ನು ಸ್ಮಶಾನಕ್ಕೆ ತೆಗೆದುಕೊಂಡು ಹೋಗಿ ಅವನ ಅಂತ್ಯಕ್ರಿಯೆ ಮುಗಿಸಿ ಅವ್ತಾರ್ ಮನೆಗೆ ಬರುವಷ್ಟರಲ್ಲಿ,ಆತನ ಮತ್ತೊಬ್ಬ ಮಗ ದೀಪಕ್ ಕೂಡ ಕೊರೊನಾಕ್ಕೆ ಬಲಿಯಾದ ಕರುಣಾಜನಕ ಘಟನೆ ನೆಡೆದು, ಹೆತ್ತವರು ಬೆಳೆದು ನಿಂತ ಮಕ್ಕಳನ್ನು ಕಳೆದುಕೊಂಡು ಕಣ್ಣಿರಲ್ಲಿ ಮುಳುಗಿದ್ದಾರೆ.