ಶ್ರೀನಿವಾಸಪುರ ಕೊರೊನಾ ಸೋಂಕು ತಡೆಯಲು ಲಸಿಕೆ ಕಡ್ಡಾಯವಾಗಿ ಹಾಕಿಸಿಕೊಳ್ಳ ಬೇಕು; ಅರಣ್ಯಾಧಿಕಾರಿ ಸುರೇಶ್ ಬಾಬು ತಿಳಿಸಿದರು.

JANANUDI.COM NETWORK

ಶ್ರೀನಿವಾಸಪುರ:ಕರೋನ ಸೋಂಕು ತಡೆಯಲು ಲಸಿಕೆ ಕಡ್ಡಾಯವಾಗಿ ಹಾಕಿಸಿಕೊಳ್ಳಬೇಕೆಂದು ವಲಯಅರಣ್ಯಾಧಿಕಾರಿ ಸುರೇಶ್ ಬಾಬು ತಿಳಿಸಿದರು.
ಪಟ್ಟಣದಅರಣ್ಯಇಲಾಖೆಯಕಚೇರಿಯಆವರಣದಲ್ಲಿ ಕೋ-ವ್ಯಾಕ್ಸಿನ್ ಲಸಿಕೆ ನೀಡಲು ಚಾಲನೆ ನೀಡಿ ಮಾತನಾಡಿದ ಸುರೇಶ್ ಬಾಬು, ಲಸಿಕೆ ಹಾಕಿಸಿಕೊಳ್ಳಲು ಯಾವುದೇ ಭಯ ಬೇಡ, ಇದರಿಂದತೊಂದರೆಉಂಟಾಗುವುದಿಲ್ಲ. ಇಡೀದೇಶವನ್ನು ಮಾರಕವಾಗಿಕಾಡುತ್ತಿರುವಕರೋನ ಸೋಂಕನ್ನುದೇಶದಿಂದಇಮ್ಮೆಟ್ಟಿಸಲು ಪ್ರತಿಯೊಬ್ಬರೂಲಸಿಕೆಯನ್ನು ಕಡ್ಡಾಯವಾಗಿ ಹಾಕಿಸಿಕೊಳ್ಳಬೇಕೆಂದು ತಿಳಿಸಿದರು.
ಮೊದಲು ಹಲವು ಜನರಲ್ಲಿಈ ಲಸಿಕೆಬಗ್ಗೆ ಅನುಮಾನಗಳು ಇದ್ದವು, ಈಗ ಅದು ನಿಧಾನವಾಗಿದೂರ ಸರಿಯುತ್ತಿದೆ. ಲಸಿಕೆ ಹಾಕಿಸಿಕೊಂಡರೆÀ ಸೋಂಕು ಹಬ್ಬಿದರು ಹೆಚ್ಚು ಪರಿಣಾಮ ಬೀರದು, ಯಾವುದೆಅಡ್ಡ ಪರಿಣಾಮಉಂಟಾಗುವುದಿಲ್ಲ ಎಂಬುದು ಈಗಾಗಲೆ ಸಾಬೀತಾಗಿದೆಎಂದು ವಿವರಿಸಿದರು. ಇದೆ ಸಮಯದಲ್ಲಿಅರಣ್ಯಇಲಾಖೆಯ 63 ಸಿಬ್ಬಂದಿ ಮತ್ತುಅವರಕುಟುಂಬದ ಸದಸ್ಯರು ಲಸಿಕೆಯನ್ನು ಹಾಕಿಸಿಕೊಂಡರು.
ಇದೆ ಸಂದರ್ಭದಲ್ಲಿಉಪವಲಯಅರಣ್ಯ ಅಧಿಕಾರಿಗಳು, ಅರಣ್ಯ ವೀಕ್ಷಕರು ಹಾಗೂ ಇಲಾಖೆಯ ಸಿಬ್ಬಂದಿ ವರ್ಗದವರು ಮತ್ತುಅವರಕುಟುಂಬಸ್ಥರು ಉಪಸ್ಥಿತರಿದ್ದರು
.