JANANUDI.COM NET WORK
ಬೆಂಗಳೂರು,ಮೇ. 12: ರಾಜ್ಯದಲ್ಲಿ ಕೊರೊನಾ ಲಸಿಕೆ ಅಭಾವದ ಹಿನ್ನೆಲೆಯಲ್ಲಿ 18 ವರ್ಷದಿಂದ 44ರ ವಯಸ್ಸಿನವರಿಗೆ ಮೇ ೧೪ ರಿಂದ ಕೊರೊನಾ ಲಸಿಕೆ ನೀಡುವುದನ್ನು ಸ್ಥಗಿತ ಸ್ಥಗಿತಗೊಳಿಸಲು ರಾಜ್ಯ ಸರಕಾರ ನಿರ್ಧರಿಸಿದೆ.
ಇಂದು ಬುಧವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಚಿವರು ಹಾಗೂ ಅಧಿಕಾರಿಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, 45 ವರ್ಷ ಮೇಲ್ಪಟ್ಟವರಿಗೆ ಮಾತ್ರ ಲಸಿಕೆ ನೀಡಲು ತೀರ್ಮಾನಿಸಲಾಗಿದೆ.
ಮಹಾರಾಷ್ಟ್ರ ಮಾದರಿಯಲ್ಲಿ ವ್ಯಾಕ್ಸಿನ್ ಹಂಚಿಕೆ ಮಾಡುವ ಉದ್ದೇಶದಿಂದ ಪ್ರಸ್ತುತ ಮೊದಲ ಲಸಿಕೆ ಪಡೆದವರಿಗೆ 2ನೇ ಡೋಸ್ ಪಡೆಯುವವರಿಗೆ ವ್ಯಾಕ್ಸಿನ್ ಮೀಸಲಿಡಲು ತೀರ್ಮಾನಿಸಲಾಗಿದ್ದು, ಎಂದಿನಂತೆ ತಮ್ಮ ನಿರ್ಧಾರಗಳಲ್ಲಿ ಘಟ್ಟಿತನ ಇಲ್ಲದಂತೆ ವರ್ತಿಸುವ ಸರ್ಕಾರ, ಕೊರೊನಾ ವ್ಯಾಕ್ಸಿನ್ ನೀಡುವಲ್ಲಿಯೂಎಡವಟ್ಟು ನಿರ್ಧಾರ ಮಾಡಿದಂತಾಗಿದೆ. ಎಷ್ಟೊ ಜನರಿಗೆ ಲಸಿಕೆ ಪಡೆದುಕೊಳ್ಳಲು ಒನ್ ಲೈನ್ ನಲ್ಲಿ ಭೇಟಿಯನ್ನು ಖಾತ್ರಿ ಮಾಡಿಕೊಂಡಿದ್ದಾರೆ, ಅದಾಗ್ಯೂ ಈರೀತಿ ನಿರ್ಧಾರ ತೆಗೆದುಕೊಂಡಿದ್ದರಿಂದ ಅನೇಕರಿಗೆ ತೊಂದರೆಯಾಗುವಂತು ಖಂಡಿತ.