JANANUDI.COM NETWORK
ಪಾಟ್ನಾದ ಬಗ್ಸಾರ್ ಹತ್ತಿರ ಗಂಗಾ ನದಿಯಲ್ಲಿ ತೇಲಿಕೊಂಡು ಬಂದ ಶವಗಳ ರಾಶಿ, ಕೊಳೆತು ನಾರುವ ಸ್ಥಿಯಲ್ಲಿ
ಪಾಟ್ನ, ಮೇ, 12. ಪಾಟ್ನದ ಬಕ್ಸರ್ ಜಿಲ್ಲೆಯ ಚೌಸ ಗ್ರಾಮದ ಗಂಗಾ- ಮಹಾದೇವ ಘಾಟ್ ಬಳಿ ಪವಿತ್ರ ಗಂಗಾನದಿ ತೀರದಲ್ಲಿ ನೂರಾರು ಶವಗಳು ಎಲ್ಲಿಂದಲೋ ತೇಲಿ ಬರುತ್ತಿವೆ. ಆ ಮೃತ ದೇಹಗಳನ್ನು ನಾಯಿಗಳು ತಿನ್ನುವ ಭೀಭತ್ಸ್ಯ ದೃಶ್ಯ ಈಗ ತೀರಾ ಸಾಮಾನ್ಯ ವಾಗಿದ್ದು ನೋಡಲು ಭೀಬತ್ಸವಾಗಿ ಕಾಣುತ್ತಿವೆ.
ಉತ್ತರ ಪ್ರದೇಶದಲ್ಲಿ ಕೊರೋನ ದಿಂದ ಅಪಾರ ಸಂಖ್ಯೆಯ ಸಾವುಗಳಾಗಿದ್ದು ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ಮಾಡಲು ಸರಿಯಾದ ವ್ಯವಸ್ಥೆ ಇಲ್ಲದೆ ಮತ್ತು ಅಂತ್ಯ ಸಂಸ್ಕಾರದ ದುಬಾರಿ ವೆಚ್ಚ ಹೊಂದಿಸಲಾಗದೆ ಮೃತರ ಸಂಬಂಧಿಗಳು ಗಂಗಾ ನದಿಗೆ ಶವಗಳನ್ನು ಎಸೆದಿರಬಹುದು. ಎಂದು ಸ್ತಳೀಯರ ಶಂಕೆಯಾಗಿದೆ.
ಇದರಿಂದಾಗಿ ಸ್ಥಳಿಯರು ಆತಂಕಕ್ಕೆ ಒಳಗಾಗಿದ್ದು, ನದಿಯ ನೀರು ಕೆಡುವುದರ ಜೊತೆಗೆ, ಬೇರೆ ರೋಗಗಳು ಹರಡ ಬಹುದೆಂದು ಭೀತಿ ಪಟ್ಟಿದ್ದಾರೆ. ಇದಲ್ಲದೆ ಒಂದು ವೇಳೆ ನದಿಯಲ್ಲಿ ತೇಲಿಬಂದ ಶವಗಳು ಕೋವಿಡ್ ಸೋಂಕಿತರವರಾಗಿದ್ದರೆ ಕೊರೋನ ಸೋಂಕು ವ್ಯಾಪಕವಾಗಿ ಹಬ್ಬುವ ಭಯದಲ್ಲಿದ್ದಾರೆ.ಈ ಹಿನ್ನೆಲೆಯಲ್ಲಿ ಅಲ್ಲಿನ ಜಿಲ್ಲಾಡಳಿತ ನದಿಯಲ್ಲಿ ತೇಲಿ ಬಂದ ಶವಗಳ ತೆರವಿಗೆ ಕಾರ್ಯಾಚರಣೆ ಕೈಗೊಂಡಿದ್ದು ಅವಗಳನ್ನು ಯಂತ್ರಗಳ (ಶಾವೇಲ್) ಮೂಲಕ ತೆಗೆಯುತಿದ್ದಾರೆ.
ಬಿಹಾರ ರಾಜ್ಯದಲ್ಲಿ ಹೆಣಗಳನ್ನು ನದಿಯಲ್ಲಿ ತೇಲಿ ಬಿಡುವ ಸಂಪ್ರಾದಾಯವಿಲ್ಲ.ಇದು ಬೇರೆ ರಾಜ್ಯದಿಂದ ಬಂದಂತವುಗಳೆಂದು ದೂರುತ್ತಾರೆ. ನಿನ್ನೆ ಸುಮಾರು 100 ಕ್ಕೂ ಅಧಿಕ ಕೊಳೆತ ಶವಗಳನ್ನು ತೆಗೆದರೂ, ಇಂದು ಇನ್ನೂ ಶವಗಳು ತೇಲಿ ಬರುತ್ತವೆ ಎಂದು ಹೇಳಲಾಗುತ್ತದೆ.