ಶ್ರೀನಿವಾಸಪುರ ಕೊರೊನಾ ಹೋಗಲಾಡಿಸಲು ತಣಿವು ಮುದ್ದೆ ಇಟ್ಟು ಕುರಿ ಪಟ್ಲಿ ಬಲಿ ನೀಡಲಾಯಿತು.

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ


ಪಟ್ಟಣದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಭಯಗೊಂಡ ಕೆಲವು ನಾಗರಿಕರು, ಸಾಮೂಹಿಕವಾಗಿ ರಸ್ತೆ ಮಧ್ಯ ಭಾಗದಲ್ಲಿ ಅನ್ನದಿಂದ ಮಾಡಿದ ದೊಡ್ಡದಾದ ತಣಿವು ಮುದ್ದೆ ಇಟ್ಟು, ಅನ್ನದ ಕಟ್ಟೆಯೊಳಗೆ ಮಜ್ಜಿಗೆ ಸುರಿದು, ಅರಶಿನ, ಕುಂಕುಮ ಇಟ್ಟು, ತೆಂಗಿನ ಕಾಯಿ ಒಡೆದು ಸಾಮೂಹಿಕ ಪೂಜೆ ಸಲ್ಲಿಸಿದ ಬಳಿಕ ಕುರಿಯನ್ನು ಬಲಿ ಕೊಡಲಾಯಿತು.
ಪೂಜೆ ಹಾಗೂ ಕುರಿ ಬಲಿಯನಂತರ ರಕ್ತ ಮಿಶ್ರಿತ ತಣಿವು ಮುದ್ದೆಯ ಅನ್ನವನ್ನು ನೆರೆದಿದ್ದ ಜನರಿಗೆ ಹಂಚಿ, ಕೊರೊನಾ ಶಾಂತಿಗಾಗಿ ಮನೆಗಳ ಮೇಲೆ ಹಾಕುವಂತೆ ಸೂಚಿಸಲಾಯಿತು.