ಕೋಲಾರ ನಗರದ ಅಮ್ಮವಾರಿಪೇಟೆ ಮಂಗಳಮುಖಿಯ ಎಳೆದೊಯ್ದ ಲೇಡಿಸ್ ಪಿಎಸ್‍ಐ ವೇದವತಿ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ


ಕೋಲಾರ,ಮೇ. ನಗರದ ಅಮ್ಮವಾರಿಪೇಟೆ ವೃತ್ತದಲ್ಲಿ ಗಲ್‍ಪೇಟೆಯಲ್ಲಿ ಮೆಡಿಕಲ್ ಶಾಪ್ ಹತ್ತಿರ ವಾಹನದಲ್ಲಿ ಬಂದ ಮಂಗಳಮುಖಿಯೊಬ್ಬರನ್ನು ಅವರ ತಲೆ ಮೂಡಿಗೆ ಪಿಎಸ್‍ಐ ಒರ್ವಳು ಕೈ ಹಾಕಿ ಎಳೆದೊಯ್ದ ಅಹಿತಕಾರಿ ಘಟನೆ ನಡೆದಿದೆ.

ನಗರದ ಅಮ್ಮವಾರಿಪೇಟೆ ವೃತ್ತದಲ್ಲಿ ಗಲ್‍ಪೇಟೆ ಪಿಎಸ್‍ಐ ವೇದವತಿ ರಸ್ತೆಗಿಳಿದ ವಾಹನಗಳು, ಸವಾರರ ಮೇಲೆ ಲಾಠಿ ಬೀಸಿದರಲ್ಲದೇ ನೂರಕ್ಕೂ ಹೆಚ್ಚು ವಾಹನಗಳನ್ನು ವಶಕ್ಕೆ ಪಡೆದರು ಅದೇ ಸಂದರ್ಭದಲ್ಲಿ ಮಂಗಳಮುಖಿಯೊಬ್ಬರು ಮೇಡಿಕಲ್ ಶಾಪ್ ಹತ್ತಿರ ಬರುವಾಗ,ಅವರ ಮೇಲೂ ಲಾಟಿ ಬೀಸಿದರು. ಆದರೆ ಮಂಗಳಮುಖಿ, ಪಿಎಸ್‍ಐ ಅವರ ಲಾಠಿ ಹಿಡಿದು ಪ್ರತಿರೊಧ ಒಡ್ಡಿದಾಗ ಆಕ್ರೋಶಗೊಂಡ ಪಿಎಸ್‍ಐ ವೇದವತಿ ಎಂಬವರು ಮಂಗಳಮುಖಿಯನ್ನು ತಲೆ ಕೂದಲಿಡಿದು ಎಳೆದೊಯ್ದು ಜೀಪ್ ಹತ್ತಿಸಿದಲ್ಲದೇ, ಅವರ ವಾಹನವನ್ನು ವಶಕ್ಕೆ ಪಡೆದುಕೊಂಡರು.

ಈ ಸುದ್ದಿ ರಾಜ್ಯಾದಾಂತ್ಯ ಸುದ್ದಿಯಾಗಿದೆ. ಪೊಲೀಸರಿಗೆ ಲಾಟಿ ಬೀಸಿ ಎಂದಾಕ್ಷಣ ಮೈ ಮೇಲೆ ಭೂತ ಸವಾರಿ ಮಾಡಿದಂತೆ ವರ್ತಿಸುತ್ತಾರೆ, ಕೆಲ ಪೊಲೀಸರು ತೀವ್ರ ಅನಾಗರಿಕರೀತಿಯಲ್ಲಿ ವ್ಯಹರಿಸುತ್ತಾರೆ. ಇದರಿಂದಾಗಿ ಮಾನವೀಯತೆಯಿಂದ ಸೇವೆ ಮಾಡುವಪೊಲೀಸರಿಗೂ ಕಳಂಕ ತಟ್ಟುತ್ತದೆ. ಮಾನವ ಹಕ್ಕು ಆಯೋಗ ಯಾವುದೇ ವ್ಯಕ್ತಿಗೆ ಹಿಂಸೆ ಕೊಡಬಾರದೆಂದು ಹೇಳುತ್ತದೆ. ಅರಕ್ಷಕರು ಸಾರ್ವಜನಿಕ ರಕ್ಷಕರೆ ಹೊರತು, ಅವರ ಮೇಲೆ ಹಲ್ಲೆ ಮಾಡಿ ದೈಹಿಕ ಹಿಂಸೆ ಕೊಡುವುದು ನೀಜ ಪೊಲೀಸರ ಲಕ್ಷಣವಲ್ಲ ಎಂದು ಕಾನೂನು ತಜ್ನರು ಅಭಿಪ್ರಾಯ ಪಡುತ್ತಾರೆ.

ಗರದ ಅಮ್ಮವಾರಿಪೇಟೆ ವೃತ್ತದಲ್ಲಿ ಗಲ್‍ಪೇಟೆ ಪಿಎಸ್‍ಐ ವೇದವತಿ ರಸ್ತೆಗಿಳಿದ ವಾಹನಗಳು, ಸವಾರರ ಮೇಲೆ ಲಾಠಿ ಬೀಸಿದರಲ್ಲದೇ ನೂರಕ್ಕೂ ಹೆಚ್ಚು ವಾಹನಗಳನ್ನು ವಶಕ್ಕೆ ಪಡೆದರು