ಪೊಲೀಸರು ಮಾನವೀಯತೆ ಕಳೆದುಕೊಂಡು ವರ್ತಿಸಿದಾಗ,ಅದು ಅವರ ಸೇವೆಯಲ್ಲಿ ಕಪ್ಪು ಚುಕ್ಕೆಯಾಗುತ್ತೆ (ಜನನುಡಿ ಸಂಪಾದಕೀಯ)

JANANUDI.COM NETWORK

    ಇತ್ತೀಚಿನ ದಿನಗಳಲ್ಲಿ ದೇಶ ರಾಜ್ಯ,ಜಿಲ್ಲೆ,ತಾಲೂಕು ಗ್ರಾಮಗಳಲ್ಲಿ ಲಾಕ್ ಡೌನ್ ವಿಚಾರದಲ್ಲಿ ಪೊಲೀಸರಿಂದ ಅತಿರೇಕದ ವರ್ತನೆಗಳು ವರದಿಯಾಗುತ್ತಾ ಇವೆ, ವಯ್ಸಕರಿಗೂ ಅಮಾನವೀಯ ರೀತಿಯಲ್ಲಿ ಲಾಟಿಗಳಿಂದ ಯದ್ವಾ ದದ್ವಾ ಹೊಡೆಯುವುದು, ದಾರುಣ ದ್ರಶ್ಯಗಳು ಕಂಡು ಬರುತ್ತೀವೆ, ನಾವೂ ಈ ಕೊರೊನಾ ಸಂಕಷ್ಟದಲ್ಲಿ ಜನರ ಪ್ರಾಣ ಉಳಿಸಲಿಕ್ಕಾಗಿ ಲಾಕ್ ಡೌನ್, ಜನಗಳ ಮಧ್ಯೆ  ಅಂತರ, ಮಾಸ್ಕ್, ಸಾನಿಟಾಯ್ಸರ್ ಬಳಸುವ ಕ್ರಮ, ನಿಯಮ  ಮುಂದಾದುವಗಳನ್ನು ಬಳಸುತಿದ್ದೆವೆ,

     ಅಂದರೆ ಇದು ಜನರ ಪ್ರಾಣ ಉಳಿಸಲಿಕ್ಕಾ ಮಾಡುತ್ತೇವೆ, ಅಂದರೆ ನಮ್ಮದು ಈಗ ಮೊದಲ ಆಧ್ಯತೆ ಜನರ ಪ್ರಾಣ. ಉಳಿಸುವುದಾಗಿದೆ.   ಆದರೆ ಪೊಲೀಸರು ಒರ್ವ ಮಾನವನ ಮೇಲೆ ನಾಲ್ಕೈದು ಪೊಲೀಸರು ಲಾಟಿಗಳಿಂದ ಹೋಡೆಯುವಾಗ ಅವನ ಪ್ರಾಣಕ್ಕೆ ಸಂಚಿಕಾರ ಆಗುವುದಿಲ್ಲವೇ ?  ಕುಂಡೆಯ ಮೇಲ್ಗಡೆ ನಾಲ್ಕಾರು ಲಾಟಿಗಳಿಂದ ಹೊಡೆದರೆ ಆವರ ಕಿಡ್ನಿ ಅಪಾಯ ತಟ್ಟುವುದಿಲ್ಲವೇ ? ಆ ರೀತಿ ಪೆಟ್ಟು ತಿಂದವನು ಕೆಲವೇ ವರ್ಷಗಳಲ್ಲಿ ಕಿಡ್ನಿ ವೈಪಲ್ಯದಿಂದ ಪ್ರಾಣಕ್ಕೆ ಕುತ್ತು ಬರುವುದು ಗ್ಯಾರಂಟಿ.

     ಲಾಕ್ ಡೌನ್ ನಿಯಮ ಮೀರಿ, ಯಾರದರೂ ತಪ್ಪು ಮಾಡಿದ ತಪ್ಪಿದಸ್ತರೆ ಆಗಿರಲಿ, ಅವರಿಗೆ ಹೋಡೆಯಲು ಯಾರಿಗೆ ಅಧಿಕಾರ ಇದೆಯಾ..!?  ಮೈ ಮುಟ್ಟಲು ಅವಕಾಶವಿಲ್ಲ. ಕಾನೂನು ರೀತಿಯಲ್ಲಿ ಎನು ಮಾಡಬೇಕೊ ಅದನ್ನು ಮಾಡಲು ಪೊಲೀಸರಿಗೆ ಅಧಿಕಾರ ಇದೆ. ಪಂಚಾಯತ್ ಅಧ್ಯಕ್ಷರಿಗೆ, ಡಿಸಿ ಗಳಿಗೆ ಲಾಟಿ ಹಿಡಿದು ಹೊಡೆಯಲಿಕ್ಕೆ ಬರುವ ಅಧಿಕಾರ ಇದೆಯಾ?  ಕಾನೂನು ರೀತ್ಯಾ ಎನು ಮಾಡಬೇಕೊ ಅದನ್ನು ಮಾಡಿ. ಆದರೆ ಕಾನೂನು ಪಾಲಕರೇ ಕಾನೂನುಗಳನ್ನು ಮುರಿದರೆ ಹೇಗೆ?  ಮಾನವ ಹಕ್ಕು ಆಯೋಗ ಏನು ಹೇಳುತ್ತೆ?

     ಅಂತರಾಷ್ಟೀಯ ಮಟ್ಟದಲ್ಲಿ ಅಮಾನುಷವಾಗಿ ಹೊಡೆಯುವ ದ್ರಶ್ಯಗಳನ್ನು ನೋಡಿದಲ್ಲಿ, ನಮ್ಮ ಭಾರತದ ಮಾನ ಹರಾಜಾಗುವುದರಲ್ಲಿ ಅನುಮಾನವಿಲ್ಲಾ.  ಲಾಕ್ಡೌನ್ ಕಾನೂನು ಮುರಿದರೆ ಕಾನೂನು ರೀತ್ಯಾ ಕ್ರಮ ತೆಗೆದುಕೊಳ್ಳಿ, ಹೊಡೆಯಲು ಬಡಿಯಲು ಯಾವದೇ ಕಾನೂನು ಇಲ್ಲಾ. ನಮಗೆ ಈಗ ಜನರ ಪ್ರಾಣ ಉಳಿಸುವ ಕೈಂಕರ್ಯಾ ಆಗ ಬೇಕಿದೆ, ಹೀಗಿರಬೇಕಾದರೆ,ಸಾಯುವ ರೀತಿ ಹೊಡೆದರೆ ಹೇಗೆ?   ಕೆಲವರಿಗೆ ಹೊಡೆದು ಬಡಿದು ಪೆಟ್ಟು ತಿಂದವನ ಸ್ಥಿತಿ ಅಪಘಾತವಾದವನಂತ್ತೆ  ಕಂಡು ಬಂದೠ, ಆತನಿಗೆ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಪರಿಪಾಠವಿಲ್ಲಾ.

    ಯಾರಾದರು ಒಬ್ಬ ನಾಗರಿಕ ರಸ್ತೆಯಲ್ಲಿ, ಮತ್ತೊಬ್ಬ ನಾಗರಿಕನಿಗೆ ಹೊಡೆದು, ನಂತರ ಆತ ಮನೆಯಲ್ಲಿ ಹೋಗಿ ಸತ್ತರೆ ಪೊಲೀಸರು ಹೋಡೆದವನ ಮೇಲೆ ಕೊಲೆ ಕೇಸ್ ಹಾಕುತ್ತಾರೆ,  ಆದರೆ ಈ ಲಾಟಿಗಳ ಪೆಟ್ಟು ತಿಂದು ಸತ್ತರೆ ಯಾರ ಮೇಲೆ ಕೇಸ್ ಹಾಕಬೇಕು..?

     ಮನುಷ್ಯ ಲಾಟಿ, ದೊಣ್ಣೆ, ಅನ್ಯ ರೀತಿಯ ಪೆಟ್ಟುಗಳಿಂದ ಸುಧಾರಣೆ ಆಗಲ್ಲ. ಅವನಿಗೆ ಕಾನೂನು ಶಿಸ್ತು, ಉತ್ತಮ ನಡವಳಿಕೆ ಕಲಿಸಿ. ಮಾಸ್ಕ್ ಹಾಕಲಿಲ್ಲ ಅಂತಾ ದಂಡ ಹಾಕುತ್ತಿರಿ, ಜೊತೆಗೆ ಒಂದು ಮಾಸ್ಕ್ ಕೂಡ ಕೊಡಿ. ಮಾಸ್ಕ್ ಕೊಡಲಿಲ್ಲ ಅಂದರೆ, ನಿಮ್ಮ ಉದ್ದೇಶ ಇಡೇರಿಸುವುದಿಲ್ಲಾ. ನಿಮಗೆ ಮಾಸ್ಕ್ ಮುಖ್ಯವಲ್ಲಾ, ದಂಡ ಮುಖ್ಯ ಅಂತಾ ಆಗುತ್ತೆ.

     ಇದೆಲ್ಲಾ ಮಾನವೀಯ ದ್ರಷ್ಟಿಯಿಂದ ಬರೆಯುತ್ತೇನೆ ವಿನಹ, ಯಾರ  ಮೇಲಿನ ದ್ವೇಷದಿಂದ ಅಲ್ಲಾ, ಪೊಲೀಸರು ತಮ್ಮಜೀವವನ್ನು ಒತ್ತೆ ಇಟ್ಟು ಸೇವೆ ನೀಡುತ್ತಆರೆ ಹೌದು,(ಟಾಸ್ಕ್ ಪೊರ್ಸ್, ಅಧಿಕಾರಿಗಳ್, ವೈದ್ಯರು, ನರ್ಸ್, ವೈದ್ಯಕೀಯ ಸಿಬಂದಿ, ಅಂಬ್ಯುಲೆನ್ಸ್  ಚಾಲಕರು ಇನ್ನಿತರರು ಇದ್ದಾರೆ) ನಿಮಗೆ ತುಂಬ ಟೆನ್ಶನ್ ಇರುತ್ತೆ ನಿಜ. ನಿಮಗೆ ಕಾರ್ಯ ನಿರ್ವಹಿಸಲು ಕಷ್ಟವಾಗುತ್ತೆ ನಿಜ. ನೀವು ಮ್ರಗರಂತೆ ವರ್ತಿಸಿ ಮಾನವೀಯತೆ ಕಳೆದುಕೊಂಡು ವರ್ತಿಸಿದಾಗ ನಿಮ್ಮ ಸೇವೆ ಕಪ್ಪು ಚುಕ್ಕೆಬರುತ್ತೆ ಎಂಬುದು ಗಮನದಲ್ಲಿರಲಿ. ಮಾನವೀಯತೆಯಿಂದ ಸಂಕಷ್ಟವನ್ನು ಎದುರಿಸೋಣ.

 ಬರ್ನಾಡ್ ಡಿಕೋಸ್ತಾ – ಜನನುಡಿ.ಕಾಮ್ ಸಂಪಾದಕರು