JANANUDI.COM NETWORK
ನವದೆಹಲಿ: ದೇಶದಲ್ಲಿ ರಕ್ಕಸ ಕೊರೊನಾ ಕಾಟ ಹೆಚ್ಚಾಗಿದೆ. ಪ್ರಾಣವಾಯುವಿನ ಹಾಹಾಕಾರ ಶುರುವಾಗಿದೆ ಇಂತಹ ವಿಷಮ ಪರಿಸ್ಥಿತಿಯಲ್ಲಿ ಸೆಂಟ್ರಲ್ ವಿಸ್ಟಾದ ಪುನರಾಭಿವೃದ್ಧಿ ಯೋಜನೆಗಾಗಿ ನಿರ್ಮಾಣ ಕಾರ್ಯಗಳನ್ನು ಮುಂದುವರೆಸುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ಮಾಡಿದ್ದಾರೆ.
ದೇಶಕ್ಕೆಈಗ ಅಗತ್ಯವಾಗಿ ಆಕ್ಸಿಜನ್ ಬೇಕಾಗಿರುವುದೇ ಹೊರತು ಪ್ರಧಾನ ಮಂತ್ರಿಯ ನಿವಾಸವಲ್ಲ ಎಂದು ಟೀಕಿಸಿದ್ದಾರೆ. ಸೆಂಟ್ರಲ್ ವಿಸ್ಟಾದ ಪುನರಾಭಿವೃದ್ಧಿ ಯೋಜನೆ ಅಡಿಯಲ್ಲಿ ಹೊಸ ತ್ರಿಕೋನ ಸಂಸತ್ತಿನ ಕಟ್ಟಡ, ಸಾಮಾನ್ಯ ಕೇಂದ್ರ ಸಚಿವಾಲಯ, ಉಪರಾಷ್ಟ್ರಪತಿ ನಿವಾಸ, ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್ ಗೆ ಮೂರು ಕಿ.ಮೀ ಉದ್ದದ ರಾಜ್ ಪಾತ್ ಅನ್ನು ನವೀಕರಿಸುವುದು ಈ ಯೋಜನೆಯಲ್ಲಿ ಸೇರಿವೆ.
ಇದು ರಾಹುಲ್ ಗಾಂಧಿಯನ್ನು ಕೆರಳಿಸಿದೆ. ಅದಕ್ಕೆ ಅವರು ಕೇಂದ್ರ ಸರ್ಕಾರದ ಈ ಯೋಜನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ “ದೇಶಕ್ಕೆ ಶ್ವಾಸ ಬೇಕು, ಪ್ರಧಾನ ಮಂತ್ರಿಯ ನಿವಾಸವಲ್ಲ” ಎಂದು ಟ್ವೀಟ್ ಮಾಡಿದ್ದಾರೆ. ಸೆಂಟ್ರಲ್ ವಿಸ್ಟಾ ಯೋಜನೆ ಕೈಬಿಟ್ಟು ದೇಶದ ವೈದ್ಯಕೀಯ ಮೂಲಸೌಕರ್ಯಗಳನ್ನು ಸುಧಾರಿಸಲು ಆದ್ಯತೆ ನೀಡಬೇಕು’ ಎಂದು ಜನರ ಅಭಿಪ್ರಾಯ ಎಂಬತ್ತೆ ಕಿಡಿ ಕಾರಿದ್ದಾರೆ.