1-9 ನೇ ತರಗತಿವರು ಪರೀಕ್ಷೆ ಇಲ್ಲದೇ ಉತ್ತೀರ್ಣ – SSLC ಗೆ ಪರೀಕ್ಷೆಗಳು -ಶಾಲೆಗಳಿಗೆ ಬೇಸಿಗೆ ರಜೆಯ ವಿವರ

JANANUDI.COM NEYWORK

1-9 ನೇ ತರಗತಿವರೆಗೆ ಪರೀಕ್ಷೆ ಇಲ್ಲದೇ ಉತ್ತೀರ್ಣ – ಶಾಲೆಗಳಿಗೆ ಬೇಸಿಗೆ ರಜೆ ಘೋಷಣೆಯ ವಿವರ

ಬೆಂಗಳೂರು, ಎ.20; ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ 1-9ನೇ ತರಗತಿವರೆಗೆ ಪರೀಕ್ಷೆ ರದ್ದುಗೊಳಿಸಲಾಗಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 1-9ನೇ ತರಗತಿವರೆಗೆ ಮೌಲ್ಯಾಂಕನ ವಿಶ್ಲೇಷಣೆ ಮಾಡಿ ವಿದ್ಯಾರ್ಥಿಗಳನ್ನು ಪಾಸ್ ಮಾಡಲಾಗುವುದು. ಶಿಕ್ಷಣ ಇಲಾಖೆ ಈ ನಿರ್ಧಾರ ಕೈಗೊಂಡಿದೆ ಎಂದರು.

1-5ನೇ ತರಗತಿವರೆಗೆ ಹಾಗೂ 6-9ನೇ ತರಗತಿವರೆಗೆ ಮೌಲ್ಯಾಂಕನ ಕುರಿತು ಪ್ರತ್ಯೇಕ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ ಎಂದು ಹೇಳಿದರು.

2020-21 ನೇ ಸಾಲಿಗೆ ಮೌಲ್ಯಾಂಕನ ವಿಶ್ಲೇಷಣೆ ಮತ್ತು ಶೈಕ್ಷಣಿಕ ಅವಧಿ ನಿಗದಿ ಕುರಿತು ಶಿಕ್ಷಣ ಇಲಾಖೆಯು ಮಹತ್ವದ ಆದೇಶ  ಹೊರಡಿಸಿದೆ.

ಆದೇಶದ ಪ್ರಮುಖ ಅಂಶಗಳು ಹೀಗಿವೆ

 1 ರಿಂದ 9 ನೇ ತರಗತಿ ಮಕ್ಕಳಿಗೆ ಪರೀಕ್ಷೆ ಇಲ್ಲದೇ  ಉತ್ತೀರ್ಣ

 ವಿಶ್ಲೇಷಣಾ ಮೌಲ್ಯಾಂಕನದ ಮೂಲಕ ಉತ್ತೀರ್ಣ

 2020-21 ನೇ ಸಾಲಿನ ಬೇಸಿಗೆ ರಜೆ ಹಾಗೂ 2021-22 ಶೈಕ್ಷಣಿಕ ಅವಧಿ ನಿಗದಿಯ ವಿವರ

1)ಪ್ರಾಥಮಿಕ ಶಾಲೆಗಳಿಗೆ 

 1 ರಿಂದ 7/8 ತರಗತಿ ಇರುವ ಶಾಲೆಗಳಿಗೆ 01-05-2021 ರಿಂದ 14-06-2021 ರ ವರೆಗೆ ಬೇಸಿಗೆ ರಜೆ

ಮತ್ತು 15-06-2021 ರಿಂದ ಶೈಕ್ಷಣಿಕ ಅವಧಿ ಪ್ರಾರಂಭ

 2) ಪ್ರೌಢ ಶಾಲೆಗಳಿಗೆ

 8 ಮತ್ತು 9 ನೇ ತರಗತಿ ಹೊಂದಿರುವ ಪ್ರೌಡಶಾಲೆಗಳಿಗೆ 01-05-2021 ರಿಂದ 14-07-2021 ರವರೆಗೆ ಬೇಸಿಗೆ ರಜೆ

 ಪ್ರೌಢಶಾಲೆ ಶಿಕ್ಷಕರಿಗೆ 15-06-2021 ರಿಂದ 14-07-2021 ರವರೆಗೆ ಬೇಸಿಗೆ ರಜೆ

 21-06-2021 ರಿಂದ 05-07-2021 ರವರಿಗೆ SSLC ಪರೀಕ್ಷೆಗಳು ನಡೆಯಲಿದೆ

 15-07-2021 ರಿಂದ 2021-22 ನೇ ಶೈಕ್ಷಣಿಕ ವರ್ಷ ಪ್ರಾರಂಭ