ಕೋಟೇಶ್ವರ ಗಾಣಿಗ ಯುವ ಸಂಘಟನೆ: ಸಾಂಸ್ಕೃತಿಕ ಸ್ಪರ್ಧೆ ಉದ್ಘಾಟನೆ

JANANUDI.COM NETWORK


ಕುಂದಾಪುರ: ಯುವ ಸಂಘಟನೆಗಳು ಬಲಿಷ್ಟಗೊಂಡಾಗ ಸಮಾಜ ಅಭಿವೃದ್ದಿಯಾಗಲಿದೆ.ಕೋಟೇಶ್ವರ ಗಾಣಿಗ ಯುವ ಸಂಘಟನೆ ಕಳೆದ ಹತ್ತು ವರ್ಷಗಳಿಂದ ಜನಪರ, ಸಮಾಜಪರ ಕಾರ್ಯಕ್ರಮಗಳನ್ನು ಸಂಘಟಿಸಿ ಇತರ ಸಂಘ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದು ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘದ ಅಧ್ಯಕ್ಷ ಪ್ರಭಾಕರ ಬಿ.ಕುಂಭಾಶಿ ಹೇಳಿದರು.
ಅವರು ಭಾನುವಾರ ಕೋಟೇಶ್ವರ ಗಾಣಿಗ ಯುವ ಸಂಘಟನೆ ದಶಮಾನೋತ್ಸವದ ಪ್ರಯುಕ್ತ ಕುಂದಾಪುರ ಮತ್ತು ಬೈಂದೂರು ತಾಲೂಕಿನ ಗಾಣಿಗ ಸಮಾಜ ಬಾಂಧವರಿಗೆ ಕುಂದಾಪುರ ವ್ಯಾಸರಾಜ ಕಲಾಮಂದಿರದಲ್ಲಿ ಏರ್ಪಡಿಸಿದ ವಿವಿಧ ಸಾಂಸ್ಕೃತಿಕ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಕೋಟೇಶ್ವರ ಗಾಣಿಗ ಯುವ ಸಂಘಟನೆಯ ಅಧ್ಯಕ್ಷ ಅಭಿಲಾಷ್ ಬಿ.ಎ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘದ ಕಾರ್ಯದರ್ಶಿ ನಾಗಾರಾಜ ಗಾಣಿಗ ಬಸ್ರೂರು, ಕೋಶಾಧಿಕಾರಿ ನಾಗರಾಜ ಗಾಣಿಗ ಹಿಲ್ಕೋಡು, ಸದಸ್ಯರಾದ ಕೊಗ್ಗ ಗಾಣಿಗ, ಭಾಸ್ಕರ್ ಜಿ.ಕೆ, ಸವಿತಾ ದಿನೇಶ್, ದೇವಕಿರಾಜು, ರವಿ ಗಾಣಿಗ ಕೆಂಚನೂರು, ಪ್ರಸಾದ್ ಕೋಡಿ, ರವಿ ಗಾಣಿಗ ಆಜ್ರಿ, ನಿವೃತ್ತ ಮುಖ್ಯಶಿಕ್ಷಕ ಪುಂಡಲೀಕ ಗಾಣಿಗ, ಕೋಟೇಶ್ವರ ಗಾಣಿಗ ಯುವ ಸಂಘಟನೆಯ ಗೌರವಾಧ್ಯಕ್ಷ ಮಂಜುನಾಥ್ ಹೊದ್ರಾಳಿ, ಕಾರ್ಯದರ್ಶಿ ಉದಯ ಗಾಣಿಗ ಬೀಜಾಡಿ, ಕೋಶಾಧಿಕಾರಿ ಸಂತೋಷ್ ಹೊದ್ರಾಳಿ, ಮಾಜಿ ಅಧ್ಯಕ್ಷ ಸುಧಾಕರ ಗಾಣಿಗ ಕುಂಭಾಶಿ, ಮಾಜಿ ಕಾರ್ಯದರ್ಶಿ ರಾಮಚಂದ್ರ ಗಾಣಿಗ ದೊಡ್ಡೋಣಿ,ಮಹಿಳಾ ಸಂಘಟನೆಯ ಗೌರವಾಧ್ಯಕ್ಷೆ ಕಲಾವತಿಅಚ್ಯುತ್, ಪ್ರಧಾನ ಕಾರ್ಯದರ್ಶಿ ವಿಜಯ ಕೃಷ್ಣಮೂರ್ತಿ, ಕೋಶಾಧಿಕಾರಿ ಕಲ್ಯಾಣಿಶಂಕರ್ ಮೊದಲಾದವರು ಉಪಸ್ಥಿತರಿದ್ದರು.
ಮಹಿಳಾ ಸಂಘಟನೆಯ ಅಧ್ಯಕ್ಷೆ ಪ್ರಭಾವತಿ ಗಾಣಿಗ ಸ್ವಾಗತಿಸಿದರು. ಯುವ ಸಂಘಟನೆಯ ಮಾಜಿ ಅಧ್ಯಕ್ಷ ನಾಗರಾಜ್ ಬಿ.ಜಿ ವಂದಿಸಿದರು. ಪತ್ರಕರ್ತ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವ್ಯಯಕ್ತಿಕ ವಿಭಾಗದಲ್ಲಿ ಗಾಯನ, ನೃತ್ಯ, ಚಿತ್ರಕಲೆ, ಮುದ್ದರಾಧೆ ಮತ್ತು ಮುದ್ದು ಕೃಷ್ಣ, ಛದ್ಮವೇಷ, ಭಾಷಣ, ರಂಗೋಲಿ , ಗುಂಪು ಸ್ಪರ್ಧೆಯ ಸಾಂಪ್ರದಾಯಿಕ ನೃತ್ಯ, ಕುಣಿತ ಭಜನೆ, ರಸಪ್ರಶ್ನೆ ಸ್ಪರ್ಧೆ ನಡೆಯಿತು.