ಕುಂದಾಪುರ ರೊಜರಿ ಮಾತಾ ಇಗರ್ಜಿಯಲ್ಲಿ ಭಕ್ತಿ ಪೂರ್ವಕ ಗರಿಗಳ ಭಾನುವಾರ ಆಚರಣೆ

JANANUDI.COM NETWORK

ಕುಂದಾಪುರ,ಎ.28: ‘ಒಮ್ಮೆ ಶಿಲುಭೆಯ ಮೇಲಿನ ಎಸು ಕ್ರಿಸ್ತನನ್ನು ನೋಡಿ, ಅವನು ನೋವು ಏನೆಂದು ಅರ್ಥ ಮಾಡಿಕೊಳ್ಳಿ, ಆತನ ನೋವು ತಾನು ಶಿಲುಭೆಯಲ್ಲಿ ಮರಣ ಹೊಂದಿದ್ದಕ್ಕೆ ಅಲ್ಲ, ನಾವು ನಮ್ಮ ಜೀವನವನ್ನು ಹೋಗಲಾಡಿ ಸಿಕೊಳ್ಳುವೇವು ಎಂದು ಅತನುದುಖಿಸುತ್ತಾನೆ, ಪರಿವರ್ತನೆ ಹೊಂದಿ ತಮ್ಮನ್ನು ಕಾಪಾಡಿಕೊಳ್ಳಿ’ ಎಂದು ಎಸುವಿನ ಸಂದೇಶವಾಗಿದೆ’  ಎಂದು ಕುಂದಾಪುರದ ಸಹಾಯಕ ಧರ್ಮಗುರು ವಂ|ವಿಜಯ್ ಡಿಸೋಜಾ ಸಂದೇಶ ನೀಡಿದರು. ಅವರು ಎ. 28 ರಂದುನಡೆದ ಗರಿಗಳ ಭಾನುವಾರ ನಡೆದ ಸಂಸ್ಕಾರ ವೇಳೆ ಪ್ರವಚನ ನೀಡಿದರು.  ಇಗರ್ಜಿಯ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ  ಗರಿಗಳ ಭಾನುವಾರದ ಸಂಸ್ಕಾರವನ್ನು ಆಚರಿಸುವ ಜೊತೆಗೆ ಪವಿತ್ರ ಬಲಿದಾನದಲ್ಲಿ ಪ್ರಧಾನ ಪಾತ್ರವಹಿಸಿದರು.

     ಸಂತ ಮೇರಿಸ್ ಪಿ.ಯು.ಕಾಲೇಜಿನ ಪ್ರಾಂಶುಪಾಲ ವಂ|ಧರ್ಮಗುರು ಪ್ರವೀಣ್ ಅಮ್ರತ್ ಮಾರ್ಟಿಸ್ ಈ ಸಂಸ್ಕಾರದಲ್ಲಿ ಪಾಲ್ಗೊಂಡರು ಕೊರೊನಾ ಭೀತಿ ಪುನರ್ವಾತಿಸಿದ್ದರಿಂದ ಈ ಸಲದ ಸಂಸ್ಕಾರವು ಸರಳವಾಗಿನಡೆಯಿತು.