ವಿ.ಕೆ ಮೋಹನ್ ನುಡಿ ನಮನ ಅರ್ಪಣಾ ಸಭೆ

ವರದಿ : ಮಝರ್, ಕುಂದಾಪುರ


ಕುಂದಾಪುರ : ಕುಗ್ರಾಮದಂತಿದ್ದ ವಕ್ವಾಡಿಯಿಂದ ತೆರಳಿ ಮಾಯಾನಗರಿ ಬೆಂಗಳೂರಿನಲ್ಲಿ ಯಶಸ್ವಿಯಾಗಿ ಬದುಕನ್ನು ಕಟ್ಟಿಕೊಂಡಿದ್ದ ವಿ.ಕೆ ಮೋಹನ್ ಅದೇಷ್ಟೋ ಬಡ ಜನರಿಗೆ ಆಶ್ರಯದಾತರಾಗಿದ್ದರು ಅದೆಷ್ಟೋ ಸಮಾಜ ಸೇವಾ ಸಂಘಟನೆಗಳ ಪೋಷಕರಾಗಿ ಜನಜನಿತರಾಗಿದ್ದರು ಸ್ನೇಹಿತರ ಆತ್ಮೀಯರ ಕಷ್ಟ ನಷ್ಟಗಳಿಗೆ ಮಿಡಿಯುವ ಮಾನವತಾವಾದಿಯೋರ್ವ ಬದುಕಿನುದ್ದಕ್ಕೂ ಅವರಲ್ಲಿ ಮಿಡಿಯುತಲಿದ್ದ ಓರ್ವ ಆಪ್ತನಾಗಿ ಸುಮಾರು 35ವರ್ಷಗಳಕಿಂತಲು ಹೆಚ್ಜಿನ ಕಾಲದ ಒಡನಾಟ ನಮ್ಮದು ಅವರ ಬದುಕಿನ ಪ್ರತಿಯೊಂದು ಘಟನೆಗಳನ್ನು ಹಂಚಿಕೊಳ್ಳುತ್ತಿದ್ದ ಅವರು ಸಾಯುವ ಕೆಲವು ಸಮಯದ ಹಿಂದೆಯಷ್ಟೇ ಬೆಂಗಳೂರಿನ ತನ್ನ ಉದ್ಯಮ ಸರಕಾರಿ ಯಂತ್ರದ ನಿರ್ಲಕ್ಷದಿಂದ ನಷ್ಟದಿಂದ ಸಾಗುತ್ತಿರುವ ವಿಚಾರವನ್ನು ತುಂಬಾ ನೋವಿನಿಂದಲೇ ಹೇಳಿದರು ಅದಾದ ಕೆಲವು ದಿನಗಳ ಅಂತರದಲ್ಲಿಯೇ ಅವರ ಸಾವಿನ ಸುದ್ದಿ ಕೇಳಿ ನಡುಗಿಹೋಗಿದ್ದೆ
ತುಂಬಾ ಅಪರೂಪದ ಉದಾತ್ತ ವ್ಯಕಿತ್ವ ಹೊಂದಿದ ಅವರು ಕರಾವಳಿಯ ಕೊಡಗೈ ದಾನಿಯಾಗಿದ್ದರು ಅವರಿಲ್ಲದ ಶೂನ್ಯವನ್ನು ತುಂಬಲು ಎಂದಿಗೂ ಅಸಾಧ್ಯ ಅವರ ಆತ್ಮಕ್ಕೆ ಆ ದೇವನು ಸದ್ಗತಿ ಪಾಲಿಸಲೆಂದು ನಾನು ಪ್ರಾರ್ಥಿಸುತ್ತೇನೆ ಎಂದು ಖ್ಯಾತ ಉದ್ಯಮಿ ಮಡಾಮಕ್ಕಿ ಶಶಿಧರ ಶೆಟ್ಟಿ ಅವರು ಹೇಳಿದರು. ಅವರು ಕನ್ನಡಬಿಮಾನ ಡಾ!!ರಾಜ್ ಸಂಘಟನೆ ಇವರು ಆಯೋಜಿಸಿದ್ದ ದಿ. ವಿ.ಕೆಮೋಹನ್ ಅವರ ಪ್ರಥಮ ವಾರ್ಷಿಕ ಸ್ಮರಣೆಯ ನುಡಿನಮನ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಂಘಟನೆ ಅಧ್ಯಕ್ಷರಾದ ರತ್ನಾಕರ ಪೂಜಾರಿ ಅವರು ವಿ.ಕೆ ಮೋಹನ್ ಹಾಗೂ ಸಂಘಟನೆ ನಡುವಿನ ಭಾಂಧವ್ಯ ಹೇಳಿದರು ಸಭೆಯ ಆರಂಭದಲ್ಲಿ ಸಂಘಟನೆ ಪರವಾಗಿ ಸಲ್ಲಿಸಲಾದ ಶದ್ದಾಂಜಲಿಯನ್ನು ಸುನೀಲ್ ಖಾರ್ವಿ ತಲ್ಲೂರು ವಾಚಿಸಿದರು. ಈ ಸಂದರ್ಭದಲ್ಲಿ ವಿ.ಕೆ ಮೋಹನ್ ಪುತ್ರ ವಿ. ಕೆ ಸಾಗರ್ ಸಹೋದರ ವಿ.ಕೆ ಗೋಪಾಲ್ ಹಾಗೂ ಅವರ ಕುಟುಂಬದ ಬಹುತೇಕರು ಭಾಗವಹಿಸಿದ್ದರು ಸಭೆಯಲ್ಲಿ ವಿ.ಕೆ ಮೋಹನ್ ಅವರ ಅತ್ಯಾಪ್ತ ಶ್ರೀಧರ್ ಗಾಣಿಗ ಹಿರಿಯ ಪತ್ರಕರ್ತ ಮಜರ್ ಕುಂದಾಪುರ ಪತ್ರಕರ್ತ ಯೋಗೇಶ್ ಕುಂಬಾಶಿ ಸಂಘಟನೆಯ ಡುಂಡಿರಾಜ್ ಸಹಿತ ಹಲವು ಗಣ್ಯರು ನುಡಿನಮನ ಸಲ್ಲಿಸಿದರು ಈ ಸಂದರ್ಭದಲ್ಲಿ ಸಂಘಟನೆಯ ಅಜೇಂದ್ರ ಶೆಟ್ಟಿ ಕುಡಾಲು,ಅಗಸ್ಟಿನ್,ರಾಮಚಂದ್ರ ಆನಗಳ್ಳಿ, ಹರ್ಷ ಗಂಗೊಳ್ಳಿ,ನವೀನ್ ಪೂಜಾರಿ, ಗಾಳಿ ಸಚಿನ್ ಖಾರ್ವಿ,ನಾಗರಾಜ ಖಾರ್ವಿ, ದಯಾ ನಾಯಕ್, ಕಿಶನ್,ಪ್ರಭಾಕರ್ ಖಾರ್ವಿ, ರಘು ಪೂಜಾರಿ ಕೋಡಿ,ಉದಯ ಶೆಟ್ಟಿ, ಸೂರ್ಯ ದೇವಾಡಿಗ,ಪ್ರಶಾಂತ್ ಶೆಟ್ಟಿ, ರಾಘು ದೇವಾಡಿಗ,ಸತೀಶ್ ಖಾರ್ವಿ, ಅಶೋಕ್ ಕೋಡಿ, ಹಾಗೂ ಪುರಸಭಾ ಸದಸ್ಯ ಪ್ರಭಾಕರ್ ಸಹಿತ ವಿ.ಕೆ ಮೋಹನ್ ಆತ್ಮೀಯರು ಬಹುತೇಕ ಸಂಖ್ಯೆಯಲ್ಲಿ ಭಾಗವಹಿಸಿದರು. ಹುಸೇನ್ ಹೈಕಾಡಿ ಕಾರ್ಯಕ್ರಮ ನಿರೂಪಿಸಿದರು ಸಂಘಟನೆಯ ಅಜೇಂದ್ರ ಶೆಟ್ಟಿಯವರು ಧನ್ಯವಾದ ಅರ್ಪಿಸಿದರು.