ಕಥೊಲಿಕ್ ಸಭಾ ಕುಂದಾಪುರ ಘಟಕ ಅಧ್ಯಕ್ಷರಾಗಿ ಬರ್ನಾಡ್ ಡಿಕೋಸ್ತಾ ಆಯ್ಕೆ

JANANUDI.COM NETWORK


ಕುಂದಾಪುರ,ಫೆ.8: ಕುಂದಾಪುರ ರೋಜರಿ ಮಾತಾ ಇಗರ್ಜಿಯ ಕಥೊಲಿಕ್ ಸಭಾ ಘಟಕದ ಪದಾಧಿಕಾರಿಗಳ ಅಯ್ಕೆ ಪ್ರಕ್ರಿಯೆ ಫೆಬ್ರವರಿ 7 ರಂದು ಚರ್ಚ್ ಸಭಾ ಭವನದಲ್ಲಿ ನಡೆದು ಬರ್ನಾಡ್ ಡಿಕೋಸ್ತಾ,ಇವರು ಅವೀರೊಧವಾಗಿ ಆಯ್ಕೆಯಾದರು.
ನಿಕಟ ಪೂರ್ವ ಅಧ್ಯಕ್ಷರಾಗಿ ವಾಲ್ಟರ್ ಡಿಸೋಜಾ, ನಿಯೋಜಿತ ಜೂಲಿಯೆಟ್ ಪಾಯ್ಸ್, ಉಪಾಧ್ಯಕ್ಷರಾಗಿ, ಉಲ್ಲಾಸ್ ಕ್ರಾಸ್ತಾ, ಕಾರ್ಯದರ್ಶಿಯಾಗಿ, ಅಲ್ಡ್ರಿನ್ ಡಿಸೋಜಾ, ಸಹ ಕಾರ್ಯದರ್ಶಿಯಾಗಿ, ಪ್ರೇಮಾ ಡಿಕುನ್ಹಾ, ಕೋಶಾಧಿಕಾರಿಯಾಗಿ ಶೈಲಾ ಡಿಆಲ್ಮೇಡಾ, ಸಹ ಕೋಶಾಧಿಕಾರಿಯಾಗಿ ವಿನ್ಸೆಂಟ್ ಡಿಸೋಜಾ, ಆಮ್ಚೊ ಸಂದೇಶ್ ಪತ್ರದ ಪ್ರತಿನಿದಿಯಾಗಿ ಲೋನಾ ಲುವಿಸ್, ರಾಜಕೀಯ ಸಂಚಾಲಕರಾಗಿ ವಿಲ್ಸನ್ ಡಿಆಲ್ಮೇಡಾ, ಸರಕಾರಿ ಸವ್ಲತ್ತು ಸಂಚಾಲಕರಾಗಿ ವಿನೋದ್ ಕ್ರಾಸ್ಟೊ, ಲೆಕ್ಕ ತಪಾಸಣಾಕಾರರಾಗಿ ಡಾ|ಸೋನಿ ಡಿಕೋಸ್ತಾ, ಸ್ವಯಂ ಸೇವಕರಾಗಿ ನಿರ್ಮಲ ಡಿಸೋಜಾ, ಜೋನ್ಸನ್ ಡಿಆಲ್ಮೇಡಾ, ಮಾರ್ಕ್ ಡಿಸೋಜಾ, ಮೈಕಲ್ ಗೊನ್ಸಾಲ್ವಿಸ್ ಮತ್ತು ವೈಲೆಟ್ ಡಿಸೋಜಾ ಆಯ್ಕೆಯಾದರು. ಚುನಾವಣಾ ಪ್ರಕ್ರಿಯೆಯನ್ನು ಮಾಜಿ ಕಥೊಲಿಕ್ ಸಭಾ ಕೇಂದ್ರಿಯ ಅಧ್ಯಕ್ಶರಾದ ಅಲ್ವಿನ್ ಕ್ವಾರ್ಡರ್ಸ್ ಚುನಾವಣಾ ಅಧಿಕಾರಿಯಾಗಿ, ವೀಕ್ಷಕರಾಗಿ ಮಾಜಿ ಕುಂದಾಪುರ ವಲಯ ಅಧ್ಯಕ್ಷರಾದ ಹೆರಿಕ್ ಗೊನ್ಸಾಲ್ವಿಸ್ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಘಟಕದ ಅಧ್ಯಾತ್ಮಿಕ ನಿರ್ದೇಶಕರಾದ ಅ|ವ|ಸ್ಟ್ಯಾನಿ ತಾವ್ರೊ, ‘ಕಾರ್ಯಕ್ರಮಗಳನ್ನು ಉತ್ತಮವಾಗಿ ಸಂಯೋಜಿಸಿರಿ, ನಂತರ ಅದನ್ನು ಕಾರ್ಯಗತಗೊಳಿಸಿ, ಮತ್ತು ಅದರ ಮರು ಮೌಲ್ಯಮಾಪನ ಮಾಡಬೇಕು, ಹಾಗೆ ಸಮಾಜಕ್ಕೆ ಒಳಿತಾಗುವ ಒಳ್ಳೆಯ ಕಾರ್ಯಕ್ರಮಗಳನ್ನು ಮಾಡಿರಿ’ ಎಂದು ಶುಭ ಕೋರಿದರು.