2020-21 ನೇ ಸಾಲಿನಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖಾ ವತಿಯಿಂದ ಮೆಟ್ರಿಕ್ ಪೂರ್ವ , ಮೆಟ್ರಿಕ್ ನಂತರದ ಹಾಗೂ ಮೆರಿಟ್ ಕಂ ಮೀನ್ಸ್ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

2020-21 ನೇ ಸಾಲಿನಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖಾ ವತಿಯಿಂದ ಮೆಟ್ರಿಕ್ ಪೂರ್ವ , ಮೆಟ್ರಿಕ್ ನಂತರದ ಹಾಗೂ ಮೆರಿಟ್ ಕಂ ಮೀನ್ಸ್ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ . ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಲು ಮತೀಯ ಅಲ್ಪಸಂಖ್ಯಾತರ ವರ್ಗಕ್ಕೆ ಸೇರಿರಬೇಕಾಗಿರುತ್ತದೆ . ( ಮುಸ್ಲಿಂ , ಜೈನ್ , ಕ್ರಿಶ್ಚಿಯನ್ , ಸಿಖ್ , ಭೌದ್ಧ ಮತ್ತು ಪಾರ್ಸಿ ) ಎನ್.ಎಸ್.ಪಿ ನಲ್ಲಿ ವಿದ್ಯಾರ್ಥಿವೇತನಕ್ಕೆ ಆನ್‌ಲೈನ್ ಮಾಡಿರುವ ವಿದ್ಯಾರ್ಥಿಗಳು ಸಹ ಎಸ್.ಎಸ್.ಪಿ ನಲ್ಲಿ ವಿದ್ಯಾರ್ಥಿವೇತನಕ್ಕೆ ಕಡ್ಡಾಯವಾಗಿ ಅರ್ಜಿಗಳನ್ನು ಆಪ್‌ಲೋಡ್ ಮಾಡಬೇಕಾಗಿರುತ್ತದೆ . ಅರ್ಹ ವಿದ್ಯಾರ್ಥಿಗಳು ವೆಬ್ ಸೈಟ್ http://ssp.karnataka.gov.in ನಲ್ಲಿ ಆನ್‌ಲೈನ್ ಮೂಲಕ ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ . ಅರ್ಜಿ ಸಲ್ಲಿಸಲು ಮಾರ್ಚ್ 31 ಕೊನೆಯ ದಿನಾಂಕವಾಗಿದೆ . ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08152-295257 ಗೆ ವೆಬ್‌ಸೈಟ್ ವಿಳಾಸ WWW.domkarnataka.nic.in ಅಥವಾ ಜಿಲ್ಲಾ ಕಛೇರಿ , ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ , ನೆಲ ಮಹಡಿ , ಮೌಲಾನಾ ಆಜಾದ್ ಭವನ , ಶ್ರೀ ದೇವರಾಜ್ ಅರಸು ಬಡಾವಣೆ , 2 ನೇ ಬ್ಲಾಕ್ , ಟಮಕ ವಾರ್ಡ್ ನಂ .1 , ಕೋಲಾರ ಇಲ್ಲಿಗೆ ಸಂಪರ್ಕಿಸಬಹುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ತಿಳಿಸಿದ್ದಾರೆ .

Scholarship for Students of Pre-Matric, Post-Matric and Merit Co. Means by Minority Welfare Department, 2020-21

Applications for Scholarships for Pre-Matric, Post-Matric and Merit Co. Means students are invited by the Minority Welfare Department for the year 2020-21. Students must be in the minority class to apply. (Muslim, Jain, Christian, Sikh, Buddhist and Parsi) Students who are online for scholarship in NSP also have to upload the compulsory applications for scholarship in SSP. Eligible students are advised to apply online with the relevant documents on the web site http://ssp.karnataka.gov.in. The deadline to apply is March 31. For more information contact the website www.domkarnataka.nic.in or phone office 08152-295257. District officials of the Minority Welfare Department said.