ಎನ್‍ಜಿಎಚ್‍ಎಸ್ 1995 ಸಾಲಿನ ವಿದ್ಯಾರ್ಥಿಗಳ ಹೃದಯವಂತಿಕೆ : ಮುಸ್ಸಂಜೆ ಮನೆ ವೃದ್ದಾಶ್ರಮಕ್ಕೆ ಹಲವಾರು ಸಾಮಗ್ರಿ ನೆರವು

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ನಗರದ ನೂತನ ಸರ್ಕಾರಿ ಪ್ರೌಢಶಾಲೆಯ 1995ನೇ ಸಾಲಿನ ಹಳೆಯ ವಿದ್ಯಾರ್ಥಿಗಳು ನಗರದ ಮುಸ್ಸಂಜೆ ವೃದ್ದಾಶ್ರಮಕ್ಕೆ ಮಂಚಗಳು,ಕುರ್ಚಿಗಳು ಮತ್ತು ಅಲ್ಲೇರಾ ಮತ್ತಿತರ ಅಗತ್ಯ ವಸ್ತುಗಳನ್ನು ಕೊಡುಗೆಯಾಗಿ ವಿತರಿಸಿದರು.
ಈ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿ ವೃಂದದ ಸಂಯೋಜಕ ಜಿ.ಮಹೇಶ್, ತಾವು ಮತ್ತು ತಮ್ಮ ಸಹಪಾಠಿಗಳು ವಿದ್ಯಾರ್ಥಿ ದೆಸೆಯಿಂದಲೂ ಪ್ರತಿ ವರ್ಷ ಸೇವಾ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದ್ದೇವೆ ಎಂದರು.
ಈ ಬಾರಿ ಮುಸ್ಸಂಜೆ ಮನೆ ಸೇವಾಶ್ರಮದಲ್ಲಿ ಅಗತ್ಯವಿರುವ ವಸ್ತುಗಳನ್ನು ವಿತರಿಸುವ ಉದ್ದೇಶದಿಂದ ಇಲ್ಲಿಗೆ ಬಂದಿದ್ದೇವೆ, ಇಲ್ಲಿನ ಹಿರಿಯರಿಗೆ ನೆರವಾಗಿದ್ದಕ್ಕೆ ಸಂತಸವಿದೆ ಎಂದರು.
ಸೇವಾಶ್ರಮಕ್ಕೆ ಇನ್ನು ಸಹಕಾರ ನೀಡುವುದಾಗಿ ತಿಳಿಸಿದ ಅವರು, ಇದನ್ನು ಸದುಪಯೋಗಪಡಿಸಿಕೊಳ್ಳಿ ಎಂದು ತಿಳಿಸಿ ಇದೊಂದು ಪುಣ್ಯದಕೆಲಸ ಎಂದರು.
ಈ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿ ಎಸ್.ಆರ್.ರಮೇಶ್ ಮಾತನಾಡಿ, ಅನಾಥ ಮಕ್ಕಳು, ವಯೋವೃದ್ದರ ಸೇವೆ ದೇವರ ಸೇವೆ ಇದ್ದಂತೆ, ಇಂತಹ ಕಾರ್ಯದಲ್ಲಿ ಸಮಾಜ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.
ಜಾಗೃತಿ ಸೇವಾ ಸಂಸ್ಥೆ ಹಾಗೂ ಮುಸ್ಸಂಜೆ ಮನೆ ಅಧ್ಯಕ್ಷ ಕೆ.ಆರ್.ಧನರಾಜ್, ಹಳೆ ವಿದ್ಯಾರ್ಥಿಗಳು ತಮ್ಮ ಸ್ನೇಹ ಇಷ್ಟು ವರ್ಷಗಳಾದರೂ ಮುಂದುವರೆಸಿಕೊಂಡು ಇಂತಹ ಸಾಮಾಜಿಕ ಕಾರ್ಯಗಳಿಗೆ ನೆರವಾಗುತ್ತಿರುವುದು ಅವರ ಹೃದಯವಂತಿಕೆಗೆ ಸಾಕ್ಷಿಯಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿಗಳಾದ ಮಧು,ರೂಪೇಶ್,ವೇಣುಗೋಪಾಲ್ ನಾಯಕ್, ಅಮರ್, ವೇಣುಗೋಪಾಲ್, ಅನಂತಪದ್ಮನಾಭನ್ ಮತ್ತಿತರರಿದ್ದರು
.