ಸರ್ಕಾರ ಕೋಳಿ ಸಾಕಾಣಿಕೆಗೆ ಕೃಷಿ ಸ್ಥಾನ ನೀಡಬೇಕು : ತಿಮ್ಮರಾಯಪ್ಪ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಸರ್ಕಾರ ಕೋಳಿ ಸಾಕಾಣಿಕೆಗೆ ಕೃಷಿ ಸ್ಥಾನ ನೀಡಬೇಕು ಎಂದು ಕರ್ನಾಟಕ ರಾಜ್ಯ ಕೋಳಿ ಸಾಕಾಣಿಕೆದಾರರ ಕ್ಷೇಮಾಭಿವೃದ್ಧಿ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ತಿಮ್ಮರಾಯಪ್ಪ ಆಗ್ರಹ ಪಡಿಸಿದರು.
ಪಟ್ಟಣದಲ್ಲಿ ಮಂಗಳವಾರ, ಬೆಂಗಳೂರಿನಲ್ಲಿ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಲು ತೆರಳಿದ ತಾಲ್ಲೂಕು ಕೋಳಿ ಸಾಕಾಣಿಕೆದಾರ ಬೀಳ್ಕೊಡುತೆ ಸಮಾರಂಭದಲ್ಲಿ ಮಾತನಾಡಿ, ಸರ್ಕಾರ ಈಗಾಗಲೇ ಪ್ರಕಟಿಸಿರುವಂತೆ ಒಂದು ಕೆಜಿ ಕೋಳಿಗೆ ರೂ.7.5 ಬೆಂಬಲ ಬೆಲೆ ನೀಡಬೇಕು. ಎಲ್ಲ ರೈತರಿಗೆ ನಿಗದಿತ ಸಮಯಕ್ಕೆ ಸರಿಯಾಗಿ ಕೋಳಿ ಮರಿಗಳನ್ನು ಪೂರೈಕೆ ಮಾಡಬೇಕು. ಕೋಳಿ ದರದ ಬಗ್ಗೆ ಬಿಳಿ ಕಾಗದದ ಮೇಲೆ ಸಹಿ ಪಡೆಯುವ ಕೋಳಿ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಬೇರೆ ಬೇರೆ ಕಾರಣಗಳಿಂದ ಕೋಳಿ ಸಾಕಾಣಿಕೆ ನಷ್ಟದ ಕಸುಬಾಗಿ ಪರಿಣಮಿಸಿದೆ. ಕೋಳಿ ಸಾಕಾಣಿಕೆದಾರರು ಸತತವಾಗಿ ನಷ್ಟ ಅನುಭವಿಸುತ್ತಿದ್ದಾರೆ. ಆದರೆ ಸರ್ಕಾರ ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿಲ್ಲ. ಇದು ಕೋಳಿ ಸಾಕಾಣಿಕೆಗೆ ದೊಡ್ಡ ಪೆಟ್ಟಾಗಿ ಪರಿಣಮಿಸಿದೆ. ಸಂಕಷ್ಟದ ಸಂದರ್ಭದಲ್ಲಿ ಸರ್ಕಾರ ಕೋಳಿ ಸಾಕಾಣಿಕೆದಾರರ ರಕ್ಷಣೆಗೆ ಬರಬೇಕು ಎಂದು ಮನವಿ ಮಾಡಿದರು.
ಸಂಘದ ಕಾರ್ಯದರ್ಶಿ ಅನಿಲ್ ಕುಮಾರ್, ಮುಖಂಡರಾದ ಶೇಷಾಪುರ ಗೋಪಾಲ್, ಆರ್.ಚಂಗಪ್ಪ, ಮುನಿವೆಂಕಟಪ್ಪ , ಪಾತಕೋಟ ನವೀನ್ ಕುಮಾರ್, ಸೋಮಪ್ಪ ಇದ್ದರು.