ಕೋಲಾರ ತಾಲ್ಲೂಕಿನ ಯಡಹಳ್ಳಿ ಗ್ರಾಮದಲ್ಲಿ ಅಲೂಗಡ್ಡೆ ಬೆಳೆ ಕ್ಷೇತ್ರೋತ್ಸವ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

module: a; hw-remosaic: 0; touch: (-1.0, -1.0); modeInfo: ; sceneMode: Auto; cct_value: 0; AI_Scene: (200, -1); aec_lux: 0.0; hist255: 0.0; hist252~255: 0.0; hist0~15: 0.0;

ಅಲೂಗಡ್ಡೆ ಬೆಳೆ ಕ್ಷೇತ್ರೋತ್ಸವ: ಆಲೂಗಡ್ಡೆ ಬೆಳೆಯಲ್ಲಿ ಅಂಗಮಾರಿ ರೋಗವು ಪ್ರಮುಖ ರೋಗವಾಗಿದ್ದು ಇದರ ನಿರ್ವಹಣೆಯ ಬಗ್ಗೆ ಕೃಷಿ ವಿಜ್ಞಾನ ಕೇಂದ್ರ, ಕೋಲಾರವು ತಾಲ್ಲೂಕಿನ ಯಡಹಳ್ಳಿ ಗ್ರಾಮದಲ್ಲಿ ಶ್ರೀ. ಶಾಮಾಚಾರಿ ರೈತರ ಹೊಲದಲ್ಲಿ ಮುಂಚೂಣಿ ಪ್ರಾತ್ಯೆಕ್ಷಿಕೆ ಹಮ್ಮಿಕೊಂಡಿದ್ದು, ದಿನಾಂಕ 05.02.2021 ರಂದು ‘ಆಲೂಗಡ್ಡೆ ಬೆಳೆಯ ಕ್ಷೇತ್ರೋತ್ಸವ’ದಲ್ಲಿ ಪಾಲ್ಗೊಂಡಿದ್ದ ಕೃಷಿ ವಿಜ್ಞಾನ ಕೇಂದ್ರದ ಸಸ್ಯ ಸಂರಕ್ಷಣೆ ವಿಜ್ಞಾನಿಯಾದ ಡಾ. ಅಂಬಿಕಾ ಡಿ.ಎಸ್ ರೈತರನ್ನು ಉದ್ದೇಶಿಸಿ ಮಾತನಾಡಿ ಆಲೂಗಡ್ಡೆ ಬೆಳೆಯಲ್ಲಿ ಬರುವ ಅಂಗಮಾರಿ ರೋಗದ ನಿಯಂತ್ರಣಕ್ಕೆ ಭೂಮಿ ಸಿದ್ದತೆಯಿಂದ ಹಿಡಿದು- ಕಟಾವಿನವರೆಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಲ್ಲಿ ಯಶಸ್ವಿಯಾಗಿ ನಿಯಂತ್ರಣ ಮಾಡಬಹುದೆಂದು ತಿಳಿಸಿದರು. ಜೈವಿಕ ಪೀಡೆ ನಾಶಕಗಳಾದ ಟ್ರೈಕೋಡರ್ಮ ಮತ್ತು ಸ್ಯೂಡೋಮೋನಾಸನ್ನು ಭೂಮಿಯಲ್ಲಿ ಕೊಟ್ಟಿಗೆ ಗೊಬ್ಬರದ ಮೂಲಕ ಕೊಡುವುದು ಅಲ್ಲದೇ ನೀರಿನ ರೂಪದಲ್ಲಿ ಹನಿನೀರಾವರಿ ಮುಖಾಂತರ ಕೂಡ ಕೊಡಬಹುದು. ಆರೋಗ್ಯವಂತ ಆಲೂಗಡ್ಡೆಯ ಬಿತ್ತನೆ ಗಡ್ಡೆಯನ್ನು ಬಿತ್ತನೆಗೆ ಉಪಯೋಗಿಸುವುದು ಅದೇ ರೀತಿ ವಾತಾವರಣ ನೋಡಿಕೊಂಡು ಸೂಕ್ತ ಶಿಲೀಂದ್ರನಾಶಕಗಳನ್ನು ಬಳಸಿ ಎಂದು ತಿಳಿಸಿದರು. ಡಾ. ಜ್ಯೋತಿ ಕಟ್ಟೆಗೌಡರ, ತೋಟಗಾರಿಕೆ ವಿಜ್ಞಾನಿ ಕ್ಷೇತ್ರೋತ್ಸವದಲ್ಲಿ ಮಾತನಾಡಿ, ವೈಜ್ಞಾನಿಕ ಪದ್ಧತಿಗಳ ಬಗ್ಗೆ ತಿಳಿಸಿದರು. ಯಡಹಳ್ಳಿ ಗ್ರಾಮದ ರೈತರು ಪಾಲ್ಗೊಂಡಿದ್ದರು.

.