ಭಾರತ ಸೇವಾದಳದಿಂದ 72 ನೇ ಗಣರಾಜ್ಯೋತ್ಸವ ಪ್ರತಿ ಮಗುವನ್ನು ದೇಶಪ್ರೇಮಿಗಳಾಗಿಸಿ- ಬಿಇಒ ನಾಗರಾಜಗೌಡ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ಶಿಕ್ಷಕರು ಮತ್ತು ಪ್ರತಿಯೊಬ್ಬ ಭಾರತೀಯರು ತಮ್ಮ ಮಕ್ಕಳನ್ನು ದೇಶ ಪ್ರೇಮಿಗಳಾಗಿ ಬೆಳೆಸಲು ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ಆದರ್ಶವಾಗಿಸಬೇಕೆಂದು ಕ್ಷೇತ್ರಶಿಕ್ಷಣಾಧಿಕಾರಿ ಕೆ.ಎಸ್.ನಾಗರಾಜಗೌಡ ಹೇಳಿದರು.
ನಗರದ ಕ್ಷೇತ್ರ ಶಿಕ್ಷಣಾ„ಕಾರಿಗಳ ಕಚೇರಿ ಆವರಣದಲ್ಲಿ ಭಾರತ ಸೇವಾದಳ, ಬಿಇಒ ಕಚೇರಿ ಹಾಗೂ ಮೂರು ಸರಕಾರಿ ಶಾಲೆಗಳ ಆಶ್ರಯದಲ್ಲಿ ಆಯೋಜಿಸಲಾಗಿದ್ದ 72 ನೇ ಗಣರಾಜ್ಯೋತ್ಸವ ದಿನಾಚರಣೆಯ ಮುಖ್ಯ ಅತಿಥಿಯಾಗಿ ಅವರು ಮಾತನಾಡುತ್ತಿದ್ದರು.
ಅನೇಕ ಮಹನೀಯರ ತ್ಯಾಗ ಬಲಿದಾನಗಳಿಂದ ಕಾಶ್ಮೀರದಿಂದ ಕನ್ಯಾಕುಮಾರಿಯವರೆವಿಗೂ ವೈವಿಧ್ಯ ಸಂಸ್ಕøತಿ ಭಾಷೆ ರಾಜ್ಯಗಳ ನಡುವೆಯೂ ಅಖಂಡವಾಗಿರುವ ಭಾರತ ದೇಶವನ್ನು ಯಾವುದೇ ಶಕ್ತಿ ವಿಭಜಿಸಲು ಸಾಧ್ಯವಾಗದಂತ ಬಲಿಷ್ಠಗೊಳಿಸಬೇಕಾದರೆ ಸಂವಿಧಾನದ ಪಾಲನೆ ಅತ್ಯಗತ್ಯ ಎಂದರು.
ಭಾರತ ಸೇವಾದಳ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಸಾಮೂಹಿಕ ಸಾಂಕ್ರಾಮಿಕ ರೋಗಗಳು ಮಾನವ ಕುಲಕ್ಕೆ ಸವಾಲು ಒಡ್ಡುತ್ತಿರುವ ಹಿನ್ನೆಲೆಯಲ್ಲಿ ಸಂವಿಧಾನದ ಸಮಾನತೆ, ಸಹೋದರತೆ, ಸಹಿಷ್ಣುತೆ ತತ್ವಗಳ ಜೊತೆಗೆ ಸ್ವಚ್ಛತೆ ಹಾಗೂ ಸ್ವಾಸ್ಥ್ಯವನ್ನು ಪಾಲಿಸಲು ಪ್ರತಿಯೊಬ್ಬರು ಮುಂದಾಗಬೇಕೆಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸರಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಚೌಡಪ್ಪ, ಸೇವಾದಳ ಕಾರ್ಯದರ್ಶಿ ಹಾಗೂ ರೋಟರಿ ಸೆಂಟ್ರಲ್ ಅಧ್ಯಕ್ಷ ಎಸ್.ಸುಧಾಕರ್, ಪದಾ„ಕಾರಿಗಳಾದ ವಿ.ಪಿ.ಸೋಮಶೇಖರ್, ವೈ.ಶಿವಕುಮಾರ್, ಶ್ರೀರಾಮ್, ಸಂಪತ್‍ಕುಮಾರ್, ಅಪ್ಪಿ ನಾರಾಯಣಸ್ವಾಮಿ, ಆರ್.ಗೋಪಾಲ್, ಮುನೇಶ್, ರಾಜೇಶ್‍ಸಿಂಗ್, ಫಲ್ಗುಣ, ಪೈಂಟರ್ ಬಷೀರ್, ಮುನಿವೆಂಕಟ್, ಮಣಿ, ಮನೋಹರ್, ಮೂರು ಶಾಲೆಗಳ ಮುಖ್ಯ ಶಿಕ್ಷಕರು ಮತ್ತು ಸಿಬ್ಬಂದಿ, ಬಿಇಒ ಕಚೇರಿ ಸಿಬ್ಬಂದಿ ಪಾಲ್ಗೊಂಡಿದ್ದರು.
ಭಾರತ ಸೇವಾದಳ ನಿಯಮಗಳಂತೆ ವಂದೇ ಮಾತರಂ, ರಾಷ್ಟ್ರಗೀತೆ, ಝಂಡಾ ಗೀತೆಗಳ ಸಾಮೂಹಿಕ ಗಾಯನ ನೆರವೇರಿತು.
ಇದೇ ಸಂದರ್ಭದಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಮೂರು ತಿಂಗಳ ನಂತರ ನಿವೃತ್ತರಾಗುತ್ತಿರುವ ಕೆ.ಎಸ್.ನಾಗರಾಜಗೌಡರನ್ನು ಮೂರು ಶಾಲೆಗಳ ಶಿಕ್ಷರಿಯರು ಆತ್ಮೀಯವಾಗಿ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಸಿಹಿ ವಿತರಣೆ ನಡೆಯಿತು.
ಭಾರತ ಸೇವಾದಳ ಸಂಘಟಿಕ ಎಂ.ಬಿ.ದಾನೇಶ್ ಕಾರ್ಯಕ್ರಮ ನಿರ್ವಹಿಸಿದರು.