ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಕೋಲಾರ : ಜನ ಸಾಮಾನ್ಯರಿಗೆ ಹೊರೆಯಾಗುತ್ತಿರುವ ತೈಲ ಬೆಲೆಗಳ ಏರಿಕೆಗೆ ಕಡಿವಾಣ ಹಾಕಿ ಕೃಷಿ ಕಾಯ್ದೆಗಳ ಬಗ್ಗೆ ಚರ್ಚೆ ಮಾಡಲು ವಿಶೇಷ ಅಧಿವೇಶನ ಕರೆಯಬೇಕೆಂದು ಗಣರಾಜ್ಯೋತ್ಸವ ಪರ್ಯಾಯವಾಗಿ ರೈತ ಗಣರಾಜ್ಯೋತ್ಸವವನ್ನು ವಿಬಿನ್ನವಾಗಿ ರೈತಸಂಘದಿಂದ ಗಾಂಧಿ ಪ್ರತಿಮೆಯಿಂದ ಎತ್ತಿನ ಬಂಡಿ ಹಾಗು ನೇಗಿಲುಗಳ ಮೂಲಕ ಹೊಸ ಬಸ್ ನಿಲ್ದಾಣದ ವರಗು ರ್ಯಾಲಿ ನಡೆಸಿ ಪಿಎಸ್ಐ ಅಣ್ಣಯ್ಯ ಮುಖಾಂತರ ಮಾನ್ಯ ರಾಷ್ಟ್ರಪತಿರವರಿಗೆ ಮನವಿ ಸಲ್ಲಿಸಿ ಆಗ್ರಹಿಸಲಾಯಿತು.
ರ್ಯಾಲಿಯ ನೇತೃತ್ವವಹಿಸಿ ಮಾತನಾಡಿದ ರೈತಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಕೇಂದ್ರ ಸರ್ಕಾರ ಜನಾಭಿಪ್ರಾಯ ವಿಲ್ಲದೆ ಏಕಾಏಕಿ ರೈತ, ದಲಿತ, ಕಾರ್ಮಿಕ, ವಿರೋಧಿ ಕಾಯ್ದೆಗಳನ್ನು ರಾತ್ರೋರಾತ್ರಿ ಜಾರಿಗೆ ತಂದು ಕೋಟ್ಯಾಂತರ ಬಡ ಕುಟುಂಬಗಳನ್ನು ಬೀದಿ ಪಾಲು ಮಾಡುವುದು ಒಂದು ಕಡೆಯಾದರೆ ಮತ್ತೊಂದು ಕಡೆ ಇಡೀ ದೇಶವನ್ನೇ ಖಾಸಗಿ ಕಂಪನಿ ಮಾಲೀಕರ ಕೈಗೆ ಕೊಟ್ಟು ಮತ್ತೆ ಗುಲಾಮಗಿರಿಗೆ ದೇಶವನ್ನು ಕೊಡುವ ಸಮಯ ದೂರವಿಲ್ಲ ಎಂದು ಎಚ್ಚರಿಕೆ ನೀಡಿದರು.
ಮತ್ತೊಂದೆಡೆ ಮಾನ್ಯ ಪ್ರಧಾನ ಮಂತ್ರಿಗಳು ಈಗಾಗಲೇ ಕೃಷಿ ಕ್ಷೇತ್ರವನ್ನು ಕಾರ್ಪೋರೇಟ್ ಕಂಪನಿಗಳ ಮಾಲೀಕರಿಗೆ ಅಡಹಿಟ್ಟು, ಆಹಾರ ಭದ್ರತೆಯ ಅಭಾವವನ್ನು ಸೃಷ್ಟಿ ಮಾಡಿ ತುತ್ತು ಊಟಕ್ಕಾಗಿ ಹೊರದೇಶದ ಬಳಿ ಕೈಚಾಚಬೇಕಾದ ಪರಿಸ್ಥಿತಿ ತರುತ್ತಿದ್ದಾರೆ ಎಂದು ಕಿಡಿಕಾರಿದರು.
ತಾಲ್ಲೂಕಧ್ಯಕ್ಷ ಈಕಂಬಳ್ಳಿ ಮಂಜುನಾಥ್ ಮಾತನಾಡಿ ಉದ್ಯೋಗ ನೀಡುತ್ತಿರುವ ಸರ್ಕಾರಿ ಒಡೆತನದ ಕಾರ್ಖಾನೆಗಳನ್ನು ಖಾಸಗಿಕರಣ ಮಾಡಿ ಅದನ್ನೇ ನಂಬಿರುವ ಲಕ್ಷಾಂತರ ಕಾರ್ಮಿಕರನ್ನು ಹಾಗೂ ಅವರ ಕುಟುಂಬಗಳನ್ನು ಬೀದಿಗೆ ತಳ್ಳುವ ನಿರ್ಧಾರವನ್ನು ತಗೆದುಕೊಳ್ಳುವ ಜೊತೆಗೆ ದೇಶದಲ್ಲಿ ನಿರುದ್ಯೋಗ ಹೆಚ್ಚಾಗುತ್ತಾ ಮುಂದಿನ ದಿನಗಳಲ್ಲಿ ಕೆಲಸ ಇಲ್ಲದೆ ಯುವಕರು ಆತ್ಮಹತ್ಯೆಯತ್ತ ಮುಖಾ ಮಾಡುವಂತ ಪರಿಸ್ಥಿತಿ ಬರುವ ಭವಿಷ್ಯವಿದೆ ಎಂದು ಎಚ್ಚರಿಕೆ ನೀಡಿದರು.
ಬಿ.ಇ.ಎಂಎಲ್. ಕಾರ್ಖಾನೆಯನ್ನು ಖಾಸಗಿಕರಣ ಮಾಡುವ ನಿರ್ದಾರವನ್ನು ಕೈಬಿಡಬೇಕೆಂದು ಮಾನ್ಯರಲ್ಲಿ ಮನವಿಯ ಜೊತೆಗೆ ಕೋವಿಡ್ ವೈರಸ್ನಿಂದ ತತ್ತರಿಸಿ ಜೀವನ ನಿರ್ವಹಣೆ ಕಷ್ಟವಾಗಿರುವ ಸಮಯದಲ್ಲಿ ದಿನೇದಿನೇ ಕಚ್ಛಾ ತೈಲದ ಬೆಲೆ ಏರಿಕೆ ನೆಪದಲ್ಲಿ ಪ್ರತಿದಿನ 15 ಪೈಸೆಯಿಂದ 50 ಪೈಸೆಯತನಕ ತೈಲಬೆಲೆಗಳು ಏರಿಕೆಯಾಗಿ ಸೆಂಚುರಿಯತ್ತ ದಾಪುಗಾಲು ಹಾಕಿ ಗಿನ್ನೀಸ್ ದಾಖಲೆ ಮಾಡುವ ಸನಿಹಕ್ಕೆ ಬಂದು ನಿಂತಿದ್ದರೂ ಇದರ ಬಗ್ಗೆ ಮೌನವಾಗಿರುವುದಕ್ಕೆ ಜನಸಾಮಾನ್ಯರು ಅಸಧಾನ ವ್ಯಕ್ತಪಡಿಸುತ್ತಿದ್ದಾರೆ.
ಹಾಗೂ ಜನಾಭಿಪ್ರಾಯವಿಲ್ಲದ ಕೃಷಿ ಕಾಯಿದೆಗಳ ಆದೇಶಕ್ಕೆ ಮಾನ್ಯ ಗೌರವಾನ್ವಿತ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದ್ದರೂ ರೈತರು ಕಾಯಿದೆಗಳು ಹಿಂಪಡೆಯುವವರೆಗೂ ಹೋರಾಟ ಹಿಂಪಡೆಯುವುದಿಲ್ಲ ಅಲ್ಲದೆ ಸಾವಿರಾರು ಟ್ರಾಕ್ಟರ್ಗಳೊಂದಿಗೆ ಜನವರಿ 26ರ ಗಣರಾಜ್ಯೋತ್ಸವದಂದು ವಿಶೇಷ ಟ್ರಾಕ್ಟರ್ ಫೆರೇಡ್ಗೆ ಬೆಂಬಲವಾಗಿ ವಿಶೇಷ ರೈತ ಪೆರೇಡ್ ನಡೆಸುವ ಮುಖಾಂತರ ಮಾನ್ಯ ರಾಷ್ಟ್ರಪತಿರವರಿಗೆ ಮನವಿ ಸಲ್ಲಿಸಿ ಈ ಕಾಯ್ದೆಗಳನ್ನು ಹಿಂಪಡೆದು ರೈತರ ಕೃಷಿ ಕಾಯಿದೆಗಳ ಬಗ್ಗೆ ಕೂಲಂಕುಶವಾಗಿ ಪರಿಶೀಲನೆ ಮಾಡಲು ವಿಶೇಷ ಸಂಸತ್ ಅಧಿವೇಶನ ಕರೆಯಬೇಕೆಂದು ಮಾನ್ಯ ಪ್ರಧಾನಮಂತ್ರಿಗಳಿಗೆ ಸೂಚಿಸಬೇಕೆಂದು ಸಮಸ್ತ ರೈತರ, ಕಾರ್ಮಿಕರ, ದಲಿತ ಪರವಾಗಿ ಮನವಿ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಅಣ್ಣಯ್ಯನವರು ನಿಮ್ಮ ಮನವಿಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸುವ ಭರವಸೆಯನ್ನು ನೀಡಿದರು.
ಹೋರಾಟದಲ್ಲಿ ಜಿಲ್ಲಾ ಸಂಚಾಲಕ ಕೆ. ಶ್ರೀನಿವಾಸಗೌಡ, ರಾಜ್ಯ ಸಂಚಾಲಕ ಬಂಗವಾದಿ ನಾಗರಾಜ್ಗೌಡ, ತೆರ್ನಹಳ್ಳಿ ಆಂಜನಪ್ಪ, ಮುಳಬಾಗಿಲು ತಾ. ಅಧ್ಯಕ್ಷ ಫಾರೂಕ್ ಪಾಷಾ, ಜಿಲ್ಲಾಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್, ಹಸಿರುಸೇನೆ ಜಿಲ್ಲಾಧ್ಯಕ್ಷ ಕಿರಣ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಾಂದ್ಪಾಷ, ಹಸಿರುಸೇನೆ ತಾಲೂಕು ಅಧ್ಯಕ್ಷ ಚಲಪತಿ, ನಳಿನಿ.ವಿ ಸುನಿತ, ಲಕ್ಷ್ಮಿ, ಐಶ್ವರ್ಯ, ವಿನುತಾ, ಶಾಂತಮ್ಮ, ಮಹಮದ್ ಬುರಾನ್, ಜಮೀರ್ಪಾಷ, ಬಾಬಾಜಾನ್, ಘೌಸ್ಪಾಷ, ಮಾಲೂರು ತಾ.ಅ ಮಾಸ್ತಿವೆಂಕಟೇಶ್, ಜಾವೀದ್ ಮಹಮದ್ ಶೋಯೀಬ್, ಸುಪ್ರೀಂಚಲ, ಮಂಜುನಾಥ್, ನಾಯಕರಹಳ್ಳಿ ಮಂಜು, ರಜನಿ, ಪ್ರೇಮ್ ಕುಮಾರ್, ಸಂತೋಷ್, ಸಾಕೀರ್, ನಸೀಮ್, ಜಮೀರ್, ಪ್ರಶಾಂತ್, ಸುಬ್ರಮಣಿ, ಅನಿಲ್, ಗಂಗರಾಜು, ಅಂಜಿನಪ್ಪ, ನಿಕಿತ್ ಕುಮಾರ್, ವಕ್ಕಲೇರಿ ಹನುಮಯ್ಯ, ಅರುಣ್, ನಾಗೇಶ್ ರಾವ್, ಕಿರಣ್ ರಾವ್, ದನುಷ್, ಮಹೇಂದ್ರ, ನಾರಾಯಣ್, ನಾರಾಯಣಪ್ಪ, ಮತ್ತಿತರರು ಭಾಗವಹಿಸಿದ್ದರು.