ಭಾರತ ಸೇವಾದಳದಿಂದ ಸುಭಾಷ್ ಚಂದ್ರಬೋಸ್‍ರ ಜನ್ಮದಿನಾಚರಣೆ: ಭಾರತದ ಬಲಿಷ್ಠ ಸೇನೆಗೆ ಸುಭಾಷ್‍ಚಂದ್ರಬೋಸ್‍ರಿಂದ ಬುನಾದಿ- ಜಗನ್

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ಭಾರತ ದೇಶವು ವಿಶ್ವದಲ್ಲಿಯೇ ಬಲಿಷ್ಠ ಸೇನಾ ಬಲವನ್ನು ಹೊಂದಲು ಸುಭಾಷ್ ಚಂದ್ರಬೋಸ್ ಸ್ವಾತಂತ್ರ್ಯ ಪೂರ್ವದಲ್ಲಿಯೇ ಬುನಾದಿ ಹಾಕಿದ್ದರೆಂದು ಮಾಜಿ ಯೋಧರ ಸಂಘದ ಅಧ್ಯಕ್ಷ ಜಗನ್ ಹೇಳಿದರು.
ನಗರದ ಭಾರತ ಸೇವಾದಳದ ಜಿಲ್ಲಾ ಕಚೇರಿಯಲ್ಲಿ ಸುಭಾಷ್ ಚಂದ್ರಬೋಸರ 125 ನೇ ಜನ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಭಾವಚಿತ್ರಕ್ಕೆ ಪುಷಾರ್ಚನೆ ಮಾಡಿ ಅವರು ಮಾತನಾಡುತ್ತಿದ್ದರು.
ಸ್ವಾತಂತ್ರ್ಯ ಪೂರ್ವದಲ್ಲಿಯೇ ಭಾರತ ದೇಶವು ಬಲಿಷ್ಠವಾದ ಸೇನೆಯನ್ನು ಹೊಂದಬೇಕೆಂಬ ಕನಸನ್ನು ಬೋಸರು ಮೊದಲಿಗೆ ಕಂಡಿದ್ದರು. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಲು ಲಕ್ಷಾಂತರ ಯೋಧರು ಸಜ್ಜಾಗಿದ್ದಾರೆ, ಯೋಧರ ಸೇವೆಯನ್ನು ಸಮಾಜವು ಇತ್ತೀಚಿನ ದಿನಗಳಲ್ಲಿ ಗೌರವಿಸುತ್ತಿರುವುದು ಸ್ವಾಗತಾರ್ಹವೆಂದರು.
ಅಧ್ಯಕ್ಷತೆವಹಿಸಿದ್ದ ಭಾರತ ಸೇವಾದಳ ಅಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ಸ್ವಾತಂತ್ರ್ಯ ಹೋರಾಟದಲ್ಲಿ ಸುಭಾಷ್ ಚಂದ್ರಬೋಸ್ ಹಾಗೂ ಹರ್ಡೀಕರ್ ನಡುವೆ ಸ್ವಾಮ್ಯತೆ ಇದೆ, ಸುಭಾಷ್ ಚಂದ್ರಬೋಸರ ಜನ್ಮಜಯಂತಿಯನ್ನು ಪರಾಕ್ರಮ ದಿವಸ್ ಎಂದು ಆಚರಿಸುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸುಭಾಷ್ ಚಂದ್ರಬೋಸರು ಇಂಡಿಯನ್ ನ್ಯಾಷನಲ್ ಆರ್ಮಿ ಪಡೆಯ ಮೂಲಕ ಬ್ರಿಟೀಷರ ವಿರುದ್ಧ ಹೋರಾಡಲು ಮುಂದಾದರೆ, ನಾ.ಸು.ಹರ್ಡೀಕರ್ ಹಿಂದೂಸ್ತಾನ್ ಸೇವಾದಳವನ್ನು ದೇಶಾದ್ಯಂತ ಸಂಘಟಿಸಿ ಈ ಮೂಲಕ ಯುವಕರನ್ನು ಸ್ವಾತಂತ್ರ್ಯ ಹೋರಾಟಕ್ಕೆ ಸಜ್ಜುಗೊಳಿಸಿದರೆಂದು ವಿವರಿಸಿದರು.
ಸೇವಾದಳ ಜಿಲ್ಲಾ ಸಮಿತಿ ಸದಸ್ಯ ವಿ.ಪಿ.ಸೋಮಶೇಖರ್ ಮಾತನಾಡಿ, ಸುಭಾಷ್ ಚಂದ್ರಬೋಸ್‍ರ ಐಎನ್‍ಎಸ್ ಪಡೆಯ ಸದಸ್ಯ ರಾಮರಾವ್ ಕೋಲಾರಕ್ಕೆ ಬಂದ ದಿನಗಳನ್ನು ಸ್ಮರಿಸಿಕೊಂಡು, ದೇಶಕ್ಕಾಗಿ ಪ್ರಾಣತೆತ್ತವರ ಕುಟುಂಬಗಳನ್ನು ಸಮಾಜ ಕಾಪಾಡಿಕೊಳ್ಳಬೇಕೆಂದು ಸಲಹೆ ನೀಡಿದರು.
ಸೇವಾದಳ ಜಿಲ್ಲಾ ಸಮಿತಿ ಸದಸ್ಯ ಅಪ್ಪಿ ನಾರಾಯಣಸ್ವಾಮಿ, ಸುಭಾಷ್ ಚಂದ್ರಬೋಸರ ಆದರ್ಶಗಳನ್ನು ಸೇವಾದಳದ ಮೂಲಕ ಪ್ರತಿ ಶಾಲಾ ಮಕ್ಕಳಿಗೂ ತಲುಪಿಸಬೇಕೆಂದು ಸಲಹೆ ನೀಡಿದರು.
ಸೇವಾದಳ ಜಿಲ್ಲಾ ಸಮಿತಿ ಸದಸ್ಯ ಬೈರೇಗೌಡ ಮಾತನಾಡಿ, ಬ್ರಿಟೀಷ್ ಸೇನೆಯಲ್ಲಿ ಉತ್ತಮ ಅ„ಕಾರಿಯಾಗಿದ್ದರೂ ದೇಶಕ್ಕಾಗಿ ಸ್ವಾತಂತ್ರ್ಯ ಹೋರಾಟಕ್ಕಾಗಿ ಪ್ರತ್ಯೇಕ ಪಡೆಯನ್ನು ಕಟ್ಟಿದ ಸುಭಾಷ್ ಚಂದ್ರಬೋಸ್ ಎಲ್ಲರಿಗೂ ಮಾದರಿಯಾಗಲಿ ಎಂದರು.
ಕಾರ್ಯಕ್ರಮದಲ್ಲಿ ಸೇವಾದಳ ಜಿಲ್ಲಾ ಕಾರ್ಯದರ್ಶಿ ಸುಧಾಕರ್, ತಾಲೂಕು ಅಧ್ಯಕ್ಷ ವೈ.ಶಿವಕುಮಾರ್, ಕಾರ್ಯದರ್ಶಿ ಶ್ರೀರಾಮ್, ಸಂಪತ್‍ಕುಮಾರ್, ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಕೆ.ಜಯದೇವ್, ಸಮಾಜ ಸೇವಕ ಜ್ಯೂಸ್‍ನಾರಾಯಣಸ್ವಾಮಿ, ಮುನಿವೆಂಕಟ್, ಜಿಲ್ಲಾ ಡ್ರೈವಿಂಗ್ ಶಾಲಾ ಮಾಲೀಕರ ಸಂಘದ ಅಧ್ಯಕ್ಷ ಆರ್.ಗೋಪಾಲ್, ರಾಜೇಶ್‍ಸಿಂಗ್, -Àಲ್ಗುಣ, ಶಿವಕುಮಾರ್‍ಗೌಡ, ಅಂತರಾಷ್ಟ್ರೀಯ ಕ್ರೀಡಾಪಟು ಕಾಶೀರಾಜ್, ಚಂದ್ರೇಗೌಡ, ಜಗನ್ನಾಥ್, ಚಾನ್‍ಪಾಷಾ ಇತರರು ಉಪಸ್ಥಿತರಿದ್ದರು.
ಭಾರತ ಸೇವಾದಳ ಜಿಲ್ಲಾ ಸಂಘಟಕ ದಾನೇಶ್ ಕಾರ್ಯಕ್ರಮ ನಡೆಸಿಕೊಟ್ಟರು. ಸೇವಾದಳದ ಪದ್ಧತಿಯಂತೆ ಸರ್ವಧರ್ಮ ಪ್ರಾರ್ಥನೆಯಿಂದ ಆರಂಭವಾದ ಕಾರ್ಯಕ್ರಮ ರಾಷ್ಟ್ರಗೀತೆ ಗಾಯನದೊಂದಿಗೆ ಮುಕ್ತಾಯವಾಯಿತು. ಶಾಲಾ ಮಕ್ಕಳಿಗೆ ಸಿಹಿ ವಿತರಿಸಲಾಯಿತು.