ಸಮಾಜದ ಒಳಿತಿಗಾಗಿ ಮಾಡುವ ಕೆಲಸಕ್ಕೆ ಅಡ್ಡಿ ಆತಂಕಕಗಳು ಬರುವುದು, ಸಹಜ, ಇವುಗಳೆಲ್ಲವನ್ನು ಮೆಟ್ಟಿ ನಿಂತು ಮುಂದೆ ಸಾಗಿ ಶಾಸಕ ಕೆ.ಅರ್. ರಮೇಶ್‍ಕುಮಾರ್

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಸಮಾಜದ ಒಳಿತಿಗಾಗಿ ಮಡುವಎಲ್ಲಾ ಕೆಲಸಗಳಿಗೂ ಅಡ್ಡಿ ಆತಂಕಕಗಳು ಬರುವುದು, ಸಹಜ, ಇವುಗಳೆಲ್ಲವನ್ನು ಸಹಿಸಿಕೊಂಡು ಮೆಟ್ಟಿ ನಿಂತಾಗ ನಾವು ನಿಜವಾದ ಮನುಷ್ಯರಾಗುತ್ತೇವೆ. ಯಾವುದಕ್ಕೂ ಬಯಪಡದೆ ದೈರ್ಯದಿಂದ ಮುಂದೆ ಸಾಗಿ ಗಡಿಭಾಗದಲ್ಲಿಕನ್ನಡ ಉಳಿವು-ಅಳಿವಿಗಾಗಿ ಶ್ರಮಿಸಿದಾಗ ತಾಯಿ ಭುವನೇಶ್ವರಿ ಆಶೀರ್ವಾದ ಸದಾಇರುತ್ತದೆಎಂದು ಶಾಸಕ ಕೆ.ಅರ್. ರಮೇಶ್‍ಕುಮಾರ್ ತಿಳಿಸಿದರು.
ತಾಲ್ಲೂಕಿನರೋಣೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಶ್ರೀನಿವಾಸಪುರತಾಲ್ಲೂಕು 11ನೆಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರಮೇಶ್‍ಕುಮಾರ್, ಭಾಷೆ ಮನುಕುಲದ ವಿಶಿಷ್ಟ ಕೊಡುಗೆಯಾಗಿದೆ, ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವುದೆ ನಿಜವಾದ ಭಾಷೆ, ಪ್ರಾಣಿಗಳಲ್ಲಿ ಭಾಷೆ ವ್ಯಕ್ತಪಡಿಸಲು ಆಗುವುದಿಲ್ಲ, ಭಾಷೆ ಮೂಲ ಸ್ಥಾನ ತಾಯಿ, ತಾಯಿಯಿಂದಲೆ ಭಾಷೆ ಹುಟ್ಟುತ್ತದೆ. ಈ ಗಡಿಭಾಗದಲ್ಲಿಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಸಂತೋಷದ ವಿಷಯ. ಕನ್ನಡ ಸಾಹಿತ್ಯ ಪರಿಷತ್ತಿನತಾಲ್ಲೂಕುಅಧ್ಯಕ್ಷಜಿ.ಎನ್. ಕುಬೇರಗೌಡತಮಗಾದಅಡ್ಡಿ ಆತಂಕಗಳ ನೋವನ್ನು ವ್ಯಕ್ತಪಡಿಸಿಕೊಂಡಾಗ ಇದಕ್ಕೆ ಉತ್ತರಿಸಿದ ಶಾಸಕರು, ಸಮಾಜದಲ್ಲಿ ಒಳ್ಳೆಯ ಕೆಲಸ ಮಾಡುವಾಗಅಡ್ಡಿ ಆತಂಕಗಳು ಬರುತ್ತವೆ. ಇದನ್ನು ಮೀಟಿ ನಿಲ್ಲುವುದೆ ನಿಜವಾದಜೀವನ, ಈ ಅಡ್ಡಿ ಆತಂಕಗಳು ನಿಮಗೆ ಸೀಮಿತವಲ್ಲ, ರಾಜಕಾರಣಿಗಳಾದ ನಮಗೂ ಬಂದೇ ಬರುತ್ತದೆ. ಯಾವುದಕ್ಕೂಕಿವಿಗೊಡದೆಗ್ರಾಮೀಣ ಭಾಗದಲ್ಲಿಕನ್ನಡವನ್ನುಕಟ್ಟುವ ಕೆಲಸವನ್ನು ನಿಮ್ಮತಂಡದವರು ಮಾಡಿದ್ದೀರ, ನಮ್ಮ ಸಹಕಾರ ಸದಾಇರುತ್ತದೆಎಂದರು.
ಸಮ್ಮೇಳನದಅಧ್ಯಕ್ಷ ಕೆ.ವಿ. ನಾಗರಾಜ್ ಮಾತನಾಡಿ,ಮಾವಿನ ಮಡಿಲಲ್ಲಿ ನನ್ನನ್ನು ಸರ್ವಾನುಮತದಿಂದಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಮಾಡಿದ ಎಲ್ಲಾ ಮಹನೀಯರಿಗೆ ಧನ್ಯವಾದಗಳನ್ನು ತಿಳಿಸಿ, ತಾನು ಬೆಳೆದು ಬಂದದಾರಿಯಜೀವನವನ್ನು ಮೆಲುಕು ಹಾಕಿ ಈ ತಾಲ್ಲೂಕಿನ ಸಾಂಸ್ಕೃತಿಕ, ಶೈಕ್ಷಣಿಕ, ಧಾರ್ಮಿಕ ಪರಿಸರ ಇವುಗಳ ಗತ ವೈಭವವನ್ನು ತಿಳಿಸಿ ಕ್ರಿ.ಶ. 780ರಲ್ಲಿ ತಾಲ್ಲೂಕಿನ ಅರಳಕುಂಟೆಯಲ್ಲಿ ಮನಸೂರ ಪ್ರಭುವಾದ ವಿದ್ಯಾದರರು, ಪಲ್ಲವರ ವಿರುದ್ದ ಹೋರಾಡಿ ವೀರ ಮರಣ ಹೊಂದಿದ ಹಿನ್ನೆಲೆ ಅನೇಕ ವರ್ಷಗಳ ಆಳ್ವಿಕೆಯ ದಿಗ್ವಿಜಯಗಳು, ಹೆಬ್ಬಟಗ್ರಾಮದಲ್ಲಿದೊರೆತಿರುವ ಶಾಸನವು ಗಂಗರ ಮನೆತನಕ್ಕೆ ಸೇರಿದ್ದು, ಗಂಗರ ಆಳ್ವಿಕೆಯ ಗತ ವೈಭವ ಮೆಲುಕು ಹಾಕಿ ಕಲೆ ಮತ್ತು ವಾಸ್ತುಶಿಲ್ಪಕ್ಕೆ ನೀಡಿರುವ ಹಿರಿಮೆಯನ್ನುಕೊಂಡಾಡಿದರು.
ತಾಲ್ಲೂಕಿನಲ್ಲಿ ಮೂಲಭೂತ ಸೌಕರ್ಯಗಳಿಗೆ ಜನಪ್ರತಿನಿದಿಗಳು ಹೆಚ್ಚು ಕಾಳಜಿ ವಹಿಸಬೇಕು. ಇತ್ತೀಚಿನ ದಿನಗಳಲ್ಲಿ ಕನ್ನಡ ಭಾಷೆ ಪ್ರಾಥಮಿಕ ಶಿಕ್ಷಣದಿಂದ ದೂರ ಸರಿಯುತ್ತಿದೆ. ಇದಕ್ಕೆ ಪೂರಕವಾಗಿ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳ ಸಂಖ್ಯೆಕಡಿಮೆಯಾಗಿತ್ತಿರುವುದುಇದಕ್ಕೆ ಸಾಕ್ಷಿಯಾಗಿದೆ. ಪೋಷಕರು ಮತ್ತು ನಾವುಗಳು ಒಂದಲ್ಲಾಒಂದುರೀತಿಆಂಗ್ಲಭಾಷಾ ವ್ಯಾಮೋಹಕ್ಕೆ ಒಳಗಾಗಿದ್ದೇವೆ. ಕನ್ನಡ ಮಾಧ್ಯಮದಲ್ಲಿವ್ಯಾಸಂಗ ಮಾಡಿದವರಿಗೆಕೇಂದ್ರ ಮತ್ತುರಾಜ್ಯ ಸರ್ಕಾರಗಳ ಉಧ್ಯೋಗಗಳಲ್ಲಿ ಹೆಚ್ಚು ಮೀಸಲಾಯಿತಿಯನ್ನು ನೀಡಿದರೆ ನಮ್ಮ ಮಾತೃ ಭಾಷೆಯಾದಕನ್ನಡವನ್ನು ಉಳಿಸಿ ಬೆಳೆಸಿದಂತಾಗುತ್ತದೆ. ನಾವೆಲ್ಲರೂಒಗ್ಗಟ್ಟಾಗಿಜಾತಿ ಬೇದತೊರೆದುರಾಜಕೀಯ ಭಿನಾಬಿಪ್ರಾಯಗಳನ್ನು ಬದಿಗೊತ್ತಿ, ಕನ್ನಡ ನಾಡಿನÀ ಕಲ್ಯಾಣಕ್ಕಾಗಿದುಡಿಯೋಣ, ಕನ್ನಡ ಭಾಷೆ ನೆಲ, ಜಲ, ಉಳಿಸೋಣ, ಕನ್ನಡತಾಯಿಯ ಭುವನೇಶ್ವರಿ ಈ ನಾಡಿನ ಶ್ರೇಯಸ್ಸಿಗೆ ಆಶೀರ್ವಾದ ಮಾಡಲಿ ಎಂದರು.
ತಾಲ್ಲೂಕುಅಧ್ಯಕ್ಷಜಿ.ಎನ್. ಕುಬೇರಗೌಡ ಮಾತನಾಡಿ, ಸತತ 4 ವರ್ಷಗಳಿಂದ ಸಮ್ಮೇಳನದ ಕಾರ್ಯಕ್ರಮಗಳು ಯಶಸ್ವಿಯ ಹಿಂದೆತನಗಾದ ಅನೇಕ ನೋವು ನಲಿವುಗಳು, ಅಡ್ಡಿ-ಆತಂಕಗಳ ಬಗ್ಗೆ ವೇದಿಕೆಯಲ್ಲಿ ಹಂಚಿಕೊಂಡು ಈ ಬಾರಿರೋಣೂರು ಭಾಗದಲ್ಲಿ ಸಮ್ಮೇಳನ ನಡೆಯುತ್ತಿರುವ ಬಗ್ಗೆ ಅನೇಕ ಸಮಸ್ಯೆಗಳನ್ನು ಎದುರಿಸಿಕೊಂಡು ಸಮ್ಮೇಳನ ಯಶಸ್ವಿಯಾಗಲು ಸಹಕರಿಸಿದ ತಾಲ್ಲೂಕಿನ ಶಾಸಕರು, ಕನ್ನಡ ಸಾಹಿತ್ಯ ಪರಿಷತ್ತಿನಜಿಲ್ಲಾಕಾರ್ಯಕಾರಿಣಿ ಸಮಿತಿಯ ಸಹಕಾರ, ಈ ಭಾಗದಜನ ಪ್ರತಿ ನಿದಿಗಳು, ಸಂಘ ಸಂಸ್ಥೆಗಳ ಸಹಕಾರವನ್ನು ಸ್ಮರಿಸಿ ನಿಸ್ವಾರ್ಥತೆಯಿಂದ ಸರ್ಕಾರಿ ಅಧಿಕಾರಿಗಳ ಬಳಿ ಕೈ ಚಾಚದೆ ಸಾಧಕ ಭಾಧಕಗಳ ತಮ್ಮತಂಡದಲ್ಲಿ ಚರ್ಚಿಸಿ ಕೆಲವು ದಾನಿಗಳ ಜೊತೆಗೆ ಶಿಕ್ಷಣ ಸಂಸ್ಥೆಗಳಿಂದ ಅಲ್ಪ ಸ್ವಲ್ಪ ನೆರವÀನ್ನು ಪಡೆದುಕೊಂಡು ಈ ಸಮ್ಮೇಳನವನ್ನು ಯಶಸ್ವಿ ಮಾಡುತ್ತಿದ್ದೇವೆ, ಕನ್ನಡ ಉಳಿವಿಗಾಗಿ ಗ್ರಾಮೀಣ ಪ್ರದೇಶದಲ್ಲಿಕನ್ನಡವನ್ನುಕಟ್ಟಲು ಹಗಲಿರುಳು ಶ್ರಮಿಸಿದ ತೃಪ್ತಿ ನನಗಿದೆಎಂದರು.
ಕಾರ್ಯಕ್ರಮದಲ್ಲಿ ಸಮ್ಮೇಳನದಅಧ್ಯಕ್ಷ ಕೆ.ವಿ. ನಾಗರಾಜ್ ಬರೆದಿರುವ “ಕಡಲಲ್ಲಿ” ಕವನ ಸಂಕಲನ ಬಿಡುಗಡೆ ಮಾಡಿದರು.
ಈ ಸಮಯದಲ್ಲಿಪಿ.ಇಲ್.ಡಿ. ಬ್ಯಾಂಕ್‍ಅಧ್ಯಕ್ಷಅಶೋಕ್, ಜಿಲ್ಲಾ ಪಂಚಾಯಿತಿ ಸದಸ್ಯಗೋವಿಂದಸ್ವಾಮಿ, ಕ.ಸ.ಪ. ಜಿಲ್ಲಾಅಧ್ಯಕ್ಷ ನಾಗನಂದಕೆಂಪರಾಜ್, ಬೈರವೇಶ್ವರ ವಿಧ್ಯಾನಿಕೇತನ ಕಾರ್ಯದರ್ಶಿ ಶ್ರೀರಾಮರೆಡ್ಡಿ, ಸಾಹಿತಿಆರ್. ಚೌಡರೆಡ್ಡಿ, ಮಾಜಿತಾ.ಪಂ ಸದಸ್ಯ ಕೆ.ಕೆ. ಮಂಜುನಾಥ್,ಮಾಜಿಗ್ರಾಮ ಪಂಚಾಯಿತಿಉಪಾಧ್ಯಕ್ಷಆರ್.ಎನ್. ಚಂದ್ರಶೇಕರ್, ರೋಣೂರು ಹೋಬಳಿ ಉಪ ತಹಸೀಲ್ದಾರ್ ಮುನಿವೆಂಕಟಪ್ಪ, ಸರ್ಕಾರಿ ನೌಕರರ ಸಂಘದಅಧ್ಯಕ್ಷ ಬಂಗವಾದಿ ನಾಗರಾಜ್, ನೌಕರರ ಸಂWದ ನಿರ್ದೇಶಕ ಬೈರೇಗೌಡ, ವೇಣು ವಿದ್ಯಾ ಸಂಸ್ಥೆಯ ಆಡಳಿತಾಧಿಕಾರಿ ಗೋಪಿ, ಶಿಕ್ಷಕ ಮಾಸ್ತೇನಹಳ್ಳಿ ನಾರಾಯಣಸ್ವಾಮಿ, ಕಲಾ ಶಂಕರ್, ಮುರಳೀ ಬಾಬು,ಗ್ರಾಮೀಣ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ವೆಂ.ಕ. ರವಿಕುಮಾರ್, ಗಾಂಡ್ಲಹಳ್ಳಿ ವೆಂಕಟಾಚಲಪತಿ, ರೈತ ಮುಖಂಡ ಬೈಚೇಗೌಡ, ಬೂರಗನಹಳ್ಳಿ ವೆಂಕಟಾಚಲಪತಿ, ತಾಲ್ಲೂಕುಕನ್ನಡ ಸಾಹಿತ್ಯ ಪರಿಷತ್ತಿನ ಗೌ. ಕಾರ್ಯದರ್ಶಿ ಚಲಪತಿ, ಕೋಶೋಧ್ಯಕ್ಷೆ ಮಂಜುಳ, ಇತತೆ ಪದಾದಿಕಾರಿಗಳು ಮತ್ತಿತರರು ಭಾಗವಹಿಸಿದ್ದರು.