ಫೆಬ್ರವರಿ ಮೊದಲವಾರ ಕೋಲಾರ ಜಿಲ್ಲಾಮಟ್ಟದ ನೌಕರರ ಕ್ರೀಡಾಕೂಟ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ನೌಕರರೂ ಪಾಲ್ಗೊಳ್ಳಿ-ಸತ್ಯಭಾಮ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ಜಿಲ್ಲಾ ಸರ್ಕಾರಿ ನೌಕರರ ಕ್ರೀಡಾಕೂಟವನ್ನು ಫೆಬ್ರವರಿ ಮೊದಲವಾರದಲ್ಲಿ ನಡೆಸಲು ಉದ್ದೇಶಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ನೌಕರರೂ ಭಾಗವಹಿಸುವಂತೆ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಕರೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
2 ದಿನ ನಡೆಯುವ ಕ್ರೀಡಾ ಮತ್ತು ಸಾಂಸ್ಕøತಿಕ ಸ್ವರ್ಧೆಗಳಲ್ಲಿ ಮಹಿಳಾನೌಕರರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತಾಗಬೇಕು ಎಂದ ಅವರು, ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ನೌಕರರು, ಶಿಕ್ಷಕರಿಗೆ ಆಯಾ ಇಲಾಖೆಯ ಮೇಲಾಧಿಕಾರಿಗಳು ಅನ್ಯಕಾರ್ಯನಿಮಿತ್ತ ಒಒಡಿ ನೀಡಿ ಕಳುಹಿಸಿಕೊಡಲು ಸೂಚಿಸಿದರು.
ಡಿಸಿಅವರಿಂದಲೇ
ಬಹುಮಾನ ಕೊಡುಗೆ
ಕ್ರೀಡಾಕೂಟ ಮತ್ತು ಸಾಂಸ್ಕøತಿಕ ಸ್ವರ್ಧೆಗಳಲ್ಲಿ ವಿಜೇತರಾದ ನೌಕರರಿಗೆ ನೀಡುವ ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆಯನ್ನು ತಾವೇ ಕೊಡುಗೆಯಾಗಿ ನೀಡುವುದಾಗಿ ಡಿಸಿಯವರು ತಿಳಿಸಿದ್ದು ವಿಶೇಷವಾಗಿತ್ತು.
ಕ್ರೀಡಾಕೂಟ ನಡೆಸಲು ಜಿಪಂನಿಂದ 5 ಲಕ್ಷ ರೂ ನೀಡಲು ಸಲಹೆ ನೀಡಿದ ಡಿಸಿಯವರು, ಕ್ರೀಡಾಳು ನೌಕರರಿಗೆ ಕ್ಯಾಪ್, ಟೀ-ಶರ್ಟ್ ನೀಡಲು ತಿಳಿಸಿದರಲ್ಲದೇ ಈ ಎರಡು ದಿನ ನೌಕರರು ಉತ್ಸಾಹದಿಂದ ಪಾಲ್ಗೊಂಡು ಆನಂದ ಅನುಭವಿಸಿರಿ ಎಂದರು.
ಕ್ರೀಡಾಕೂಟದ ಯಶಸ್ಸಿಗೆ ಎಲ್ಲಾ ಇಲಾಖೆಗಳು ಸ್ಪಂದಿಸಲು ಸೂಚಿಸಿದ ಅವರು, ನಗರಸಭೆ ವತಿಯಿಂದ ಪೆಂಡಾಲ್, ಕುಡಿಯುವ ನೀರಿನ ವ್ಯವಸ್ಥೆ, ಸ್ವಚ್ಚತಾ ಕಾರ್ಯ ನಡೆಸಿಕೊಡಲು ತಿಳಿಸಿದರು.
ಸಾಂಸ್ಕøತಿಕ ಸ್ವರ್ಧೆಗಳು ನಡೆಯುವ ರಂಗಮಂದಿರದಲ್ಲಿ ಅಗತ್ಯ ಪ್ರಮಾಣದಲ್ಲಿ ಧ್ವನಿವರ್ಧಕಗಳು, ಲೈಟಿಂಗ್ ವ್ಯವಸ್ಥೆ ಮಾಡಿಕೊಡಿ ಎಂದು ಕನ್ನಡ ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಿಗೆ ಡಿಸಿ ಸೂಚನೆ ನೀಡಿದರು.
ಜಿಲ್ಲಾ ಯುವಜನಸೇವಾ ಮತ್ತು ಕ್ರೀಡಾಇಲಾಖೆ ಸಹಾಯಕ ನಿರ್ದೇಶಕ ಕೆ.ಎನ್.ಮಂಜುನಾಥ್, ಕ್ರೀಡಾಕೂಟ ನಡೆಸಲು ಅಗತ್ಯವಾದ ಸಿದ್ದತೆಗಳನ್ನು ಇಲಾಖೆಯಿಂದ ಮಾಡುವುದಾಗಿಯೂ ಮತ್ತು ಅಗತ್ಯ ಕ್ರೀಡಾ ಸಾಮಗ್ರಿಗಳನ್ನು ಒದಗಿಸುವುದಾಗಿ ತಿಳಿಸಿದರು.

ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‍ಬಾಬು ನೌಕರರ ಸಂಘದಿಂದ ಎರಡು ದಿನಗಳ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳಿಗೆ ಊಟದ ವ್ಯವಸ್ಥೆ, ಶುದ್ದ ಕುಡಿಯುವ ನೀರು ಒದಗಿಸಲಾಗುವುದು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ನೌಕರರು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಎಲ್ಲಾ ಇಲಾಖೆಗಳ ವೃಂದ ಸಂಘಗಳ ಮೂಲಕ ಮನವಿ ಮಾಡುವುದಾಗಿ ತಿಳಿಸಿದ ಅವರು, ದೈಹಿಕ ಶಿಕ್ಷಕರನ್ನು ಕ್ರೀಡಾಕೂಟಕ್ಕೆ ನಿಯೋಜಿಸಿ ಯಶಸ್ವಿಗೊಳಿಸಲು ಡಿಡಿಪಿಐ ಅವರಿಗೆ ಮನವಿ ಮಾಡಿದರು.
ಸಭೆಯಲ್ಲಿ ಡಿಡಿಪಿಐ ಕೃಷ್ಣಮೂರ್ತಿ, ನಗರಸಭೆ ಆಯುಕ್ತ ಶ್ರೀಕಾಂತ್, ಕನ್ನಡ ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್, ಆರೋಗ್ಯ ಶಿಕ್ಷಣಾಧಿಕಾರಿ ಪ್ರೇಮ, ಜಿಲ್ಲಾ ದೈಹಿಕ ಶಿಕ್ಷಕ ಅಧೀಕ್ಷಕ ಮಂಜುನಾಥ್, ನೌಕರರ ಸಂಘದ ಪದಾಧಿಕಾರಿಗಳಾದ ಎಸ್.ಚೌಡಪ್ಪ, ಕೆ.ಬಿ.ಅಶೋಕ್, ವಿಜಯ್, ನೌಕರರ ಕ್ರೀಡಾ,ಸಾಂಸ್ಕøತಿಕ ಸಂಘದ ಅಧ್ಯಕ್ಷ ಎಂ.ನಾಗರಾಜ್, ಕಾರ್ಯದರ್ಶಿ ಇಂಚರ ನಾರಾಯಣಸ್ವಾಮಿ, ಸಂಘದ ಪ್ರತಿನಿಧಿಗಳಾದ ಕವಿತಾ, ಸುನಂದಮ್ಮ, ಗೌತಮ, ಆರ್.ನಾಗರಾಜ್ ಮತ್ತಿತರರಿದ್ದರು.