ನೌಕರರ ಸಂಘದ ಅಧ್ಯಕ್ಷ ಸುರೇಶ್‍ಬಾಬು ಮನವಿಗೆ ಸ್ಪಂದನೆ ನೌಕರರ ಭವನಕ್ಕೆ ಜಮೀನು ಗುರ್ತಿಸಲು ತಹಸೀಲ್ದಾರ್‍ಗೆ ಡಿಸಿ ಸೂಚನೆ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ಜಿಲ್ಲಾ ಸರ್ಕಾರಿ ನೌಕರರ ಸಂಘದ ಸಮುದಾಯ ಭವನ, ಆಟದ ಮೈದಾನ, ಸಾಂಸ್ಕøತಿಕ ಚಟುವಟಿಕೆಗಳಿಗಾಗಿ ಜಮೀನು ಮಂಜೂರು ಮಾಡುವಂತೆ ಕೋರಿದ ನೌಕರರ ಸಂಘದ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಸಿ. ಸತ್ಯಭಾಮ ಕೂಡಲೇ ಜಮೀನು ಗುರುತಿಸುವಂತೆ ತಹಸೀಲ್ದಾರ್ ಅವರಿಗೆ ಸೂಚಿಸಿದರು.
ನೌಕರರ ಸಂಘದ ನೂತನ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಜಿ.ಸುರೇಶ್‍ಬಾಬು ಮತ್ತಿತರರಿದ್ದ ತಂಡವನ್ನು ಅಭಿನಂದಿಸಿದ ಅವರು, ಸರ್ಕಾರದ ಯೋಜನೆಗಳ ಅನುಷ್ಟಾನದಲ್ಲಿ ಜಿಲ್ಲಾಡಳಿತದೊಂದಿಗೆ ಸಹಕಾರ ನೀಡುವಂತೆ ಕೋರಿದರು.
ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‍ಬಾಬು ಮನವಿಮಾಡಿ, ಜಿಲ್ಲೆಯಲ್ಲಿ 20 ಸಾವಿರಕ್ಕೂ ಹೆಚ್ಚುನೌಖರರರಿದ್ದು, ಒಂದು ಉತ್ತಮವಾದ ಭವನ ಇಲ್ಲವಾಗಿದೆ, ಕ್ರೀಡಾ ಚಟುವಟಿಕೆಗಳಿಗೆ ಮೈದಾನವಿಲ್ಲ ಎಂದು ತಿಳಿಸಿ ನಗರದ ಸುತ್ತ ಎಲ್ಲಾದರು 5 ಎಕರೆ ಜಮೀನು ಮಂಜೂರು ಮಾಡುವಂತೆ ಮನವಿ ಮಾಡಿದರು.
ಮನವಿಗೆ ಸ್ಪಂದಿಸಿದ ಡಿಸಿಯವರು ಕೂಡಲೇ ತಹಸೀಲ್ದಾರ್‍ಅವರಿಗೆ ಸೂಚನೆ ನೀಡಿ ಜಮೀನು ಗುರುತಿಸಿಕೊಡುವಂತೆ ಸೂಚಿಸಿದರು.
ರಾಜ್ಯ ನೌಕರರ ಸಂಘದ ಕೋರಿಕೆಯಂತೆ ನಿಯಮಾನುಸಾರ ಪರಿಶೀಲಿಸಿ ಸೂಕ್ತ ಜಮೀನು ಗುರ್ತಿಸಿ ಭೂಮಂಜೂರಾತಿ ನಿಯಮಗಳಂತೆ ಕಡತವನ್ನು ತಯಾರಿಸಿ ವಿಭಾಗಾಧಿಕಾರಿಗಳಿಗೆ ಸಲ್ಲಿಸುವಂತೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳಿಗೆ ಧನ್ಯವಾದ ತಿಳಿಸಿದ ಸುರೇಶ್‍ಬಾಬು, ಅದೇ ರೀತಿ ಜಿಲ್ಲಾ ಮತ್ತು ತಾಲ್ಲೂಕುಗಳಲ್ಲಿ ನೌಕರರ ಸಮಸ್ಯೆ ಪರಿಹಾರಕ್ಕೆ ಜಂಟಿ ಸಮಾಲೋಚನಾ ಸಮಿತಿ ರಚನೆಗೆ ಒತ್ತಡ ಹಾಕುವುದಾಗಿ ತಿಳಿಸಿದ ಅವರು, ಈ ಸಮಿತಿಯಲ್ಲಿ ಡಿಸಿ,ಎಸ್ಪಿ, ಜಿಪಂ ಸಿಇಒ ಮತ್ತಿತರರಿದ್ದು, ನೌಕರರ ಸಮಸ್ಯೆಗಳಿಗೆ ಅಲ್ಲೇ ಪರಿಹಾರ ಸಿಗುವಂತೆ ಮಾಡುವುದಾಗಿ ನುಡಿದರು.
ಇದೇ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಸೇರಿದಂತೆ ಜಿಲ್ಲೆಯ ವಿವಿಧ ಇಲಾಖೆಗಳ ನೌಕರರು ಎದುರುಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಕುರಿತು ಜಿಲ್ಲಾಧಿಕಾರಿಗಳ ಗಮನ ಸೆಳೆಯಲಾಯಿತು.
ಈ ಸಂದರ್ಭದಲ್ಲಿ ನೌಕರರ ಸಂಘದ ಪದಾಧಿಕಾರಿಗಳಾದ ಕೆ.ಎನ್.ಮಂಜುನಾಥ್, ಕೆ.ಬಿ.ಅಶೋಕ್, ರವಿಚಂದ್ರ, ಎಸ್.ಚೌಡಪ್ಪ, ಖಜಾಂಚಿ ವಿಜಯ್, ಗೌತಮ್, ನಂದೀಶ್, ರತ್ನಪ್ಪ,ವಿಜಯ್, ಕೋರ್ಟ್ ಮುನಿಯಪ್ಪ,ಚಂದ್ರಕಲಾ, ಶ್ರೀರಾಮ್, ಅನಿಲ್‍ಕುಮಾರ್, ರವಿ, ಕೆಜಿಐಡಿ ಮುರಳಿ,ಹರೀಶ್ ಮತ್ತಿತರರು ಹಾಜರಿದ್ದರು.