ಮಹಾಲಸಾ ಮೋಟಾರ್ ಫೂಯಲ್ಸ್ ಬೈಂದೂರು ಅಭಿವೃದ್ಧಿಗೆ ಪೂರಕ :ಬಿ.ಎಂ.ಸುಕುಮಾರ್ ಶೆಟ್ಟಿ

JANANUDI.COM NETWORK


ಬೈಂದೂರು ಕ್ಷೇತ್ರ ಪ್ರವಾಸೋದ್ಯಮದ ದೊಡ್ಡ ಕೇಂದ್ರವಾಗಿ ಬೆಳೆಯಲಿದ್ದು, ಇಲ್ಲಿನ ಪ್ರಾಕೃತಿಕ ಸಂಪತ್ತನ್ನು ಉಪಯೋಗಿಸಿಕೊಂಡು ಬೈಂದೂರು, ಮರವಂತೆ, ಕೊಲ್ಲೂರು-ಕೊಡಚಾದ್ರಿ ಸೇರಿದಂತೆ ಹಲವು ಸ್ಥಳಗಳಲ್ಲಿ ಆಕರ್ಷಕ ಯೋಜನೆಗಳು ಕಾರ್ಯಗತವಾಗಲಿವೆ. ಭಾರತ ಪೆಟ್ರೋಲಿಯಂನವರ ಇಂಧನ ಪೂರೈಕೆಯ ಮಹಾಲಸಾ ಫೂಯಲ್ಸ್ ಸೆಂಟರ್, ನಾಗೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ಥಾಪನೆಯಾಗಿರುವುದು ಬೈಂದೂರು ಅಭಿವೃದ್ಧಿಗೆ ಪೂರಕವಾಗಿದೆ. ಈ ರಿಟೈಲ್ ಔಟ್‍ಲೆಟ್ ಆರಂಭಿಸಿದ ಕೆ.ಪ್ರಭಾಕರ ಪ್ರಭು ಹಾಗೂ ಕೆ.ಪ್ರಜ್ಞೇಶ್ ಪ್ರಭು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ.
ಇದು ಉತ್ತಮ ವಿಶ್ವಾಸಾರ್ಹ ಸೇವೆ ಗ್ರಾಹಕರಿಗೆ ನೀಡಲಿ” ಎಂದು ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ತಿಳಿಸಿದರು.
ಬೈಂದೂರು ತಾಲ್ಲೂಕಿನ ನಾಗೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ದಿನಾಂಕ 3 ರಂದು ಪ್ರಾರಂಭಗೊಂಡ ಮಹಾಲಸಾ ಮೋಟಾರ್ ಫೂಯಲ್ಸ್ ಉದ್ಘಾಟಿಸಿ, ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಪ್ರಧಾನ ಅತಿಥಿಗಳಾಗಿ ಕೆನರಾ ಬ್ಯಾಂಕ್‍ನ ಜನರಲ್ ಮೆನೇಜರ್ ರಾಮನಾಯ್ಕ್ ಹಾಗೂ ಭಾರತ್ ಪೆಟ್ರೋಲಿಯಂ ಕಾರ್ಪೋರೇಶನ್‍ನ ಸಹ ಪ್ರಾಂತೀಯ ಮೆನೇಜರ್ ಗೋರಖ್‍ನಾಥ ಆಗಮಿಸಿದ್ದರು.
ನಾಗೂರಿನಲ್ಲಿ ಭಾರತ್ ಪೆಟ್ರೋಲಿಯಂ ಔಟ್‍ಲೆಟ್ ಸ್ಥಾಪನೆಗೆ ವಿವಿಧ ರೀತಿಯಲ್ಲಿ ಸಹಕಾರ ನೀಡಿದ ರಾಘವ ಶೆಟ್ಟಿ, ಪ್ರಭಾಕರ ಶೆಟ್ಟಿ, ಈಶ್ವರ ದೇವಾಡಿಗ, ಮಂಜುನಾಥ ಖಾರ್ವಿ, ರತ್ನಾಕರ , ಸುರೇಶ್ ಆಚಾರ್ಯ ಅವರನ್ನು ಕೆನರಾಬ್ಯಾಂಕ್ ಜನರಲ್ ಮೆನೇಜರ್ ರಾಮನಾಯ್ಕ್ ಗೌರವಿಸಿದರು.
ಕೆನರಾಬ್ಯಾಂಕ್ ಹಾಗೂ ಕುಂಭಾಸಿ ವೆಂಕಟರಮಣ ಪ್ರಭು ಅವರ ಬಾಂಧವ್ಯ ಸ್ಮರಿಸುತ್ತಾ ಶುಭಹಾರೈಸಿದ ಜನರಲ್ ಮೆನೇಜರ್ ರಾಮನಾಯ್ಕ” ಉತ್ತಮವಾಗಿ ವಿಶ್ವಾಸಾರ್ಹ ವ್ಯವಹಾರೋದ್ಯಮ ಬೆಳೆಸಿಕೊಂಡು ಬಂದಿರುವ ಪ್ರಭು ಕುಟುಂಬದೊಂದಿಗೆ ಸಹಕಾರ ನೀಡಲು ಬ್ಯಾಂಕ್ ಸದಾ ಸಿದ್ಧವಿದೆ. ಕೆ. ಪ್ರಜ್ಞೇಶ ಪ್ರಭು ಅಂತಹ ಯುವ ಉದ್ಯಮಿಗಳಿಗೆ ಸದಾ ಬೆಂಬಲ ನೀಡುತ್ತದೆ” ಎಂದರು.


“ಭಾರತ ಪೆಟ್ರೋಲಿಯಂನ ಈ ವಿತರಣಾ ಕೇಂದ್ರ ಬಹಳ ಅನುಕೂಲವಾದ ಸ್ಥಳದಲ್ಲಿರುವುದು ಮಾತ್ರವಲ್ಲ. ಗ್ರಾಹಕರಿಗಾಗಿ ಉತ್ತಮವಾಗಿ ರೂಪಿಸಲ್ಪಟ್ಟಿದೆ. ಮಹಾಲಸಾ ಮೋಟಾರ್ ಫೂಯಲ್ಸ್ ವಿಶ್ವಾಸಾರ್ಹ ಸೇವೆ ನೀಡಲಿವೆ. ವಾಹನದ ಮೂಲಕವೂ ಗ್ರಾಹಕರಿಗೆ ಇಂಧನ ತಲುಪಿಸುವ ವ್ಯವಸ್ಥೆ ಶೀಘ್ರದಲ್ಲೇ ಆರಂಭವಾಗಲಿದೆ” ಎಂದು ಗೋರಖ್‍ನಾಥ್ ಹೇಳಿದರು.
ಸರ್ವರೀತಿಯಲ್ಲಿ ಮಾರ್ಗದರ್ಶನ ನೀಡಿದ ಕೆ. ಶಾಂತಾರಾಮ ಪ್ರಭು ಅವರನ್ನು ಗೌರವಿಸಲಾಯಿತು. ಭಾರತ ಪೆಟ್ರೋಲಿಯಂನ ಅಧಿಕಾರಿಗಳನ್ನು , ಬ್ಯಾಂಕ್ ಅಧಿಕಾರಿಗಳನ್ನು ಗೌರವಿಸಲಾಯಿತು.
ದೇವದಾಸ ಪೈ ಹೊನ್ನಾವರ, ಕೆ. ಪ್ರಜ್ಞೇಶ್ ಪ್ರಭು, ವಿನಯಾ ಪ್ರಜ್ಞೇಶ್ ಪ್ರಭು, ಅತಿಥಿಗಳನ್ನು ಗೌರವಿಸಿದರು. ಧಾರಿಣಿ ಭಕ್ತಿಗೀತೆ ಹಾಡಿದರು.
ಕೆ. ರಮೇಶ್ ಪ್ರಭು, ಕೆ. ಗಣೇಶ್ ಪ್ರಭು ಸ್ವಾಗತಿಸಿದರು. ಕೆ. ಕೇಶವ ಪ್ರಭು, ಕೆ.ಪ್ರಭಾಕರ ಪ್ರಭು ವೇದಿಕೆಯಲ್ಲಿದ್ದರು. ಯು.ಎಸ್.ಶೆಣೈ ಕಾರ್ಯಕ್ರಮ ನಿರೂಪಿಸಿದರು
.

ಮನೆ ಮನೆಗೆ ನೀರು : ಬಿ.ಎಂ.ಸುಕುಮಾರ ಶೆಟ್ಟಿ , ಶಾಸಕರು, ಬೈಂದೂರು
ಬೈಂದೂರು ಕ್ಷೇತ್ರದಲ್ಲಿ ಮನೆ ಮನೆಗೆ ನೀರು, ಒದಗಿಸುವ ಯೋಜನೆ ಅನುಷ್ಠಾನಗೊಳ್ಳಲಿದೆ . ಕೊಲ್ಲೂರು ಕೊಡಚಾದ್ರಿಯ 4.5 ಕಿ.ಮಿ ರೋಪ್‍ವೇ ಬೈಂದೂರಿನ ಸೋಮೇಶ್ವರ ಬೀಚ್, ಮರವಂತೆ ಬೀಚ್ ಅಭಿವೃದ್ಧಿ ಮುಂತಾದ ಹಲವು ಯೋಜನೆ ಕಾರ್ಯಗತಗೊಂಡರೆ ಗೋವಾಕ್ಕಿಂತ ಬೈಂದೂರು ಕ್ಷೇತ್ರ ಖ್ಯಾತವಾಗಲಿದೆ. ಬೈಂದೂರಿನಲ್ಲಿ 100 ಬೆಡ್‍ನ ಆಸ್ಪತ್ರೆ ಆಗಲಿದ್ದು ಜನರ ಬಹು ವರ್ಷಗಳ ಕನಸು ನನಸಾಗಿಸಲಿದೆ. ಎಂದು ಬೈಂದೂರು ಶಾಸಕರು ಬಿ.ಎಂ.ಸುಕುಮಾರ ಶೆಟ್ಟಿ ಈ ಸಂದರ್ಭದಲ್ಲಿ ಹೇಳಿದರು.