ಶಿಕ್ಷಕರ ಸಂಘದ ಚುನಾವಣೆ ಹತ್ತಿರವಾಗುತ್ತಿದ್ದಂತೆ, ಪ್ರತ್ಯೇಕ ಬಣಗಳಲ್ಲಿ ಸ್ಪರ್ಧಿಸಿರುವ ಶಿಕ್ಷಕರು, ಬೆಂಬಲಿಗರು ಶಿಕ್ಷಕರ ಮನೆಗಳಿಗೆ ತೆರಳಿ ಮತ ಯಾಚನೆ.

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ : ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆ ಹತ್ತಿರವಾಗುತ್ತಿದ್ದಂತೆ, ಪ್ರತ್ಯೇಕ ಬಣಗಳಲ್ಲಿ ಸ್ಪರ್ಧಿಸಿರುವ ಶಿಕ್ಷಕರು ಹಾಗೂ ಅವರ ಬೆಂಬಲಿಗರು ಶಿಕ್ಷಕರ ಮನೆಗಳಿಗೆ ತೆರಳಿ ಮತ ಯಾಚನೆ ಮಾಡುತ್ತಿದ್ದಾರೆ.
  ಶನಿವಾರ ಶಿಕ್ಷಕರ ಬಣಗಳ ಸದಸ್ಯರು ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಶಿಕ್ಷಕರಿಗೆ ತೆರಳಿ ಮತ ಯಾಚನೆ ಮಾಡಿದರು.  ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಂಗವಾದಿ ನಾಗರಾಜ್‌ ಪಟ್ಟಣದಲ್ಲಿ ಮತ ಯಾಚನೆ ಸಂದರ್ಭದಲ್ಲಿ ಮಾತನಾಡಿ, ಎನ್‌ಪಿಎಸ್‌ ರದ್ದುಪಡಿಸಲು ಹೋರಾಟ ನಡೆಸಲಾಗುವುದು. ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ಮಿಸಲಾಗುವುದು. ಮತದಾರರು ಉತ್ತಮ ಅಭ್ಯರ್ಥಿಗಳಿಗೆ ಮತ ನೀಡಿ ಗೆಲ್ಲಿಸಬೇಕು ಎಂದು ಹೇಳಿದರು.  ಈ ಸಂದರ್ಭದಲ್ಲಿ ಬಂಗವಾದಿ ನಾಗರಾಜ್‌ ಹಾಗೂ ಗೋವಿಂದರೆಡ್ಡಿ ಬಣದ 17 ಅಭ್ಯರ್ಥಿಗಳು ಇದ್ದರು.