ದೇಶದ ಮೊದಲ ಐ-ಫೋನ್ ಕಂಪನಿ ಕಾರ್ಮಿಕರ ದಾಂಧಲೆ- ಕಂಪನಿ ಧ್ವಂಸ 50 ಕೋಟಿ ನಷ್ಟ-300ಕಿಡಿಗೇಡಿಗಳ ಸೆರೆ-ಸ್ಥಳಕ್ಕೆ ಐಜಿ,ಡಿಸಿ,ಎಸ್ಪಿ, ಸಂಸದರ ಭೇಟಿ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ವೇತನಕ್ಕಾಗಿ ಆಗ್ರಹಿಸಿ ಅನಿರ್ಧಿಷ್ಟ ಧರಣಿ ನಡೆಸುತ್ತಿದ್ದ ಕಾರ್ಮಿಕರ ದಾಂಧಲೆಯಿಂದಾಗಿ ತಾಲ್ಲೂಕಿನ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿನ ದೇಶದ ಮೊದಲ ಐಫೋನ್ ಕಂಪನಿಗೆ 50 ಕೋಟಿಗೂ ಹೆಚ್ಚು ಹಾನಿಯಾಗಿದ್ದು, ಈಗಾಗಲೇ 300ಕ್ಕೂ ಹೆಚ್ಚು ಕಿಡಿಗೇಡಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ದೇಶದ ಮೊದಲ ಐಪೋನ್ ಬಿಡಿಭಾಗಗಳನ್ನ ತಯಾರಿಸುವ ವಿಸ್ಟ್ರಾನ್ ಕಂಪನಿಯ ವಿರುದ್ದ ನೌಕರರು ಬಂಡೆದ್ದಿದ್ದು, ರೊಚ್ಚಿಗೆದ್ದ ಕಾರ್ಮಿಕರು ಬೆಳ್ಳಂಬೆಳಿಗ್ಗೆ ಕಂಪನಿಯಲ್ಲಿನ ಗಾಜುಗಳನ್ನ ಚೂರು ಚೂರು ಮಾಡಿ ಸಿಕ್ಕ ಸಿಕ್ಕ ವಸ್ತುಗಳನ್ನು ನಾಶಪಡಿಸಿ ಧಾಂಧಲೆ ಮಾಡಿದ್ದು, ಎರಡು ಎಲೆಕ್ಟ್ರಾನಿಕ್ ವಾಹನಕ್ಕೆ ಬೆಂಕಿ ಹಚ್ಚಿ ಕಂಪನಿಗೆ ಸೇರಿದ ಕಾರುಗಳನ್ನು ಧ್ವಂಸ ಮಾಡಿ ಕಂಪನಿಗೆ 50 ಕೋಟಿಗೂ ಹೆಚ್ಚು ರೂಪಾಯಿ ನಷ್ಟ ಉಂಟು ಮಾಡಿದ್ದಾರೆ.
ಕಾರ್ಮಿಕರು ರಾಡ್‍ಗಳಿಂದ ಕಂಪನಿಗೆ ಸೇರಿದ ಕಚೇರಿ ಹಾಗೂ ಕಾರಿನ ಗಾಜುಗಳನ್ನ ಪೀಸ್ ಪೀಸ್ ಮಾಡಿದ್ದಾರೆ, ಮತ್ತೊಂದೆಡೆ ಪುರುಷ ಕಾರ್ಮಿಕರಿಗಿಂದ ನಾವೇನು ಕಮ್ಮಿಯಿಲ್ಲ ಎಂಬಂತೆ ರಾಡ್ ಹಿಡಿದ ಮಹಿಳಾ ಕಾರ್ಮಿಕರು ಕಿಟಕಿ ಗಾಜು, ಕಾರುಗಳನ್ನು ನಾಶಪಡಿಸಿದ್ದಾರೆ.


ಕೋಲಾರದ ನರಸಾಪುರ ಕೈಗಾರಿಕಾ ಪ್ರದೇಶದ ವಿಸ್ಟ್ರಾನ್ ಕಂಪನಿಯನ್ನು ದೇಶದಲ್ಲಿ ಮೊದಲನೇ ಬಾರಿಗೆ ಪ್ರತಿಷ್ಟಿತ ಐಪೋನ್ ಕಂಪನಿಯು ತನಗೆ ಬಿಡಿಭಾಗಗಳನ್ನ ಪೂರೈಸುವ ಹಿನ್ನಲೆಯಲ್ಲಿ ಸ್ಥಾಪಿಸಿತ್ತಲ್ಲದೇ ಈ ಭಾಗದ 12 ಸಾವಿರ ಕಾರ್ಮಿಕರಿಗೆ ಉದ್ಯೋಗ ಸೃಷ್ಟಿಸುವ ಉದ್ದೇಶ ಹೊಂದಿತ್ತು.
ಕಳೆದ 2 ವರ್ಷದ ಹಿಂದೆ ಆರಂಭವಾಗಿದ್ದ ವಿಸ್ಟ್ರಾನ್ ಕಂಪನಿ, ಈ ವರ್ಷದ ಆರಂಭದಿಂದ ಬಿಡಿಭಾಗಗಳನ್ನ ತಯಾರಿಸಲು ಅಧಿಕೃತವಾಗಿ ಆರಂಭಿಸಿದೆ, ಆದರೆ ಕಂಪನಿಯಲ್ಲಿ ಕಾರ್ಮಿಕರಿಗೆ ದುಡಿದ ದುಡಿಮೆಯಷ್ಟು ಸಂಬಳ ನೀಡದೇ ವಂಚಿಸಿರುವ ಆರೋಪ ಕೇಳಿ ಬರುತ್ತಿದೆ.
ಹೊರಗುತ್ತಿಗೆ ಆಧಾರದ ಮೇಲೆ ಕಾರ್ಮಿಕರನ್ನು ಪಡೆದಿದ್ದು, ಕಂಪನಿ ವೇತನ ನೀಡಿದ್ದರೂ, ಗುತ್ತಿಗೆದಾರರಿಂದ ತಮಗೆ ವಂಚನೆಯಾಗುತ್ತಿದೆ ಎಂಬ ಹಿನ್ನಲೆಯಲ್ಲಿ ಕಾರ್ಮಿಕರು ಅನಿರ್ಧಿಷ್ಟಾವಧಿ ಧರಣಿ ಆರಂಭಿಸಿದ್ದರು.
ಶನಿವಾರ ಬೆಳಗ್ಗೆ ತಮ್ಮ ಆಕ್ರೋಶದ ಕಟ್ಟೆ ಒಡೆದು ಧಾಂಧಲೆ ಮಾಡುವ ಹಂತಕ್ಕೆ ಹೊಗಿದೆ, ಬೆಳಗ್ಗೆ 5 ಗಂಟೆಗೆ ಆರಂಭವಾದ ಪ್ರತಿಭಟನೆಯಲ್ಲಿ ರಾತ್ರಿ ಪಾಳಯದ ಮೂರು ಸಾವಿರಕ್ಕು ಹೆಚ್ಚು ಕಾರ್ಮಿಕರು ಹಾಗೂ ಬೆಳಗ್ಗೆ ಮೊದಲ ಶಿಪ್ಟ್‍ಗೆ ಆಗಮಿಸಿದ ಎರಡು ಸಾವಿರಕ್ಕೂ ಹೆಚ್ಚು ಕಾರ್ಮಿಕರು ಪ್ರತಿಭಟನೆ ನಡೆಸಿ, ಬಾಕಿಯಿರುವ ಎರಡು ತಿಂಗಳ ಸಂಬಳ ಹಾಗು ಹೆಚ್ಚುವರಿಯಾಗಿ ಮಾಡಿರುವ ಕೆಲಸದ ಹಣವನ್ನ ನೀಡುವಂತೆ ಆಗ್ರಹಿಸಿದ್ದಾರೆ.
ಆದರೆ ಕಾರ್ಮಿಕರ ಪ್ರತಿಭಟನೆಯನ್ನು ಆಡಳಿತ ವಿಭಾಗ ಅಷ್ಟು ಗಂಭೀರವಾಗಿ ಪರಿಗಣಿಸಿಲ್ಲ, ಇದರಿಂದ ರೊಚ್ಚಿಗೆದ್ದ ಕಾರ್ಮಿಕರು ಸಿಕ್ಕ ಸಿಕ್ಕ ಕಡೆಯಲ್ಲೆಲ್ಲಾ ಕಂಪನಿಯೊಳಕ್ಕೆ ನುಗ್ಗಿ ಗಾಜುಗಳನ್ನ ಒಡೆದು ಪುಡಿ ಪುಡಿ ಮಾಡಿದ್ದಾರೆ.
ಕಂಪನಿಯ ಎದುರೇ ಇದ್ದ ಎರಡು ಎಲೆಕ್ಟ್ರಾನಿಕ್ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ, ಇನ್ನು ಕಂಪನಿಯ ಹಿರಿಯ ಅಧಿಕಾರಿಗಳು ಓಡಾಡುವ ನಾಲ್ಕು ಇನ್ನೋವಾ ಕಾರುಗಳನ್ನ ಸಂಪೂರ್ಣವಾಗಿ ನುಚ್ಚು ನೂರು ಮಾಡಿ ಬೆಂಕಿ ಹಚ್ಚುವ ವೇಳೆ ಪೆÇಲೀಸರು ಆಗಮಿಸಿ ತೀವ್ರತೆಯನ್ನ ಕಡಿಮೆ ಮಾಡಿದರು.


ಸ್ಥಳಕ್ಕೆ ಐಜಿ, ಎಸ್ಪಿ ಜಿಲ್ಲಾಧಿಕಾರಿ ಭೇಟಿ


ಮೊದಲು ಬೆಳಗ್ಗೆ 7-30 ಕ್ಕೆ ಸ್ತಳಕ್ಕೆ ಕೋಲಾರ ಎಸ್ಪಿ ಕಾರ್ತಿಕ್ ರೆಡ್ಡಿ ಆಗಮಿಸಿ ಕಾರ್ಮಿಕರ ಮೇಲೆ ಲಾಠೀ ಚಾರ್ಜ್ ಮಾಡಿ ಚದುರಿಸಿದರು.
ಇತರೆ ಪೊಲೀಸ್ ಸಿಬ್ಬಂದಿಯೂ ಲಾಠೀಚಾರ್ಜ್ ಮಾಡಿದ್ದರಿಂದ ಹೊಲಗಳಲ್ಲಿ ತಪ್ಪಿಸಿಕೊಂಡು ಕಾರ್ಮಿಕರು ಓಡಲಾರಂಭಿಸಿದರು. ಒಂದು ಕಿಲೋ ಮೀಟರ್ ದೂರಕ್ಕೆ ಓಡಿಸಿದ್ದು, ಪೆÇಲೀಸರು ಲಾಠೀ ಚಾರ್ಜ್ ನಿಂದಾಗಿ ಕಾರ್ಮಿಕರು ಹಾಗೂಕಿಡಿಗೇಡಿಗಳು ಸ್ಥಳದಿಂದ ಕಾಲ್ಕಿತ್ತರು.
ಘಟನಾ ಸ್ತಳಕ್ಕೆ ಕೊಲಾರ ಡಿಸಿ ಸತ್ಯಭಾಮ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಆಗಮಿಸಿದ ಕೇಂದ್ರ ವಲಯ ಐಜಿಪಿ ಸೀಮಂತ್ ಕುಮಾರ್ ಸಿಂಗ್ ಸ್ಥಳ ಪರಿಶೀಲನೆ ನಡೆಸಿದ್ದು, ಸಂಬಳ ವಿಚಾರವಾಗಿಯೇ ಗಲಾಟೆ ನಡೆದಿದೆ ಎಂದು ತಿಳಿಸಿದ್ದು, 300ಕ್ಕೂ ಹೆಚ್ಚು ಮಂದಿಯನ್ನ ಬಂದಿಸಿದ್ದು, ತನಿಖೆ ನಡೆಸಿ ಆರೋಪಿಗಳನ್ನ ಪತ್ತೆಹಚ್ಚಲು 10 ತಂಢ ರಚನೆ ಮಾಡಿರುವುದಾಗಿ ತಿಳಿಸಿದರು.


50ಕೋಟಿಗೂ ಅಧಿಕ ನಷ್ಟ-ಐಜಿಪಿ ಸ್ವಷ್ಟನೆ


ಸ್ಥಳಕ್ಕೆ ಭೇಟಿ ನೀಡಿದ್ದ ಐಜಿಪಿ ಸೀಮಂತ್ ಕುಮಾರ್ ಸಿಂಗ್ ಪರಿಶೀಲನೆ ನಂತರ ಮಾಧ್ಯಮಗಳಿಗೆ ಮಾಹಿತಿ ನೀಡಿ, ಘಟನೆಯಲ್ಲಿ ಅಪಾರ ಪ್ರಮಾಣದ ವಸ್ತುಗಳು ಕಳುವಾಗಿದೆ ಎನ್ನಲಾಗಿದೆ, ಆಪಲ್ ಲ್ಯಾಪ್‍ಟಾಪ್, ಪೋನ್ ಬಿಡಿಭಾಗಗಳನ್ನ ಕಾಮಿರ್ಕರು ಕದ್ದಿರುವ ಆರೊಫವು ಕೇಳಿಬಂದಿದೆ ಎಂದರು.
ಕಂಪನಿಯ ಎರಡು ಮಹಡಿಯಲ್ಲು ಸಂಫೂರ್ಣವಾಗಿ ಗಾಜುಗಳು ಹಾಗು ಯಂತ್ರಗಳು ನಜ್ಜು ಗುಜ್ಜಾಗಿದ್ದು, ಒಟ್ಟು ನಷ್ಟ 50 ಕೋಟಿಗೂ ಅಧಿಕ ಎಂದು ಅಂದಾಜಿಸಲಾಗಿದೆ ಎಂದರು.
ಒಟ್ಟಿನಲ್ಲಿ ಕಾರ್ಮಿಕರ ಆಕ್ರೋಶದ ಕಟ್ಟೆ ಒಡೆದ ಪರಿಣಾಮ ಧಾಂಧಲೆ ಸೃಷ್ಟಿಯಾಗಿದ್ದು, ಇಷ್ಟಕ್ಕೆಲ್ಲಾ ಐಪೋನ್ ಬಿಡಿಭಾಗಗಳ ತಯಾರಿಸ್ತಿರುವ ವಿಸ್ಟ್ರಾನ್ ಕಂಪನಿಯೊಂದಿಗೆ ಗುತ್ತಿಗೆ ಪಡೆದಿರುವ ಗುತ್ತಿಗೆದಾರರು ಹಾಗೂ ಮಾನವ ಸಂಪನ್ಮೂಲ ವಿಭಾಗದ ವೀರಭದ್ರಯ್ಯ ಕಾರಣವೆಂದು ಆರೋಪಗಳು ಕೇಳಿ ಬಂದವು.
ಪ್ರತಿಭಟನೆವಿಷಯ


ಕಂಪನಿ ನಿರ್ಲಕ್ಷ್ಯ


ಪ್ರತಿಭಟನೆಯ ಮಾಹಿತಿ ಇದ್ದು ಪೊಲೀಸ್ ಇಲಾಖೆಗೆ ವಿಷಯವನ್ನು ಕಂಪನಿ ಕಾಟಾಚಾರಕ್ಕೆ ತಿಳಿಸಿದೆ ಎಂದು ಹೇಳಲಾಗಿದೆ. ನೌಕರರ ಸಮಸ್ಯೆಯನ್ನು ಆಲಿಸದೆ ನಿರ್ಲಕ್ಷ್ಯ ವಹಿಸಿದೇ ಇಂತಹ ಧಾಂಧಲೆಗೆ ಕಾರಣವೆಂಬುದು ಸ್ಪಷ್ಟವಾಗಿದೆ.
ಕಿಡಿಕೇಡಿಗಳ ಪತ್ತೆಗೆ ಕೋಲಾರ ಸೇರಿದಂತೆ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೆಜಿಎಫ್ ಪೊಲೀಸರಿಂದ ಶೋಧ ಕಾರ್ಯ ನಡೆಯುತ್ತಿದೆ.


ಪಿಎಂ.ಸಿಎಂ ಕಚೇರಿಯಿಂದಲೂಘಟನೆ ಮಾಹಿತಿಗೆ ಸೂಚನೆ


ಸ್ಥಳಕ್ಕೆ ಕೋಲಾರ ಸಂಸದ ಎಸ್ ಮುನಿಸ್ವಾಮಿ, ಶಾಸಕರಾದ ಶ್ರೀನಿವಾಸಗೌಡ, ಕೆ.ವೈ ನಂಜೇಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಧಾಂಧಲೆ ನಡೆಸಿರುವ ಕಾರ್ಮಿಕರ ವಿರುದ್ದ ನಿರ್ದಾಕ್ಷಿಣ್ಯ ಕ್ರಮಕ್ಕೆ ಸಂಸದ ಮುನಿಸ್ವಾಮಿ ಆಗ್ರಹಿಸಿದ್ದಾರೆ. ಘಟನೆಯ ಬಗ್ಗೆ ಪ್ರಧಾನಿ ಮೋದಿಯವರ ಕಚೇರಿ, ಕೇಂದ್ರ ಗೃಹ ಇಲಾಖೆ ರಾಜ್ಯ ಸರ್ಕಾರಕ್ಕೆ ಮಾಹಿತಿ ಕೇಳಿದ್ದು, ಸಿಎಂ ಯಡಿಯೂರಪ್ಪ ಜಿಲ್ಲಾಧಿಕಾರಿ ಸತ್ಯಭಾಮರಿಗೆ ಕರೆ ಮಾಡಿ ವರದಿ ನೀಡುವಂತೆ ಸೂಚಿಸಿದ್ದಾರೆ,


ಕಠಿಣ ಕ್ರಮಕ್ಕೆ ಸಂಸದರ ಸೂಚನೆ


ವಿಸ್ಟ್ರಾನ್ ಕಂಪನಿಯನ್ನ ಒಂದೆರಡು ದಿನದಲ್ಲಿ ಪುನರ್ ಆರಂಭಿಸುವುದು ಸವಾಲಿನ ವಿಚಾರವಾಗಿದ್ದು, ಈ ಬಗ್ಗೆ ಜಿಲ್ಲಾಡಳಿತ ಕಂಪನಿ ಜೊತೆಗೆ ಮಾತುಕತೆ ನಡೆಸಿ, ಸೂಕ್ತ ಭದ್ರತೆ ನೀಡುವ ಭರವಸೆ ನೀಡಿದೆ.
ಆದರೆ ನೌಕರರು ಸ್ವಲ್ಪ ತಾಳ್ಮೆಯಿಂದ ವರ್ತಿಸಿದ್ದರೂ ಇಂತಹ ಧಾಂಧಲೆ ನಡೆಯುತ್ತಿರಲಿಲ್ಲ, ಇನ್ನು ಗಲಾಟೆ ಪೂರ್ವ ನಿಯೋಜಿತ ಎಂದು ಸಂಸದ ಮುನಿಸ್ವಾಮಿ ಆರೋಪಿಸಿದ್ದು, ಪೊಲೀಸರ ತನಿಖೆಯಿಂದಷ್ಟೆ ಘಟನೆಗೆ ಕಾರಣವೇನೆಂದು ತಿಳಿಯಬೇಕಿದೆ
.

ನಡೆಸುತ್ತಿದ್ದ ಕಾರ್ಮಿಕರ ದಾಂಧಲೆಯಿಂದಾಗಿ ಕೋಲಾರ ತಾಲ್ಲೂಕಿನ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿನ ದೇಶದ ಮೊದಲ ಐಫೋನ್ ಕಂಪನಿಗೆ 50 ಕೋಟಿಗೂ ಹೆಚ್ಚು ಹಾನಿಯಾಗಿದ್ದು, ಕಾರ್ಮಿಕರ ಮೇಲೆ ಲಾಠಿ ಚಾರ್ಜ್ ನಡೆಸಿ ಚದುರಿಸಲಾಯಿತು.