JANANUDI.COM NETWORK

ಕುಂದಾಪುರ, ನ.25. ಕುಂದಾಪುರ ಹೋಲಿ ರೋಜರಿ ಮಾತಾ ಚರ್ಚಿನ 451 ವಾರ್ಷಿಕ ಮಹೋತ್ಸವು ನ.25 ರಂದು ಕೋವಿಡ್ 19 ರ ಕಾರಣದಿಂದ ಸರಳವಾಗಿ ನಡೆಯಿತು. ಆದರೆ ಈ ವಾರ್ಷಿಕ ಹಬ್ಬವು ಅದ್ದೂರಿಯಿಂದ, ಜಾತ್ರೆ, ಮೆರವಣಿಗೆಗಳಿಂದ ನಡೆಯದಿದ್ದರೂ, ಬಹಳ ಭಕ್ತಿ ಶ್ರದ್ದೆಯಿಂದ ನಡೆಯಿತು.
ಈ 451 ವಾರ್ಷಿಕ ಮಹೋತ್ಸವದ ಯಜ್ನ ಬಲಿದಾನವನ್ನು ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥಡ್ರಲ್ ನ ರೆಕ್ಟರ್ ಅ|ವಂ|ವಾಲೇರಿಯನ್ ಮೆಂಡೊನ್ಸಾ ಅರ್ಪಿಸಿ ಸಂದೇಶ ನೀಡುತ್ತಾ “ಪ್ರತಿಯೊಬ್ಬ ಮನುಜ ಪವಿತ್ರನಾದವನು, ಪ್ರತಿಯೊಬ್ಬನಿಗೂ ಸಮಾನತೆ, ಗೌರವವಿದೆ, ದೇವರ ಮುಂದೆ ಎಲ್ಲರೂ ಒಂದೇ, ಇದೇ ಕ್ರಾಂತಿಯನ್ನು ಯೇಸು ಕ್ರಿಸ್ತ ಮಾಡಿದ್ದನೆಂಬುದು ಎಲ್ಲರಿಗೆ ತಿಳಿದಿರಲಿ. ಮನುಷ್ಯ ಮನುಷ್ಯನಲ್ಲಿರುವ ಅಂತರವನ್ನು ಯೇಸು ತೊಡೆದು ಹಾಕಲು ಶ್ರಮಿಸಿದ ದೇವ ಪುರುಷನು. ಅದರಂತೆ ಪ್ರತಿಯೊಬ್ಬ ಮನುಜನಿಗೆ ಗೌರವ ಸ್ಥಾನ ಮಾನ ನೀಡಲು ಯೇಸು ಸ್ವಾಮಿ ಕರೆ ಎಲ್ಲರಿಗೂ ನೀಡುತ್ತಾರೆ” ಎಂದು ತಿಳಿಸಿದರು.
“ಯೇಸು ಮೇರಿ ಮಾತೆಯ ಗರ್ಭದಲ್ಲಿರುವಾಗ ಮೇರಿ ಮಾತೆ ನನ್ನ ಜೀವ ದೇವರ ಮಹಿಮೆಯನ್ನು ಕೊಂಡಾಡುತ್ತಾಳೆ, ದೇವ ಮಾತೆ ಮೇರಿ ದೇವರಿಗೆ ಮಾಡಿದ ಸ್ಥುತಿ ಗಾಯನವು ನಮ್ಮ ಭಕ್ತಿಗೆ ಅಗಾಧ ಪ್ರೇರಣೆ ಲಭಿಸುತ್ತದೆ. ಈ ಕುಂದಾಪುರ ಇಗರ್ಜಿ ಉಡುಪಿ ಧರ್ಮ ಪ್ರಾಂತ್ಯದಲ್ಲೇ ಮೊದಲ ಇಗರ್ಜಿ, ನಾನು ಮೊದಲಿನಿಂದಲೂ, ಈ ಇಗರ್ಜಿಯ ಸಂಪರ್ಕದಲ್ಲಿದ್ದವನು, ಈ ಇಗರ್ಜಿಯ ಭಕ್ತರು ತುಂಬ ವಿಶ್ವಾಸಿಗಳು, 450 ರ ಸಂಭ್ರಮದಲ್ಲಿದ್ದು ಈಗ 451 ನೇ ವರ್ಷಕ್ಕೆ ಕಾಲಿಟ್ಟುರುವಾಗ ನೀವು ನಿಮ್ಮ ತನು ಮನ ದನದಿಂದ ನಿಮ್ಮ ಇಗರ್ಜಿಯನ್ನು ನೂತನ ಇಗರ್ಜಿಯಂತ್ತೆ ಮಾರ್ಪಡಿಸಿದ್ದಿರಿ, ನಿಮ್ಮ ಭಕ್ತಿ ವಿಶ್ವಾಸ ಶ್ರೇಷ್ಠವಾದುದು, ಇದು ಇತರ ಇಗರ್ಜಿಗಳಿಗೆ ಆದರ್ಶವಾಗಲಿ” ಎಂದು ಅವರು ನುಡಿದರು.
ಜಾತ್ರೆಯಿಲ್ಲದ ಈ ಮಹಾವಾರ್ಷಿಕೋತ್ಸವದ ಬಲಿದಾನದಲ್ಲಿ ಕುಂದಾಪುರ ಇಗರ್ಜಿಯ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಭಾಗಿಯಾಗಿ ಹಬ್ಬದ ಶುಭಾಷಯ ಮತ್ತು ವಂದನೆಗಳನ್ನು ಸಲ್ಲಿಸಿದರು. ಸಹಾಯಕ ಧರ್ಮಗುರು ವಂ|ವಿಜಯ್ ಜೊಯ್ಸನ್ ಡಿಸೋಜಾ, ಸಂತ ಮೇರಿಸ್ ಪಿ.ಯು.ಕಾಲೇಜಿನ ಪ್ರಾಂಶುಪಾಲ ಧರ್ಮಗುರು ವಂ|ಪ್ರವೀಣ್ ಅಮ್ರತ್ ಮಾರ್ಟಿಸ್ ಸಹಬಲಿದಾನವನ್ನು ಅರ್ಪಿಸಿದರು.
ಕುಂದಾಪುರ, ನ.25. ಕುಂದಾಪುರ ಕೋಲಿ ರೋಜರಿ ಮಾತಾ ಚರ್ಚಿನ 451 ವಾರ್ಷಿಕ ಮಹೋತ್ಸವು ನ.25 ರಂದು ಕೋವಿಡ್ 19 ರ ಕಾರಣದಿಂದ ಸರಳವಾಗಿ ನಡೆಯಿತು. ಆದರೆ ಈ ವಾರ್ಷಿಕ ಹಬ್ಬವು ಅದ್ದೂರಿಯಿಂದ, ಜಾತ್ರೆ, ಮೆರವಣಿಗೆಗಳಿಂದ ನಡೆಯದಿದ್ದರೂ, ಬಹಳ ಭಕ್ತಿ ಶ್ರದ್ದೆಯಿಂದ ನಡೆಯಿತು.