JANANUDI.COM NETWORK
ಕುಂದಾಪುರ,ನ.24: ಭಾರತದಲ್ಲಿ ಜನಸಾಮನ್ಯರಿಗೆ ಶಿಕ್ಷಣ ದೊರಕುವ ಕಷ್ಟ ಕಾಲದಲ್ಲಿ ಅದರಲ್ಲೂ ಹೆಣ್ಣು ಹುಡುಗಿಯರಿಗೆ ಶಿಕ್ಷಣವೇ ಮರಿಚೀಕೆಯಾದ ಕಾಲದಲ್ಲಿ ಸುಮಾರು 150 ವರ್ಷಗಳ ಹಿಂದೆ ಫ್ರಾನ್ಸನಲ್ಲಿ ಆರಂಭಿಸಲ್ಪಟ್ಟ ಕಾರ್ಮೆಲ್ ಭಗಿನಿಯರ ಸಂಸ್ಥೆ, ಅದರ ಸ್ಥಾಪಕಿ ಮದರ್ ವೆರೊನಿಕಾ, ಮಂಗಳೂರು ಬಿಶಪ್ ಮಾರಿ ಎಫ್ರೆಮ್ ಇವರ ಮುಂದಾಳತ್ವದಲ್ಲಿ ಮಂಗಳೂರಿನಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿ ಕಾರ್ಮೆಲ್ ವಿಧ್ಯಾ ಸಂಸ್ಥೆ ಆರಂಭಿಸಿತು.
“ಈ ಕಾರ್ಮೆಲ್ ಸಂಸ್ಠೆಯು ಅನೇಕ ಶಾಖೆಗಳು ಆರಂಭಿಸಿ ಇಂದು ಭಾರತದತ್ಯಾಂತ ಶಿಕ್ಷಣ ನೀಡುತ್ತಾ ಶಿಕ್ಷಣ ಕ್ಷೇತ್ರಗಳಲ್ಲಿ ತಮ್ಮ ಅಮೂಲ್ಯ ಸೇವೆ ನೀಡುತಿವೆ. ಹಾಗೆಯೇ ಕುಂದಾಪುರದಲ್ಲಿಯೂ ಕಾರ್ಮೆಲ್ ಸಂಸ್ಥೆಯು, ಕುಂದಾಪುರ ಚರ್ಚಿನ ಅಂದಿನ ಪ್ರಧಾನ ಧರ್ಮಗುರು ವಂ|ಡೇನಿಸ್ ಜೆ.ಡಿಸೋಜಾ ಇವರ ಆಶಯದೊಂದಿಗೆ 1930 ರಲ್ಲಿ ಕಾರ್ಮೆಲ್ ಸಂಸ್ಥೆ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಪ್ರಾಥಮಿಕ ಶಾಲೆ ಆರಂಭಿಸಿತು. 1931 ರಲ್ಲಿ ಅನಾಥಶ್ರಮ ಆರಂಭಿಸಿ, 1947 ಪ್ರೌಡ ಶಾಲೆ ಆರಂಭಿಸಿತು. ಇಂದಿಗೂ ಈ ಶಿಕ್ಷಣ ಸಂಸ್ಥೆಗಳು ಗುಣ ಮಟ್ಟದ ಶಿಕ್ಷಣ ನೀಡಿದ ಖ್ಯಾತಿಯನ್ನು ಹೊಂದಿವೆ.“
ಕಾರ್ಮೆಲ್ ಸಂಸ್ಥೆಯ 150 ವರ್ಷಗಳ ಸಂಭ್ರಮದ ಸವಿ ನೆನಪಿಗಾಗಿ ಕುಂದಾಪುರ ಆಪೊಸ್ತಲಿಕ್ ಕಾರ್ಮೆಲ್ ಸಂಸ್ಥೆಯ ಪ್ರಾಥಮಿಕ ಶಾಲೆಯಲ್ಲಿ ಮದರ್ ವೆರೊನಿಕಾರವರಿಗೆ ಕ್ರತ್ಞತೆ ಸಲ್ಲಿಸಲು ನ.24 ರಂದು ಕಾರ್ಯಕ್ರಮ ಹಮ್ಮಿಕೊಂಡಿತ್ತು. ಪ್ರೌಢ ಶಾಲೆಯ ನಿವ್ರತ್ತ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಆಶಾ ದೀಪಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮದರ್ ವೆರೊನಿಕಾರ ಜೀವನ ಚರಿತ್ರೆಯನ್ನು ವಿವರಿಸಿದರು. ಪ್ರಾಥಮಿಕ ಶಾಲೆಯ ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಕೀರ್ತನ್ ಅಧ್ಯಕ್ಷೆತೆ ವಹಿಸಿ ಸ್ವಾಗತಿಸಿದರು. ಪ್ರೌಢ ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಸಿಲ್ವಿಯಾ, ನಿವ್ರತ್ತ ಶಿಕ್ಷಕಿ ಸಿಸ್ಟರ್ ಕೊರೊನಾ, ಪಾಲಕರ ಪರವಾಗಿ ರಶ್ಮಿ ಪಾಯ್ಸ್ ಮತ್ತಿತರರು ವೇದಿಕೆಯಲ್ಲಿದ್ದರು. ಮಕ್ಕಳಿಂದ ಮದರ್ ವೆರೊನಿಕಾರ ಜೀವನ ಚರಿತ್ರೆಯ ಕಿರು ನಾಟಕ, ಮದರ್ ವೆರೊನಿಕಾರ ಬಗ್ಗೆ ಕ್ವೀಜ್ ಮತ್ತು ನ್ರತ್ಯ ಪ್ರದರ್ಶಿಸಲಾಯಿತು. ಕಾರ್ಯಕ್ರಮದಲ್ಲಿ ಕೆಲವೇ ಮಕ್ಕಳು ಮತ್ತು ಹೆತ್ತವರು ಹಾಗೆ ಆಪೊಸ್ತಲಿಕ್ ಕಾರ್ಮೆಲ್ ಸಂಸ್ಥೆಯ ಶಿಕ್ಷಕರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಿಸ್ಟರ್ ನವಿತಾ ನಡೆಸಿಕೊಟ್ಟರು. ಶಿಕ್ಷಕಿ ವನಿತಾ ಬರೆಟ್ಟೊ ಧನ್ಯವಾದ ಅರ್ಪಿಸಿದರು.