ಮಾಜಿ ಪ್ರಧಾನಿ ಇಂದಿರಾ ಗಾಂಧಿ ಜನ್ಮ ದಿನಾಚರಣೆ : ಬ್ಲಾಕ್ ಕಾಂಗ್ರೆಸ್ ಕುಂದಾಪುರ

JANANUDI.COM NETWORK

ಸ್ವತಂತ್ರ ಭಾರತದ ಭಾರತದ ಮೊದಲ ಮಹಿಳಾ ಪ್ರಧಾನಿ ಇಂದಿರಾ ಗಾಂಧಿಯವರ ಜನ್ಮ ದಿನಾಚರಣೆಯನ್ನು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಬೆಳಿಗ್ಗೆ 9.30 ಗಂಟೆಗೆ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಹಿರಿಯ ನಾಯಕರಾದ ಕೋಣಿ ಕೃಷ್ಣದೇವ ಕಾರಂತರು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಈ ದೇಶ ಕಂಡ ಓರ್ವ ಅದ್ಭುತ ಆಡಳಿಗಾರ್ತಿ, ಇವರ ಆಡಳಿತದಲ್ಲಿ ವಂಶ ಪಾರಂಪರ್ಯವಾಗಿ ಕೃಷಿ, ಕಾರ್ಮಿಕರಾಗಿದ್ದ ಲಕ್ಷಾಂತರ ಹಿಂದುಳಿದ ವರ್ಗದ ಜನತೆಗೆ ಭೂಮಾಲಿಕತ್ವ ಲಭಿಸಿತು. ಬಡಜನರಿಗೂ ಕೂಡ ಹೈನುಗಾರಿಕೆ, ಕೃಷಿ ಮುಂತಾದ ಕ್ಷೇತ್ರಗಳಲ್ಲಿ ಸಾಲ ದೊರಕುವಂತೆ ಮಾಡಿದ ಹೆಗ್ಗಳಿಕೆ ಇಂದಿರಾ ಗಾಂಧಿಯವರಿಗೆ ಸಲ್ಲುತ್ತದೆ ಎಂದರು.

20 ಅಂಶದ ಕಾರ್ಯಕ್ರಮ, ಆಹಾರ ಕೊರತೆ ನೀಗಿಸಲು ಜಾರಿಗೊಳಿಸಿದ ಹಸಿರು ಕ್ರಾಂತಿ ಮತ್ತು ಕ್ಷೀರಾ ಕ್ರಾಂತಿ ಸೇರಿದಂತೆ ಹಲವು ಜನಪರ ಕಾರ್ಯಕ್ರಮಗಳನ್ನು ಕೊಡುಗೆಯಾಗಿ ನೀಡಿದವರು ಇಂದಿರಾ ಗಾಂಧಿ ಎಂದು ಕೆ.ಎಫ್.ಡಿ.ಸಿ ಮಾಜಿ ಅಧ್ಯಕ್ಷರಾದ ಬಿ. ಹಿರಿಯಣ್ಣರವರು ಹೇಳಿದರು.

ಪಿ.ಎಲ್.ಡಿ.ಬ್ಯಾಂಕಿನ ಅಧ್ಯಕ್ಷರಾದ ಮಲ್ಯಾಡಿ ಶಿವರಾಮ ಶೆಟ್ಟಿಯವರು ಮಾತನಾಡಿ ಇಂದಿರಾ ಗಾಂಧಿಯವರ ಬಡವರ ಪರವಾದ ನೀತಿಗಳು ಬ್ಯಾಂಕ್ ರಾಷ್ಟಿçÃಕರಣಕ್ಕೆ ಸಾಧ್ಯವಾಯಿತು ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾನ್ಮಕ್ಕಿ ಹರಿಪ್ರಸಾದ್ ಶೆಟ್ಟಿಯವರು ಇಂದಿರಾ ಗಾಂಧಿ ಆಡಳಿತದಲ್ಲಿ ದೇಶಕ್ಕೆ ಮಾರಕವಾಗಿದ್ದ ಭಯೋತ್ಪಾದಕರ ನಿರ್ಮೂಲನೆಗಾಗಿ “ಆಪರೇಶನ್ ಬ್ಲೂಸ್ಟಾರ್ ಕಾರ್ಯಾಚರಣೆ” ವಿಶ್ವಕ್ಕೆ ಮಾದರಿಯಾಗಿತ್ತು ಎಂದರು.

ಈ ಸಂದರ್ಭದಲ್ಲಿ ಪುರಸಭಾ ಸದ್ಯರಾದ ದೇವಕಿ ಸಣ್ಣಯ್ಯ, ಪ್ರಭಾವತಿ ಶೆಟ್ಟಿ, ಚಂದ್ರಶೇಖರ ಖಾರ್ವಿ, ಮಾಜಿ ಪುರಸಭಾ ಅಧ್ಯಕ್ಷ ಹಾರೂನ್ ಸಾಹೇಬ್, ಕೆ.ಪಿ.ಸಿ.ಸಿ. ಸಾಮಾಜಿಕ ಜಾಲತಾಣಗಳ ರಾಜ್ಯ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ, ನಗರ ಪ್ರಾಧಿಕಾರದ ಮಾಜಿ ಅಧ್ಯಕ್ಷ ವಿಕಾಸ್ ಹೆಗ್ಡೆ, ಸೇವಾದಳದ ಅಧ್ಯಕ್ಷ ಕುಮಾರ ಖಾರ್ವಿ, ಐ.ಟಿ ಸೆಲ್ ಬ್ಲಾಕ್ ಅಧ್ಯಕ್ಷ ಕೆ. ಶಿವಕುಮಾರ್, ನಗರ ಅಧ್ಯಕ್ಷ ಗಣೇಶ ಶೇರಿಗಾರ್, ಆಶಾ ಕಾರ್ವೆಲ್ಲೋ, ಶಶಿರಾಜ್ ಎಂ. ಧರ್ಮಪ್ರಕಾಶ್, ಸದಾನಂದ ಖಾರ್ವಿ, ಸ್ಟೀವನ್ ಡಿ’ಕೋಸ್ಟಾ, ದಿನೇಶ್ ಬೆಟ್ಟಾ, ಮುನಾಫ್, ಸುನಿಲ್ ಪೂಜಾರಿ, ನಾಗರಾಜ್ ನಾಯ್ಕ್, ಅಶ್ವತ್ ಕುಮಾರ್, ರಘುರಾಮ ನಾಯ್ಕ್, ಅಶೋಕ್ ಸುವರ್ಣ, ಕೆ. ಸುರೇಶ್, ದಿನೇಶ್ ಖಾರ್ವಿ, ಎಡೋಲ್ಫ್ ಡಿ’ಕೋಸ್ಟಾ, ಜೋಸೆಫ್ ರೆಬೆಲ್ಲೋ, ವಿಜಯಧರ್, ಹಬೀಬ್, ಶಿಶಿರ, ಪಲ್ಲವಿ ಇನ್ನಿತರರು ಉಪಸ್ಥಿತರಿದ್ದರು.

ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ಟೋ ಸ್ವಾಗತಿಸಿ, ನಿರೂಪಿಸಿದರು. ಇಂಟಕ್ ಅಧ್ಯಕ್ಷ ಚಂದ್ರ ಅಮೀನ್ ವಂದಿಸಿದರು.