450 ವರ್ಷಗಳ ಸಂಭ್ರದಲ್ಲಿರುವ ಕುಂದಾಪುರ ರೋಜರಿ ಮಾತಾ ಇಗರ್ಜಿ ಎದುರಿನಲ್ಲಿ 2 ಪ್ರತಿಮೆಗಳ ಪ್ರತಿಷ್ಟಾಪನೆ

JANANUDI.COM NETWORK


ಕುಂದಾಪುರ,.15: ಉಡುಪಿ ಧರ್ಮಪ್ರಾಂತ್ಯದ ಅತ್ಯಂತ ಹಿರಿಯದಾಗಿ ಇತಿಹಾಸ ಪ್ರಸಿದ್ದ ಕುಂದಾಪುರ ರೋಜರಿ ಮಾತ ಇಗರ್ಜಿಯ 450 ವರ್ಷಗಳ ಆಚರಣೆಯ ಸಂಭ್ರಮದಲ್ಲಿದ್ದು 451 ನೇ ವರ್ಷಕ್ಕೆ ಕಾಲಿಟ್ಟು ಸಮಾಪನ ಕಾರ್ಯಕ್ರಮ ಕೊವೀಡ್ 19 ಸಮಸ್ಯೆಯಿಂದಾಗಿ ವಿಳಂಬಗೊಂಡಿದೆ.
ಈ ನಡುವೆ ಸಂಭ್ರಮಾಚರಣೆ ಪ್ರಯುಕ್ತ ಇಗರ್ಜಿಯಲ್ಲಿ ಹಲವು ಯೋಜನೆಗಳು ಅವಿಷ್ಕಾರ ಗೊಂಡು, ಇಗರ್ಜಿಯ ಒಳ ಭಾಗ ಹಲವಾರು ರೀತಿಯಲ್ಲಿ ನವೀಕ್ರತಗೊಂಡು ನೂತನ ಚರ್ಚಿನ ಹಾಗೇ ಮೆರುಗನ್ನು ಪಡೆದಿದೆ. ಇದರ ಭಾಗವಾಗಿ ಭಾನುವಾರ 15 ರಂದು ಇಗರ್ಜಿಯ ಮುಂಭಾಗದ ಬಲ ಬದಿಯಲ್ಲಿ ಚರ್ಚಿನ ಪಾಲಕಿ ರೋಜರಿ ಮಾತೆಯ ಪ್ರತಿಮೆ (ಯೇಸುವಿನ ತಾಯಿ) ಮತ್ತು ಎಡ ಬದಿಯಲ್ಲಿ ಸಂತ ಜೋಸೆಫ್ ವಾಜ್ ರವರ ಪ್ರತಿಮೆ ಪ್ರತಿಷ್ಟಾಪಿಸಲಾಯಿತು. ಸಂತ ಜೋಸೆಫ್ ವಾಜ್ ಈ ಚರ್ಚಿನಲ್ಲಿ ಸುಮಾರು 300 ವರ್ಷಗಳ ಹಿಂದೆ (ಅಂದು ಕುಂದಾಪುರ ಚರ್ಚಿನ ವ್ಯಾಪ್ತಿ ತುಂಬಾ ವಿಸ್ತೀಣದಾಗಿತ್ತು) ಪ್ರಪ್ರಥಮ ಭಾರತೀಯ ಪ್ರಧಾನ (ಮುಖ್ಯಸ್ಥರಾಗಿ) ಧರ್ಮಗುರುಗಳಾಗಿ ಸೇವೆ ಸಲ್ಲಿಸಲು ಆಯ್ಕೆಯಾದರು. ಅವರು ಅಂದಿನ ಕುಂದಾಪುರ ಚರ್ಚಿನ ಅವರ ಕೋಣೆಯಲ್ಲಿ ಧ್ಯಾನಸಕ್ತರಾದಗ ದೇವರು ಅವರನ್ನು ನೆಲದಿಂದ ಹಲವಾರು ಅಡಿಗಳಸ್ಟು ಮೇಲೆತ್ತಿ (ಗಾಳಿಯಲ್ಲಿ ತೇಲುತ್ತಾ) ಅವರೊಡನೆ ಸಂಭಾಷಿತಿರುವ ಮಾಹನ್ ಘಟನೆ ನಡೆಯಿತು. ಇದನ್ನು ಕಣ್ಣಾರೆ ಕಂಡ ಒಬ್ಬ ಅತಿಥಿ ಧರ್ಮಗುರುಗಳೊಬ್ಬರು ಗೋವಾ ಧರ್ಮಗುರುಗಳ ಮುಖ್ಯಸ್ಥರಿಗೆ ತಿಳಿಸಿದ್ದ ದಾಖಲೆಯಿದೆ. ನಂತರ ಸಂತ ಜೋಸೆಫರು ಶ್ರೀಲಂಕಾಗೆ ತೆರಳಿ ಅಲ್ಲಿ ಹಲವಾರು ಪವಾಡಗಳನ್ನು ನಡೆಸಿ ಸಂತ ಪದವಿಯನ್ನು ಪಡೆದುಕೊಂಡರು.
ಈ ಪ್ರತಿಮೆಗಳನ್ನು ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಆಶೀರ್ವದಿಸಿ ಪ್ರತಿಷ್ಠಾಪನೆ ಮಾಡಿದರು. ಈ ಸಂದರ್ಭದಲ್ಲಿ ಸಹಾಯಕ ಧರ್ಮಗುರು ವಂ| ವಿಜಯ್ ಜೋಯ್ಸನ್ ಡಿಸೋಜಾ, ಪ್ರತಿಮೆಗಳ ಅನಾವರಣದ ಪೋಷಕರಾದ ಬರ್ನಾಡ್ ಡಿಕೋಸ್ತಾ ಮತ್ತು ಕುಟುಂಬ, ಜೋನ್ಸನ್ ಡಿಆಲ್ಮೇಡಾ ಮತ್ತು ಕುಟುಂಬ, ಚರ್ಚ್ ಉಪಾಧ್ಯಕ್ಷರು, ಕಾರ್ಯದರ್ಶಿ ಧರ್ಮಭಗಿನಿಯರು, ಪಾಲನ ಮಂಡಳಿ ಸದಸ್ಯರು ಮತ್ತು ಇನ್ನಿತರು ಹಾಜರಿದ್ದರು
.