ರಾಜ್ಯೋತ್ಸವದ ಪ್ರಯುಕ್ತ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ‘ನಮ್ಮವ್ವ ಕನ್ನಡತಿ’ ಎಂಬ ಕನ್ನಡ ಗೀತೆಯನ್ನು ಡಾ ವೈ.ಎ.ವೆಂಕಟಾಚಲ ಬಿಡುಗಡೆ ಮಾಡಿದರು.

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರದ ವೆಂಕಟೇಶ್ವರ  ಪ್ಯಾರಾ ಮೆಡಿಕಲ್‌ ಕಾಲೇಜು ಸಭಾಂಗಣದಲ್ಲಿ ರಾಜ್ಯೋತ್ಸವದ ಪ್ರಯುಕ್ತ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ‘ನಮ್ಮವ್ವ ಕನ್ನಡತಿ’ ಎಂಬ ಕನ್ನಡ ಗೀತೆಯನ್ನು ಡಾ ವೈ.ಎ.ವೆಂಕಟಾಚಲ ಬಿಡುಗಡೆ ಮಾಡಿದರು.

ಉತ್ತಮ ಸಾಹಿತ್ಯದ ಸಾಂಗತ್ಯ ಅಗತ್ಯ

ಶ್ರೀನಿವಾಸಪುರ:  ಮನುಷ್ಯ ನೈತಿಕವಾಗಿ ಬೆಳೆಯಬೇಕಾದರೆ, ಉತ್ತಮ ಸಾಹಿತ್ಯದ ಸಾಂಗತ್ಯ ಅಗತ್ಯ. ಸುಶ್ರ್ಯಾವ್ಯವಾದ ಕನ್ನಡ ಗೀತೆಗಳು ನಾಡು ನುಡಿಯ ಹಿರಿಮೆಯನ್ನು ಮೆರೆಯುತ್ತವೆ. ಅಂಥ ಗೀತಕಾರರನ್ನು ಗೌರವಿಸುವುದು ಕನ್ನಡಿಗರಾದ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಕನ್ನಡ ಪರಿಚಾರಕ ಡಾ. ವೈ.ಎ.ವೆಂಕಟಾಚಲ ಹೇಳಿದರು. ಪಟ್ಟಣದ ವೆಂಕಟೇಶ್ವರ  ಪ್ಯಾರಾ ಮೆಡಿಕಲ್‌ ಕಾಲೇಜು ಸಭಾಂಗಣದಲ್ಲಿ ರಾಜ್ಯೋತ್ಸವದ ಪ್ರಯುಕ್ತ ಕೇರ್‌ ಆಫ್ ಅಡ್ರಸ್ ಪಿಲಂಸ್ಸ್‌ ವತಿಯಿಂದ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಕವಿ ಆರ್‌.ಚೌಡರೆಡ್ಡಿ ಪನಸಮಾಕನಹಳ್ಳಿ ಅವರು ಬರೆದಿರುವ ‘ನಮ್ಮವ್ವ ಕನ್ನಡತಿ’ ಎಂಬ ಕನ್ನಡ ಗೀತೆಯನ್ನು ಬಿಡುಗಡೆ ಮಾಡಿ ಮಾತನಾಡಿ, ನಾಡಿನ ಗಡಿ ಭಾಗದಲ್ಲಿ ಕನ್ನಡ ಭಾಷೆ ಜೀವಂತವಾಗಿದೆ. ಅದು ಜನರ ಮನದ ಭಾಷೆಯಾಗಿ ಉಳಿದುಕೊಂಡಿದೆ ಎಂದು ಹೇಳಿದರು.  ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜಿ.ಎನ್‌.ಕುಬೇರಗೌಡ ಮಾತನಾಡಿ, ಕನ್ನಡ ಪರ ಸಂಘಟನೆಗಳ ಹೋರಾಟದ ಫಲವಾಗಿ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ಸಿಕ್ಕಿದೆ. ಆದರೆ ಆ ಸಂಬಂಧ ಕೇಂದ್ರ ಸರ್ಕಾರದಿಂದ ಬರುತ್ತಿರುವ ದೊಡ್ಡ ಮೊತ್ತದ ಅರ್ಥಿಕ ಸಂಪನ್ಮೂಲವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.  ಕವಿ ಆರ್‌.ಚೌಡರೆಡ್ಡಿ ಅವರ ಭಾವ ಗೀತೆಗಳು ಈಗಾಗಲೇ ಜಾಲತಾಣದಲ್ಲಿ ದೊಡ್ಡ ಹೆಸರು ಮಾಡಿವೆ. ಅವರ ಹಲವು ಗೀತೆಗಳು ವೈರಲ್‌ ಆಗಿ ಜಮಮನ ತಲುಪಿವೆ. ‘ನನ್ನವ್ವ ಕನ್ನಡತಿ’ ಈವರೆಗೆ ಕನ್ನಡದ ಹಿರಿಮೆ ಸಾರುವ ಗೀತೆಗಳಲ್ಲಿ ಮುಂಚೂಣಿಯಲ್ಲಿದೆ. ಇಂಥ ಗೀತೆ ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಣೆ ಆಗಿರುವುದು ಹೆಮ್ಮೆಯ ಸಂಗಿಯಾಗಿದೆ ಎಂದು ಅಭಿಪ್ರಾಯಪಟ್ಟರು.  ಸಿರಿಗನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ ಕೆ.ನರಸಿಂಹಮೂರ್ತಿ ಮಾತನಾಡಿ, ಕನ್ನಡದ ಕವಿಗಳಿಗೆ ಅನ್ಯಾಯವಾಗಲು ಬಿಡಬಾರದು. ಅವರ ರಚನೆಗಳನ್ನು ಗಂಥಾಲಯದಲ್ಲಿ ಕುಳಿತು ಓದಬೇಕು. ಬದಲಾದ ಪರಿಸ್ಥಿತಿಯಲ್ಲಿ ಯೂ ಟ್ಯೂಬ್‌ ಚಾನಲ್‌ಗಳಲ್ಲಿ ಕನ್ನಡ ಕಾರ್ಯಕ್ರಮಗಳು ಹೆಚ್ಚಾಗಿ ಬರುತ್ತಿರುವುದ ಸಂತೋದ ವಿಷಯವಾಗಿದೆ. ಸಾಹಿತ್ಯ ಪ್ರೇಮಿಗಳು ಕವಿ ಕಲಾವಿದರನ್ನು ಗೌರವಿಸಬೇಕು ಎಂದು ಹೇಳಿದರು.  ಗೀತ ರಚನೆಕಾರ ಆರ್‌.ಚೌಡರೆಡ್ಡಿ ಪನಸಮಾಕನಹಳ್ಳಿ, ಗಾಯಕ ಕೆ.ರಘು ಕೋಲಾರ, ಸಂಗೀತ ನಿರ್ದೇಶಕ ತುಷಾರ್‌ ನಾಗ್‌, ಸಂಕಲನಕಾರ ನಿಶಾಂತ್‌ ರೆಡ್ಡಿ, ಸಿ.ಅಜಯ್‌, ಎಂ.ವಿ.ಚಂದನ್‌, ವಿನಯ್‌, ಬಾನುತೇಜ್‌ ಇದ್ದರು.ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ