ಪರಿಷತ್ ಚುನಾವಣೆಯಲ್ಲಿ 4 ಕಡೆ ಬಿಜೆಪಿಗೆ ಭರ್ಜರಿ ಗೆಲುವು 2, 3ನೇ ಸ್ಥಾನಕ್ಕಾಗಿ ಕಾಂಗ್ರೆಸ್,ಜೆಡಿಎಸ್ ಪೈಪೋಟಿ- ವೈ.ಎ.ನಾರಾಯಣಸ್ವಾಮಿ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ವಿಧಾನಪರಿಷತ್‍ನ ಎಲ್ಲಾ ನಾಲ್ಕೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ನಿಶ್ಚಿತ, 2 ಮತ್ತು 3ನೇ ಸ್ಥಾನಕ್ಕಾಗಿ ಕಾಂಗ್ರೆಸ್,ಜೆಡಿಎಸ್ ಹಾಗೂ ಪಕ್ಷೇತರ ಅಭ್ಯರ್ಥಿಗಳು ಪೈಪೋಟಿ ನಡೆಸುತ್ತಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ತಿಳಿಸಿದರು.
ವಿಧಾನಪರಿಷತ್ ಚುನಾವಣೆ ಹಿನ್ನಲೆಯಲ್ಲಿ ನಗರದ ಜೂನಿಯರ್ ಕಾಲೇಜು ಮತಗಟ್ಟೆಗೆ ಆಗಮಿಸಿದ್ದ ಅವರು, ಮತಗಟ್ಟೆ ಮುಂಭಾಗ ಸೇರಿದ್ದ ಬಿಜೆಪಿ ಕಾರ್ಯಕರ್ತರು, ಮತ್ತು ಪದವೀಧರರೊಂದಿಗೆ ಮಾತನಾಡಿದರು.
ಬಿಜೆಪಿಗೆ ಬಂಡಾಯ ಅಭ್ಯರ್ಥಿಗಳಿಂದ ಯಾವುದೇ ತೊಂದರೆಯಿಲ್ಲ, ಅವಿಭಜಿತ ಜಿಲ್ಲೆಯ 9 ತಾಲ್ಲೂಕುಗಳಲ್ಲಿ ನಾವೇ ಮುಂದಿದ್ದೇವೆ ಹಾಗೆಯೇ ದಾವಣಗೆರೆ, ತುಮಕೂರು, ಚಿತ್ರದುರ್ಗದಲ್ಲಿಯೂ ಬಿಜೆಪಿ ಅಭ್ಯರ್ಥಿಯೇ ಮುಂದಿದ್ದು, ಗೆಲುವು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ನಾಲ್ಕು ಪರಿಷತ್ ಸ್ಥಾನಗಳಲ್ಲೂ ನಾವೇ ಗೆಲ್ಲುತ್ತೇವೆ, ಅನುಮಾನವೇ ಇಲ್ಲ, ಇದು ಬಿಜೆಪಿಯ ಚುನಾವಣೆಯಾಗಿದೆ, ಮೋದಿಪರ ಯುವಕರು,ಪದವೀಧರರು ನಿಂತಿದ್ದಾರೆ, ಸರ್ಕಾರಿ ನೌಕರರು, ಶಿಕ್ಷಕರ ಸಮಸ್ಯೆ ಪರಿಹರಿಸುವಲ್ಲಿ ಬಿಜೆಪಿ ಸರ್ಕಾರ ತೋರಿದಷ್ಟು ಕಾಳಜಿ ಬೇರಾವುದೇ ಸರ್ಕಾರ ತೋರಿಲ್ಲ ಈ ಸತ್ಯ ಎಲ್ಲರಿಗೂ ಗೊತ್ತಿದೆ ಎಂದರು.
ಈಗ ಜೆಡಿಎಸ್,ಕಾಂಗ್ರೆಸ್,ಪಕ್ಷೇತರರಿಗೆ ಚುನಾವಣೆ ನಡೆಯುತ್ತಿದೆ ಅವರು 2 ಮತ್ತು 3ನೇ ಸ್ಥಾನಗಳಿಗಾಗಿ ಪೈಪೋಟಿ ನಡೆಸಿದ್ದಾರೆ, ಬಿಜೆಪಿ ಅಭ್ಯರ್ಥಿ ಎಷ್ಟೋ ಮುಂದಿದ್ದಾರೆ ಎಂದರು.
ಜಿ.ಟಿ.ಶ್ರೀನಿವಾಸ್ ಮತ್ತು ಲೇಪಾಕ್ಷರನ್ನು ಪಕ್ಷ ಉಚ್ಚಾಟಿಸಿದೆ, ಈಗ ಪಕ್ಷಕ್ಕೂ ಅವರಿಗೂ ಸಂಬಂಧವಿಲ್ಲ, ಹಿಂದಿನ ಎಲ್ಲಾ ಪರಿಷತ್ ಚುನಾವಣೆಗಳಲ್ಲೂ ಬಂಡಾಯವಾಗಿ ನಿಂತವರು ಎಷ್ಟು ಮತ ಪಡೆದರು ಎಂಬ ಇತಿಹಾಸದ ಅರಿವು ಇದೆ, ಬಿಜೆಪಿಗೆ ಯಾವುದೇ ತೊಂದರೆಯಾಗದು ಎಂದರು.
ವಿರೋಧಿ ಬಣದ
ಮತಯಾಚನೆ
ಮತಗಟ್ಟೆ ಮುಂಭಾಗ ಹಾಕಿದ್ದ ಪೆಂಡಾಲ್‍ನಲ್ಲಿ ಕುಳಿತ ವೈ.ಎ.ಎನ್ ಸ್ವತಃ ಮತದಾರರಿಗೆ ಕ್ರಮಸಂಖ್ಯೆ ಬರೆದುಕೊಟ್ಟು, ಬಿಜೆಪಿಗೆ ಮತ ನೀಡಲು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಮತಗಟ್ಟೆ ಮುಂಭಾಗ ಜೆಡಿಎಸ್, ಕಾಂಗ್ರೆಸ್, ಪಕ್ಷೇತರರು ಹಾಕಿದ್ದ ಪೆಂಡಾಲ್‍ಗೂ ಭೇಟಿ ನೀಡಿದ್ದ ವೈಎ.ನಾರಾಯಣಸ್ವಾಮಿ ಅವರನ್ನೂ ಬಿಜೆಪಿಗೆ ಮತ ನೀಡಿ ಎಂದು ಕೇಳುವ ಮೂಲಕ ಸ್ನೇಹ, ಸಾಮರಸ್ಯಕ್ಕೆ ಒತ್ತು ನೀಡಿ ಗಮನ ಸೆಳೆದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಎಸ್.ಬಿ.ಮುನಿವೆಂಕಟಪ್ಪ, ನಗರ ಘಟಕದ ಅಧ್ಯಕ್ಷ ತಿಮ್ಮರಾಯಪ್ಪ, ಜಿಲ್ಲಾ ಉಪಾಧ್ಯಕ್ಷ ಮಾಗೇರಿ ನಾರಾಯಣಸ್ವಾಮಿ, ನಗರಸಭಾ ಸದಸ್ಯ ಮುರಳಿಗೌಡ, ಸತ್ಯನಾರಾಯಣರಾವ್, ಮಮತಾ, ವಿಜಯಕುಮಾರ್, ರಾಜೇಶ್‍ಸಿಂಗ್, ಬೆಗ್ಲಿ ಸಿರಾಜ್, ಜಾಮೀನುಲ್ಲಾಖಾನ್,ಚಲಪತಿ ಮತ್ತಿತರರು ಹಾಜರಿದ್ದರು
.