ಭಂಡಾರ್ಕಾರ್ಸ್‍ ಕಾಲೇಜ್: ಐಕ್ಯೂಎಸಿ ಮತ್ತು ವಾಣಿಜ್ಯ ವಿಬಾಗಗಳ ಸಂಯುಕ್ತಾಶ್ರಯದಲ್ಲಿ “ಕ್ಯಾಪ್ಟಿವೇಟಿಂಗ್‍ಆಫ್ ಶೇರ್ ಮಾರ್ಕೆಟ್” ವೆಬಿನಾರ್

JANANUDI.COM NETWORK

ಕುಂದಾಪುರ: ಇತ್ತೀಚೆಗೆ ಇಲ್ಲಿನ ಭಂಡಾರ್ಕಾರ್ಸ್‍ ಕಾಲೇಜಿನಲ್ಲಿ ಐಕ್ಯೂಎಸಿ ಮತ್ತು ವಾಣಿಜ್ಯ ವಿಬಾಗಗಳ ಸಂಯುಕ್ತಾಶ್ರಯದಲ್ಲಿ “ಕ್ಯಾಪ್ಟಿವೇಟಿಂಗ್‍ಆಫ್ ಶೇರ್ ಮಾರ್ಕೆಟ್” ( ಶೇರು ಮಾರು ಕಟ್ಟೆಯಕಡೆಗೆ ಸೆಳೆಯುವುದು) ಕುರಿತು ರಾಷ್ಟ್ರೀಯ ವೆಬಿನಾರ್ ನಡೆಯಿತು.
ಸಂಪನ್ಮೂಲ ವ್ಯಕ್ತಿಗಳಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕರಾದ ಡಾ.ಕುಶಾಲಪ್ಪ ಮಾತನಾಡಿ ಶೇರು ಮಾರುಕಟ್ಟೆಯಲ್ಲಿ ಬಂಡವಾಳ ಹೂಡಿಕೆಯನ್ನು ಮಾಡುವಾಗ ಶೇರು ಮಾರುಕಟ್ಟೆಯ ಪೂರ್ಣ ಮಾಹಿತಿ ತಿಳಿದಿರಬೇಕು. ಬಂಡವಾಳದಾರನಿಗೆ ತಾನು ಯಾವಾಗ ಯಾವಕಾರಣಕ್ಕೆ ಮತ್ತು ಎಲ್ಲಿತನ್ನ ಬಂಡವಾಳವನ್ನು ಹೂಡಿಕೆ ಮಾಡುತ್ತಿದ್ದೇನೆ ಎನ್ನುವ ಸಂಪೂರ್ಣ ಜ್ಞಾನವಿರಬೇಕು ಎಂದು ಹೇಳಿದರು.
ಬಂಡವಾಳ ಹೂಡಿಕೆಯ ಕುರಿತಂತೆ ಸಾಕಷ್ಟು ಬೇರೆ ಬೇರೆ ವಿಧಾನ ಮತ್ತು ಮಾರ್ಗಗಳ ಕುರಿತಂತೆ ಸಂಪೂರ್ಣ ಮಾಹಿತಿ ತಿಳಿದಿರಬೇಕು. ಅಲ್ಲದೇ ಶೇರು ಮಾರುಕಟ್ಟೆಯ ಲಾಭಾಂಶ, ಬಡ್ಡಿ ಕುರಿತು ಗೊತ್ತಿರಬೇಕು. ಮುಖ್ಯವಾಗಿ ಬಂಡವಾಳ ಹೂಡಿಕೆ ಮಾಡುವುದಾದರೆ ಅದಕ್ಕೆ ಸಂಬಂಧ ಪಟ್ಟ ಬೇರೆ ಬೇರೆ ತೆರನಾದ ತೆರಿಗೆ ವಿನಾಯಿತಿಯ ಕುರಿತು ತಿಳಿದಿರಬೇಕು. ಶೇರು ಮಾರುಕಟ್ಟೆಯು ತಂತ್ರಜ್ಞಾನವನ್ನು ಅಳವಡಿ ಸಿಕೊಂಡಿದೆ. ಈ ಕುರಿತು ಅಂದರೆ ಶೇರು ಮಾರುಕಟ್ಟೆಯ ಕುರಿತು ಇರುವ ಮತ್ತು ತಿಳಿಸುವ ವಿವಿಧ ಆ್ಯಪ್ ಮತ್ತು ವೆಬ್‍ಸೈಟ್‍ಗಳ ಕುರಿತು ತಿಳಿದುಕೊಂಡರೆ ಇಂತಹ ಸಂದರ್ಭದಲ್ಲಿ ನಿಮಗೆ ಇವು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ ಕಾರ್ಯಕ್ರಮದ ಕುರಿತು ಮಾತನಾಡಿದರು. ವಾಣಿಜ್ಯ ವಿಭಾಗ ಮುಖ್ಯಸ್ಥರಾದ ಅರುಣ ಎ.ಎಸ್ ಸ್ವಾಗತಿಸಿ ಪರಿಚಯಿಸಿದರು. ಉಪನ್ಯಾಸಕಿ ಓಂಶ್ರೀ ಶೆಟ್ಟಿಕಾರ್ಯಕ್ರಮ ನಿರ್ವಹಿಸಿದರು. ಉಪನ್ಯಾಸಕಿ ಮಮತಾ ವಂದಿಸಿದರು. ಕಾಲೇಜಿನ ಐಟಿ ತಂಡದ ಅಮರ್ ಸಿಕ್ವೆರಾ, ಶಂಕರನಾರಾಯಣ ಉಪಾಧ್ಯಾಯ, ಮತು ವಾಣಿಜ್ಯ ವಿಭಾಗದಗಣೇಶ್ ಕುಮಾರ್ ತಾಂತ್ರಿಕವಾಗಿ ಸಹಕರಿಸಿದರು.