ಕುಂದಾಪುರದಲ್ಲಿ ರೈತ ವಿರೋಧಿ,ಭೂಸುಧಾರಣ, ಎಪಿಎಮ್‍ಸಿ ಕಾಯ್ದೆ,ಕಾರ್ಮಿಕ ವಿರೋಧಿ ಕಾಯ್ದೆ ತಿದ್ದುಪಡಿ ವಿರೋಧಿಸಿ ವಿಪಕ್ಷಗಳ ಪ್ರತಿಭಟನೆ

JANANUDI.COM NETWORK

ಕುಂದಾಪುರ,ಸೆ.28: ಕೇಂದ್ರಾಡಳಿತವು ಜ್ಯಾರಿಯಲ್ಲಿ ತಂದಿರುವ ರೈತ ,ಭೂಸುಧಾರಣ ಕಾಯ್ದೆ, ಎಪಿಎಮ್‍ಸಿ ಕಾಯ್ದೆ ತಿದ್ದು ಪಡಿ,ಕಾರ್ಮಿಕ ವಿರೋಧಿ ಕಾಯ್ದೆ ತಿದ್ದುಪಡಿ, ಕಾರ್ಮಿಕ ವಿರೋಧಿ ಕಾಯ್ದೆ, ಅಗತ್ಯ ವಸ್ತುಗಳ ಕಾಯ್ದೆ ತಿದ್ದುಪಡಿ, ವಿದ್ಯುತ್ ಕಾಯ್ದೆಗಳನ್ನು ವಿರೋಧಿಸಿ ರಾಜ್ಯ ಬಂದ್ ಕರೆಗೆ ಎಲ್ಲಾ ವಿಪಕ್ಷಗಳೆಲ್ಲಾ ಸೇರಿ ಕುಂದಾಪುರದ ಶಾಸ್ತ್ರಿ ಸರ್ಕಲನಲ್ಲಿ ಪ್ರತಿಭಟನೆ ನಡೆಸಿದರು.
ಸಿ.ಪಿ.ಐ(ಎಂ) ನ ಎಚ್.ನರಸಿಂಹ ಮಾತನಾಡಿ ‘ಕೇಂದ್ರ ಸರಕಾರವು ರೈತ ವಿರೋಧಿಯಾಗಿದ್ದು, ಬಡವರ ಬಗ್ಗೆ ಕಾಳಜಿ ಇಲ್ಲದೆ, ಕಾರ್ಪೋರೇಟರಗಳಿಗೆ ಅನೂಕೂಲ ಆಗುವಂತೆ ರೈತ ವಿರೋಧಿ ಜನ ವಿರೋಧಿ ಕಾಯ್ದೆಯನ್ನು ಜ್ಯಾರಿಗೆ ತಂದಿದೆ, ನಾವು ಎಚ್ಚೆತ್ತು ಕೊಳ್ಳದಿದ್ದರೆ ಮುಂದೆ ಭಾರೀ ಕಷ್ಟಗಳು ಕಾದಿವೆ, ನಾವೆಲ್ಲಾ ಸೇರಿ ಇಂತಹ ಭ್ರಷ್ಠ ಸರಕಾರವನ್ನು ಕಿತ್ತೊಗೆಯಬೇಕು’ ನುಡಿದರು.
ಕುಂದಾಪುರ ಬ್ಲಾಕ್ ಕಾಂಗ್ರೆಸಿನ ಅಧ್ಯಕ್ಷ ಕಾನ್ಮಕ್ಕಿ ಹರಿಪ್ರಸಾದ್ ಶೆಟ್ಟಿ ‘ಕೇಂದ್ರ ಮತ್ತು ರಾಜ್ಯ ಎರಡು ಸರಕಾರಗಳು ಭ್ರಷ್ಠ ಸರಕಾರಗಳಾಗಿವೆ, ಈಗ ರೈತ ವಿರೋಧಿ ಕಾಯ್ದೆ ಜ್ಯಾರಿಯಲ್ಲಿ ತಂದು ರೈತರನ್ನು ಸಂಕಷ್ಟಕ್ಕೆ ಗುರಿ ಮಾಡಿದೆ.ದೇವರಾಜ್ ಅರಸು ಮತ್ತು ಇಂದಿರಾ ಗಾಂಧಿ ಉಳಿಯುವನು ಜಮಿನ್ದಾರನಾಗಬೇಕು ಎಂದು ಭೂ ಕಾಯ್ದೆಯನ್ನು ತಂದು ಉಳುವನಿಗೆ, ರೈತ ಕಾರ್ಮಿಕನಿಗೆ ಜಮಿನ್ದಾರನ್ನಾಗಿ ಮಾಡಿಸಿತು, ಆದರೆ ಇಂದು ಕೇಂದ್ರ ಸರಕಾರ ರೈತರನ್ನು ವಿನಾಶಕ್ಕೆ ತಳ್ಳುವಂತ ಕಾಯ್ದೆ ಮಾಡಿದೆ.ಇಂತಹ ಸರಕಾರ ನಾವು ಕೆಳಗಿಳಿಸುವಂತೆ ಮಾಡ ಬೇಕು”ಎಂದರು.
ಭೀಮ ಘರ್ಜನೆ ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷ ಉದಯ ಕುಮಾರ್ ‘ಕೇಂದ್ರ ಮತ್ತು ರಾಜ್ಯ ಸರಕಾರ ಕಾರ್ಪೋರೇಟರ್, ಬಂಡವಾಳ ಶಾಹಿಗಳ ಪರವಾದ ಸರಕಾರವಾಗಿದೆ. ಇಂದು ಅನ್ನದಾತನಿಗೆ ಸಂಕಷ್ಟಕ್ಕೆ ಗುರಿ ಪಡಿಸಿದ್ದಾರೆ, ರೈತ ವಿರೋಧಿ, ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ತಂದು ರೈತರನ್ನು ಮಟ್ಟ ಹಾಕುವುದಲ್ಲದೇ, ಮುಂದಿನದಿನಗಳಲ್ಲಿ ಬಡವರಿಗೆ ತಿನ್ನಲು ಅನ್ನ ಸಿಗದಂತ್ತ ವಾತವರಣ ಕಲ್ಪಿಸಲು ಹೊರಟಿದೆ. ಅದಲ್ಲದೆ ನಮ್ಮ ಶಾಂತಿಯುತ ಹೋರಾಟ ಹತ್ತಿಕ್ಕಲು ಪೊಲೀಸರನ್ನು ಬಳಸಿಕೊಂಡು, ಹೆಚ್ಚು ಜನ ಸೇರಲು ಅನುಮತಿ ನೀಡದಂತೆ ಹೋರಾಟ ಹತ್ತಿಕಲು ಪ್ರಯತ್ನಿಸಿದೆ. ಆದರೆ ನಾವೆಲ್ಲಾ ಗ್ರಾಮದಿಂದ ಹಿಡಿದು ನಗರ, ತಾಲೂಕು ಕೇಂದ್ರ, ಜಿಲ್ಲಾಕೇಂದ್ರಗಳಲ್ಲಿ ಹೋರಾಟ ಹಮ್ಮಿಕೊಳ್ಳುತಿದ್ದೆವೆ, ಹೀಗೆ ಇಡೀ ದೇಶದ ಜನರನ್ನು ಹತ್ತಿಕ್ಕಲು, ಜೈಲಲ್ಲಿ ಅಟ್ಟಲು ಈ ಪೊಲೀಸ್ ಶಕ್ತಿಗೆ ಸಾಧ್ಯವಿದೆಯೆ’ ಎಂದು ಸವಾಲು ಹಾಕಿದರು.
ರೈತ ಸಂಘದ ವಿಕಾಶ್ ಹೆಗ್ಡೆ ‘6 ವರ್ಷಗಳಿಂದ ಕೇಂದ್ರ ಸರಕಾರ ದೇಶವನ್ನು ವಿನಾಶದ ಕಡೆ ಒಯ್ಯುತಿದ್ದಾರೆ, ಒಂದು ಸೂಜಿಯು ಉತ್ಪಾದನೆ ಶಕ್ತಿ ಇಲ್ಲದಂತಹ ಭಾರತಕ್ಕೆ ಕಾಂಗ್ರೆಸ್ ಸರಕಾರವು ಜಗತ್ತಿನಲ್ಲಿ ಹೆಮ್ಮರವನ್ನಾಗಿ ಬೆಳೆಸಿದರು, ಆದರೆ ಇಂದು ಈ ಭಾರತದವನ್ನು ಪ್ರಪಂಚದ ಭೂ ಪಟದಲ್ಲಿ ಇಲ್ಲದಂತ್ತೆ ಮಾಡಲು ಹೊರಟಿದೆ, ಇಂತ ಭ್ರಷ್ಟ ಸರಕಾರಗಳನ್ನು ಎಲ್ಲಾ ವಿಪಕ್ಷದವರು ಸೇರಿ ಕಿತ್ತೊಗೈಯಬೇಕು’ ಎಂದರು. ಮಹಿಳಾ ಕಾಂಗ್ರೆಸ್ ಶ್ಯಾಮಲ ಭಂಡಾರಿ ಮಾತನಾಡಿ ‘ಈ ರೈತ ವಿರೋಧಿ ಕಾಯ್ದೆಯಿಂದ ಬಡವ ರೈತನಿಂದ ದಾನ್ಯ ದವಸ ಕಡಿಮೆ ಕ್ರಯದಲ್ಲಿ ಖರೀದಿಸಿ, ಜನತೆಗೆ ಹೆಚ್ಚೆ ಬೆಲೆಯನ್ನು ನೀಡಿ ಪಡೆದುಕೊಳ್ಳ ಬೇಕಾಗುತ್ತದೆ, ರೈತರಿಗೆ ಇದು ಮರಣ ಶಾಸನವಾಗಿದೆ’ಎಂದರು. ಡಿ.ವೈ.ಎಫ್.ಐ. ನ ರಾಜೇಶ್ ಮಾತನಾಡಿ ‘ಇಂದು ನಿರೂದ್ಯೋಗ ವ್ಯಾಪಕವಾಗಿ ಹರಡಿರುವ ಈ ಕಾಲದಲ್ಲಿ, ರೈತ ಕಾರ್ಮಿಕ ವಿನಾಶದ ಕಾಯ್ದೆ ತಂದಿರುವುದು ನ್ಯಾಯವಲ್ಲಾ, ಕೋಳಿ ಸಾಕಣೆಯೂ ಕ್ರಷಿ ಕ್ಷೇತ್ರದಲ್ಲಿ ಬರುತ್ತದೆ, ಕೋಳಿ ಸಾಕಣೆ ಮಾಡುವರು ಎಪಿಎಮ್‍ಸಿ ಗೆ ಕಡಿಮೆ ದರದಲ್ಲಿ ಮಾರಬೇಕಾಗುತ್ತದೆ,ಆದರೆ ಅವರು ಹೆಚ್ಚು ದರದಲ್ಲಿ ಮಾರಾಟ ಮಾಡುವರು, ಅಂದರೆ ಇದು ರೈತರ ವಿನಾಶದ ಕಾಯ್ದೆಯೇ ಆಗಿದೆ ಎಂದು’ ಪ್ರತಿಭಟಿಸಿದರು.
ಸಿ.ಐ.ಟಿ.ಯ ಜಿಲ್ಲಾ ಅಧ್ಯಕ್ಷರಾದ ಕೆ.ಶಂಕರ್ ಮಾತನಾಡಿ ‘ಇಂತಹ ಜನ ಅಹಿತ ಕಾಯ್ದೆಗಳು, ರೈತ ವಿರೋಧಿ, ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ತಂದ ಕೇಂದ್ರ ಮತ್ತು ರಾಜ್ಯ ಸರಕಾರಗಳು, ಬಿದ್ದೋಗಲು ಬರುವ ಚುನಾವಣೆಯ ತನಕ ಕಾಯ ಬೇಕೆಂದಿಲ್ಲಾ, ಈ ಭ್ರಷ್ಠ ಮತ್ತು ಜನ ಅಹಿತ ಕಾಯ್ದೆಗಳನ್ನು ತರುವ ಸರಕಾರಗಳ ವಿರುದ್ದ ನಾವೆಲ್ಲಾ ವಿಪಕ್ಷಗಳು ಒಟ್ಟು ಸೇರಿ ಹೋರಾಡಿದರೆ ಚುನಾವಣೆಯ ಮೊದಲೇ ಈ ಸರಕಾರಗಳು ಬಿದ್ದು ಹೋಗುತ್ತವೆ” ಎಂದು ನುಡಿದರು.

ಈ ಪ್ರತಿಭಟನೆಯಲ್ಲಿ, ಕಾಂಗ್ರೆಸ್, ಸಿ.ಪಿ.ಐ (ಎಂ), ರೈತ ಸಂಘ, ಭೀಮ ಘರ್ಜನೆ ದಲಿತ ಸಂಘರ್ಷ ಸಮಿತಿ, ಸಿ.ಐ.ಟಿ., ಜೆಡಿಎಸ್., ಡಿ.ವೈ.ಎಫ್.ಐ. ಪಕ್ಷಗಳು ಹಾಗೂ ಸಂಘಟನೇಗಳು ಭಾಗವಹಿಸಿದ್ದವು.
ಈ ಸಂದರ್ಭದಲ್ಲಿ ಮಲ್ಯಾಡಿ ಶಿವರಾಮ ಶೆಟ್ಟಿ, ವಿನೋದ್ ಕ್ರಾಸ್ಟೊ, ಕೆ.ಜಿ.ನಿತ್ಯಾನಂದ, ಕುಮಾರ ಖಾರ್ವಿ, ಕ್ರಷ್ಣದೇವ ಕಾರಂತ, ಜ್ಯೋತಿ ಡಿ. ನಾಯ್ಕ, ಕೋಡಿ ಸುನೀಲ್ ಪೂಜಾರಿ, ಕೇಶವ ಭಟ್, ಆಶಾ ಕರ್ವಾಲ್ಲೊ, ದೀನೆಶ್ ಬೆಟ್ಟಿನ್, ರೋಶನ್ ಶೆಟ್ಟಿ, ಅಶೋಕ ಸುವರ್ಣ, ಅಬ್ದುಲ್ಲಾ ಕೋಡಿ, ಚಂದ್ರಶೇಖರ ಶೆಟ್ಟಿ, ಚಂದ್ರ ಅಮೀನ್, ಮುನಾಫ್, ರೋಶನ್ ಬಾರೆಟ್ಟೊ, ಗಣೇಶ ಶೇರಿಗಾರ್, ಧರ್ಮಪ್ರಕಾಶ್, ಶಿವರಾಮ ಪುತ್ರನ್, ಮಿಲ್ಲ್ ರವಿ, ಸುಭಾಷ್ ಪೂಜಾರಿ, ರಘುವರನ್ ನಾಯ್ಕ್, ಗಂಗಾಧರ ಶೆಟ್ಟಿ, ಕೆ.ಶಿವಕುಮಾರ್ ಮುಂತಾದವರು ಹಾಜರಿದ್ದರು.