ವರದಿ:ಮಝರ್ ಕುಂದಾಪುರ
ಕುಂದಾಪುರ : ಕರೋನಾ ಪಾಸಿಟಿವ್ ಎಂದ ಕೂಡಲೇ ಸೀಲ್ ಡೌನ್, ಲಾಕ್ ಡೌನ್, ಕ್ವಾರಂಟೈನ್ ಮುಂತಾದ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವುದು ಸರ್ವೆ ಸಾಮಾನ್ಯವಾಗಿರುವ ಈ ಸಂದರ್ಭದಲ್ಲಿ ಕುಂದಾಪುರ ದ ಖಾಸಗಿ ಆಸ್ಪತಯೊಂದರಲ್ಲಿ ಯಾವುದೇ ತಡೆಯಿಲ್ಲದೆ ಮರಣ ಹೊಂದಿದ ವ್ಯಕ್ತಿಯ ಮೃತ ದೇಹದ ದರ್ಶನವನ್ನು ಪಡೆದ ನೂರಾರು ಜನ ತಲ್ಲಣಗೊಂಡಿರುವ ಘಟನೆ ನಡೆದಿದೆ. ಇದಕ್ಕೆ ಕಾರಣವಾಗಿರುವುದು ಮೃತ ದೇಹದಲ್ಲಿ ಮಹಾ ಮಾರಿಯ ವೈರಸ್ ಗಳು ತೆವಳಾಡುತ್ತಿವೆ ಎಂಬ ಸುದ್ದಿ. ಕುಂದಾಪುರದ ವಾಸಿಯಾಗಿರುವ ಉದ್ಯಮಿಯೋರ್ವರು ಕಳೆದ ಶನಿವಾರ ಕಫ ಹಾಗೂ ಮಧು ಮೇಹದ ತೊಂದರೆಯಿಂದ ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಪಟ್ಟಿದ್ದರು. ವಾಡಿಕೆಯಂತೆ ಕೋವಿಡ್ 19 ತಪಾಸಣೆಯೂ ನಡೆದು ಒಂದು ನೆಗೆಟಿವ್ ವರದಿ ಬಂದಿದ್ದು ಇನ್ನೊಂದು ಬರಲು ಬಾಕಿ ಇದೆ ಎಂದು ಹೇಳಲಾಗಿತ್ತು. ಬಳಿಕ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದು ಮಂಗಳವಾರ ಅವರ ಆರೋಗ್ಯ ಸ್ಥಿತಿ ತೀರಾ ಬಿಗಡಾಯಿಸಿತ್ತು. ಈ ಸಂದರ್ಭದಲ್ಲಿ ಅವರನ್ನು ಮಣಿಪಾಲಕ್ಕೆ ಕೊಂಡೊಯ್ಯುವ ಪ್ರಯತ್ನ ನಡೆದರೂ ಮತ್ತೆ ಆರೋಗ್ಯ ಸ್ಥಿತಿ ಕೊಂಚ ಸುಧಾರಿಸಿದ್ದರಿಂದ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿತ್ತೆನ್ನಲಾಗಿದೆ.ಆದರೆ ಮರುದಿನ ಅಂದರೆ ಬುಧವಾರ ಬೆಳ್ಳಂಬೆಳ್ಳಗೆ ವ್ಯಕ್ತಿಯು ಮರಣ ಹೊಂದಿದ್ದರೆನ್ನಲಾಗಿದೆ. ಅವರ ನಿಧನ ದ ಸುದ್ದಿತಿಳಿಯುತ್ತಿದ್ದಂತೆ ಸಂಬಂಧಿಕರ ಸಹಿತ ನೂರಾರು ಜನ ಆಸ್ಪತ್ರೆಗೆ ತೆರಳಿ ಮೃತರ ದರ್ಶನವನ್ನು ಪಡೆದಿದ್ದಾರೆ. ಈ ನಡು ವೆ ಶವವನ್ನು ಮನೆಗೆ ಸಾಗಿಸುವ ವಿಚಾರ ಬಂದಾಗ ಕೋವಿಡ್ ರಿಪೋರ್ಟ್ ಬರಬೇಕು ಆದ್ದರಿಂದ ಶವವನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗುತ್ತಿದೆ ಎಂಬ ಸುದ್ದಿ ಅಲ್ಲಿ ಒಂದೇ ಸಮನೆ ಹರಿದಾಡಲಾರಂಭಿಸಿದರೂ, ಮೃತರ ಶವ ದರ್ಶನಕ್ಕೆ ಯಾವುದೇ ಅಡ್ಡಿ ಆತಂಕ ವಿಲ್ಲದೆ ಇದ್ದುದರಿಂದ ಶವ ದರ್ಶನದ ಕಾರ್ಯ ಮಾತ್ರ ಮಧ್ಯಾಹ್ನದ ತನಕ ಮುಂದುವರಿದಿತ್ತು. ಸಂಜೆ ವೇಳೆ ಶವವನ್ನು ಕುಂದಾಪುರದ ಖಾಸಗಿ ಆಸ್ಪತ್ರೆಯ ಶವಾಗಾರಕ್ಕೆ ಒಯ್ಯಲಾಗಿದ್ದು ಈ ನಡುವೆ ಮೃತ ದೇಹದ ತಪಾಸಣಾ ವರದಿ ಪಾಸಿಟಿವ್ ಎಂದು ಬಂದಿದೆ ಎಂಬ ಸುದ್ದಿ ಶವದರ್ಶನವನ್ನು ಗೈದವರನ್ನು ತಲ್ಲಣಗೊಳಿಸಿ ಬಿಟ್ಟಿದೆ ವಿದೇಶದಲ್ಲಿರುವ ಅವರ ಮಕ್ಕಳು ಆಗಮಿಸಿದ ನಂತರ ರಾತ್ರಿ ಸುಮಾರು 11.30ರ ಹೊತ್ತಿಗೆ ಅಪ್ಪಟ ಕರೋನಾ ಸೋಂಕು ಪೀಡಿತ ಶವದಂತೆ ಕವಚಧಾರಿ ವಾರಿಯರ್ಸ್ ಗಳು ಕುಂದಾಪುರ ಜಾಮಿಯಾ ಮಸೀದಿಯಲ್ಲಿ ತಡ ರಾತ್ರಿಶವವನ್ನು ದಫನಗೊಳಿಸಿದ್ದಾರೆ. ವಿಶೇಷ ವೆಂದರೆ ಈ ಸಂದರ್ಭದಲ್ಲಿ ಕೊರೊನಾ ಸೋಂಕಿತ ಶವವನ್ನು ಕಾನೂನಿನಂತೆ ವಿಲೇ ಗೊಳಿಸುವ ಯಾವುದೇ ಕಾನೂನು ನಿಯಮಗಳನ್ನು ಪಾಲಿಸದೆ ಕಾಟಾಚಾರಕ್ಕೆ ಎಂಬಂತೆ ಸರ್ಕಾರಿ ಆಂಬ್ಯುಲೆನ್ಸ್ ನ ಸಹಿತ ಓರ್ವ ಸಿಬ್ಬಂದಿ ಉಪಸ್ಥಿತನಿದ್ದು ಕವಚಧಾರಿ ವಾರಿಯರ್ಸ್ ಗಳ ಫೋಟೋವನ್ನು ಕ್ಲಿಕ್ಕಿಸಿದ್ದಾನೆ. ಮರುದಿನ ಗುರುವಾರ ಮೃತರ ಮನೆಗೆ ತೆರಳಿದ ಆಶಾ ಕಾರ್ಯ ಕರ್ತೆಯರು ಮೃತರ ಪತ್ನಿ ಮತ್ತು ಪುತ್ರನನ್ನು ಕೋವಿಡ್ ಟೆಸ್ಟ್ ಗೆ ಒಳಪಡಬೇಕೆಂದು ಸೂಚಿಸಿದ್ದಾರೆ. ವಿಶೇಷವೆಂದರೆ ಮೃತ ವ್ಯಕ್ತಿಗೆ ಪಾಸಿಟಿವ್ ಇದೆ ಎನ್ನುವ ವರದಿಯ ಪ್ರತಿ ಮೊಬೈಲ್ ನಲ್ಲಿ ದೇ ಎನ್ನಲಾಗುತ್ತಿದ್ದರೂ ಒರಿಜಿನಲ್ ವರದಿ ಇನ್ನೂ ಬರಲಿಲ್ಲಾ ಎಂದು ಕೆಲವು ಮೂಲಗಳು ಹೇಳುತ್ತಿವೆ.ಒಂದುವೇಳೆ ನಿಜಕ್ಕೂ ಮೃತ ವ್ಯಕ್ತಿಗೆ ಪಾಸಿಟಿವ್ ಇದ್ದದ್ದೇ ಹೌದಾದರೆ ಎಲ್ಲಾ ಮುಂಜಾಗರುಕ ಕ್ರಮಗಳನ್ನು ಗಾಳಿಗೆ ತೂರಿ ಮಾಮೂಲು ಶವದಂತೆ ಶವ ದರ್ಶನ ಮಾಡಿದವರ ಮೇಲೆ ಮುಂದಿನ ಕ್ರಮಗಳೇನು ಎಂಬ ಆತಂಕ ಕೆಲವರನ್ನು ತಲ್ಲಣಗೊಳಿಸಿ ಬಿಟ್ಟಿದೆ.ಅದ್ಯಾಗೂ ಪಾಸಿಟಿವ್ ಎಂಬ ಶಂಕೆ ಇದ್ದ ಮೇಲೆ ಆಸ್ಪತ್ರೆಯವರು ಸಹಾ ಮುಕ್ತವಾಗಿ ಶವ ದರ್ಶನಕ್ಕೆ ಅವಕಾಶ ಮಾಡಿಕೊಟ್ಟ ಬಗ್ಗೆಯೂ ಆಕ್ರೋಶ ವ್ಯಕ್ತವಾಗುತ್ತಿದೆ.