ಕುಂದಾಪುರ ಚರ್ಚ್ ಮೈದಾನದಲ್ಲಿ 74 ನೆಯ ಸ್ವಾತಂತ್ರ್ಯ ದಿನಾಚರಣೆ

ಕುಂದಾಪುರ,ಅ.15: ಕಥೊಲಿಕ್ ಸಭಾ ಕುಂದಾಪುರ ಚರ್ಚ್ ಘಟಕದ ವತಿಯಿಂದ ಕುಂದಾಪುರ ಹೋಲಿ ರೋಜರಿ ಮಾತಾ ಇಗರ್ಜಿಯ ಮೈದಾನದಲ್ಲಿ, 74 ನೆಯ ಸ್ವಾತಂತ್ರ್ಯತ್ಯ್ಸೋವ ವನ್ನು ಕೋವಿಡ್ 19 ಕಾರಣದಿಂದ ಸರಳವಾಗಿ ಸಾಮಾಜಿಕ ಅಂತರ ಕಾಪಾಡಿಕೊಂಡು ಆಚರಿಸಿಲಾಯಿತು.
ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಗೌರವ ಸ್ವೀಕರಿಸಿ ಧ್ವಜಾ ರೋಹಣಗೈದು ‘ಇವತ್ತು ನಾವು ಕೋವಿಡ್ ಸಂಕಷ್ಟದಲ್ಲಿ ಇದ್ದೇವೆ, ದೇವರು ಇಂತಹ ಅನೇಕ ಆಪತ್ತುಗಳಿಂದ ರಕ್ಷಿಸಿದ್ದಾನೆ, ಈ ಆಪತ್ತಿನಲ್ಲಿ ದೇವರು ನಮ್ಮನ್ನು ರಕ್ಷಿಸಿ ಸ್ವಾತಂತ್ರ್ಯ ಅನುಭವಿಸಲು ಅನುವು ಮಾಡಿ ಕೊಡುತ್ತಾನೆ, ಇದಕ್ಕಾಗಿ ನಾವು ಪ್ರಾರ್ಥಿಸೋಣ. ನಮ್ಮ ಹಿರಿಯರು ಪ್ರಾಣ ತ್ಯಾಗ ಕಷ್ಟದಿಂದ ಸ್ವಾತಂತ್ರ್ಯವನ್ನು ಗಳಿಸಿಕೊಟ್ಟದನ್ನು ಸ್ಮರಿಸಿ ಗೌರವದಿಂದ ಬಾಳೋಣ” ಎಂದು ಸಂದೇಶ ನೀಡಿದರು
ಸಹಾಯಕ ಧರ್ಮಗುರು ವಂ| ವಿಜಯ್ ಡಿಸೋಜಾ, ಸಂತ ಮೇರಿಸ್ ಪಿ.ಯು. ಕಾಲೇಜಿನ ಪ್ರಾಂಶುಪಾಲ ಧರ್ಮಗುರು ವಂ|ಪ್ರವೀಣ್ ಎ ಮಾರ್ಟಿಸ್, ಪಾಲನ ಮಂಡಳಿ ಉಪಧ್ಯಾಕ್ಷ ಲುವಿಸ್ ಜೆ.ಫೆರ್ನಾಂಡಿಸ್, ಕಥೊಲಿಕ್ ಸಭಾದ ಪದಾಧಿಕಾರಿಗಳಾದ ವಾಲ್ಟರ್ ಡಿಸೋಜಾ, ಶೈಲಾ ಡಿಆಲ್ಮೇಡಾ, ಜಾನ್ಸನ್ ಡಿಆಲ್ಮೇಡಾ, ವಿನಯಾ ಡಿಕೋಸ್ತಾ, ವಿನೋದ್ ಕ್ರಾಸ್ಟೊ, ಡಾ|ಸೋನಿ ಡಿಕೋಸ್ತಾ, ಮೈಕಲ್ ಗೊನ್ಸಾಲ್ವಿಸ್, ಜೋನ್ ಮಾಸ್ಟರ್, ಮತ್ತು ಕಾರ್ಯಕ್ರಮದ ಸಂಚಾಲಕ ವಿಲ್ಸನ್ ಡಿ ಆಲ್ಮೇಡಾ ಇನ್ನಿತರರು ಉಪಸ್ಥಿತರಿದ್ದರು.
ಘಟಕದ ಅಧ್ಯಕ್ಷ ಬರ್ನಾಡ್ ಡಿಕೋಸ್ತಾ ಸ್ವಾಗತಿಸಿದರು ಕಾರ್ಯದರ್ಶಿ ಪ್ರೇಮಾ ಡಿಕುನ್ಹಾ ವಂದಿಸಿದರು.