ಕಚ್ಚಾ ತೈಲ ಬೆಲೆ ಗಗನಕ್ಕೆ ಎರಿದಾಗ ಬೆಲೆ ಹೆಚ್ಚಿಸಿದಕ್ಕೆ ಬೀದಿಗಿಳಿದು  ಹೋರಾಟ ಮಾಡಿವವರೇ, ಈಗ ಕಚ್ಚಾ,  ತೈಲ ಬೆಲೆ ಇಳಿದರೂ, ಬೆಲೆ ಎರಿಸಿ ಜನರನ್ನು ಹೈರಾಣ ಮಾಡಿದ್ದಾರೆ : ಕಾಂಗ್ರೆಸ್  ಹರಿಪ್ರಸಾದ್ ಶೆಟ್ಟಿ

JANANUDI.COM NETWORK

 

ಕಚ್ಚಾ ತೈಲ ಬೆಲೆ ಗಗನಕ್ಕೆ ಎರಿದಾಗ ಬೆಲೆ ಹೆಚ್ಚಿಸಿದಕ್ಕೆ ಬೀದಿಗಿಳಿದು  ಹೋರಾಟ ಮಾಡಿವವರೇ, ಈಗ ಕಚ್ಚಾ,  ತೈಲ ಬೆಲೆ ಇಳಿದರೂ, ಬೆಲೆ ಎರಿಸಿ ಜನರನ್ನು ಹೈರಾಣ ಮಾಡಿದ್ದಾರೆ : ಕಾಂಗ್ರೆಸ್  ಹರಿಪ್ರಸಾದ್ ಶೆಟ್ಟಿ

 

 

 

 

ಕುಂದಾಪುರ, ಜು. ೮:  ಅಂತರಾಷ್ಟ್ರಿಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಕಡಿಮೆಯಾಗಿದ್ದರೂ, ದೇಶದ ಜನ ಕೋವಿಡ್ ೧೯ ನಿಂದಾಗಿ ತತ್ತರಿಸಿದ್ದಾರೆ, ಆದರೂ   ಕೂಡಾ ದೇಶದಲ್ಲಿ ಡಿಸೇಲ್, ಪೆಟ್ರೊಲ್ ಬೆಲೆ ನಿರಂತರವಾಗಿ ಏರಿಸುತ್ತಿರುವುದು ಕೇಂದ್ರದ ಬಿಜೆಪಿ ಸರಕಾರದ ರಾಕ್ಷಸಿ ಪ್ರವೃತ್ತಿಯನ್ನು ತೋರಿಸುತ್ತದೆ. ಇದು ಖಂಡನೀಯ ಎಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾನ್ಮಕ್ಕಿ ಹರಿಪ್ರಸಾದ್ ಶೆಟ್ಟಿ ಹೇಳಿದರು.

     ಬ್ಲಾಕ್ ಕಾಂಗ್ರೆಸ್ ವತಿಯಿಂದ ಜು.7ರಂದು ನಡೆದ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಚೇರಿ ಎದುರು ನಡೆದ ಪ್ರತಿಭಟನಾ ಸಭೆಯ ನೇತ್ರತ್ವ ವಹಿಸಿ ಮಾತನಾಡಿ ಹಿಂದೆ ಮನಮೋಹನ್ ಸಿಂಗ್ ಪ್ರಧಾನ ಮಂತ್ರಿಯಾಗಿದ್ದಾಗ ಅಂತಾರಾಷ್ಟ್ರಿಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಗಗನಕ್ಕೆ ಎರಿದಾಗ ದೇಶದಲ್ಲಿ ತೈಲ ಬೆಲೆ ಹೆಚ್ಚಿಸಿದಾಗ ಬೀದಿಗಿಳಿದು ಹೋರಾಟ ಮಾಡಿವವರೇ ಈಗ ಅಧಿಕಾರದಲ್ಲಿದ್ದು ಪ್ರಸ್ತುತ ಅಂತರಾಷ್ಟ್ರಿಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯಾದುದರಿಂದ 30 ರಿಂದ 35 ರೂಪಾಯಿಗೆ ಡಿಸೇಲ್ ನೀಡಬೇಕಿತ್ತು. ಆದರೆ ಹೀಗಾಗಲಿಲ್ಲಾ.ಅದಕ್ಕಾಗಿ ನಾವು  ಜನ ಸಾಮಾನ್ಯರ ಪರವಾದ ಪ್ರತಿಭಟನೆ  ಮಾಅಡುತಿದ್ದೆವೆ’ ಎಂದ ಅವರು, ಕೋವಿಡ್-19 ನಿರ್ವಹಣೆಯಲ್ಲಿಯೂ ಕೂಡ ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದ್ದು ಆರ್ಥಿಕವಾಗಿ ಜನರು ತತ್ತರಿಸಿ ಹೋಗಿದ್ದಾರೆ’ ಎಂದರು .

    ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಮಲ್ಯಾಡಿ ಶಿವರಾಮ್ ಶೆಟ್ಟಿ, ಶಂಕರ ಕುಂದರ್ ,ವಿಕಾಸ್ ಹೆಗ್ಡೆ, ಅಶೋಕ್ ಪೂಜಾರಿ, ಇಚ್ಚಿತಾರ್ಥ್ ಶೆಟ್ಟಿ, ಶ್ಯಾಮಲ ಭಂಡಾರಿ, ಕುಮಾರ್ ಖಾರ್ವಿ, ಅಣ್ಣಯ್ಯ ಪುತ್ರನ್, ಚಂದ್ರ ಅಮೀನ್, ದೇವಕಿ ಸಣ್ಣಯ್ಯ, ಕೆ. ಶಿವಕುಮಾರ್, ಶಶಿರಾಜ್ , ಶ್ರೀನಿವಾಸ ಶೆಟ್ಟಿ, ವಿಠಲ್ ಕಾಂಚನ್, ಚಂದ್ರಶೇಖರ್ ಶೆಟ್ಟಿ, ರಾಘವೇಂದ್ರ, ಸ್ಟೀವನ್ ಡಿ ಕೋಸ್ಟಾ , ಶ್ರೀಧರ ಶೇರಿಗಾರ್, ಚಂದ್ರಶೇಖರ್ ಖಾರ್ವಿ, ಮೋಹಮದ್ ಹುಸೇನ್, ರಘುರಾಮ ನಾಯ್ಕ್, ರೋಶನ್ ಶೆಟ್ಟಿ, ಶಿವರಾಮ್ ಪುತ್ರನ್, ಧನರಾಜ್, ಶಶಿರ, ಗಂಗಾಧರ ಶೆಟ್ಟಿ ಉಪಸ್ಥಿತರಿದ್ದರು.ನಂತರ ಸಹಾಯಕ ಕಮಿಷನರ್ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.

      ಗಣೇಶ ಶೇರಿಗಾರ್ ಸ್ವಾಗತಿಸಿ, ಚಂದ್ರಶೇಖರ ಖಾರ್ವಿ ವಂದಿಸಿದರು. ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ವಿನೋದ್ ಕ್ರಾಸ್ಟೊ  ಕಾರ್ಯಕ್ರಮ ನಿರೂಪಿಸಿದರು.