ಕುಂದಾಪುರ ಕೋರೊನಾ ಸೋಂಕು ಸಾಮಾಜಿಕ ತಾಣಗಳಲ್ಲಿ ಮೊಬೈಲ್ ಅಂಗಡಿ ಮಾಲೀಕನ ಬಗ್ಗೆ ಅಪಪ್ರಚಾರ

JANANUDI.COM NETWORK

 

ಕುಂದಾಪುರ ಕೋರೊನಾ ಸೋಂಕು ಸಾಮಾಜಿಕ ತಾಣಗಳಲ್ಲಿ ಮೊಬೈಲ್ ಅಂಗಡಿ ಮಾಲೀಕನ ಬಗ್ಗೆ ಅಪಪ್ರಚಾರ

 

 

ಕುಂದಾಪುರ : ಉರಿಯುವ ಮನೆಯಲ್ಲಿ ಗಳ ಹಿಡಿದಂತೆ ಉಲ್ಬಣಗೊಳ್ಳುತ್ತಿರುವ ಕರೋನಾ ಮಹಾಮಾರಿಯನ್ನೂ ತಮ್ಮ ವ್ಯಾಪಾರದ ಸ್ಪರ್ಧೆಗೆ ಬಳಸಿಕೊಂಡಿರುವ ಕೆಲವು ಕಿಡಿಗೇಡಿಗಳು ಕುಂದಾಪುರದ ಹೆಸರಾಂತ ಮೊಬೈಲ್ ಮಳಿಗೆಯ ಮಾಲೀಕನಿಗೆ ಸೋಂಕು ತಗಲಿದೆಯೆಂದು ಹೆಸರು ಸಹಿತ ಸಾಮಾಜಿಕ ತಾಣಗಳಲ್ಲಿ ಅಪಪ್ರಚಾರಗೈಯುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.
ಕುಂದಾಪುರದ ಮೊಬೈಲ್ ಮಳಿಗೆಯ ಮಾಲೀಕನೋರ್ವನಲ್ಲಿ ಸೋಂಕಿನ ಲಕ್ಷಣಗಳು ಪತ್ತೆಯಾಗಿದ್ದು, ನಿನ್ನೆ ಸೋಮವಾರ ಪಾಸಿಟಿವ್ ವರದಿ ಬಂದ ಹಿನ್ನಲೆಯಲ್ಲಿ ಆತನನ್ನು ಚಿಕಿತ್ಸೆಗೊಳಪಡಿಸಲಾಗಿದ್ದು, ಆತನು ವಾಸವಿದ್ದ ಫ್ಲಾಟನ್ನು ಸೀಲ್ ಡೌನ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.

     ಆದರೆ ಈ ಘಟನೆಯನ್ನೇ ಬಳಸಿಕೊಂಡ ಮೊಬೈಲ್ ಅಂಗಡಿಯ ಕಿಡಿಗೇಡಿ ಮಾಲೀಕನೋರ್ವ ತನ್ನ ಪ್ರತಿಸ್ಫರ್ಧಿ ಎನ್ನಲಾದ ಇನ್ನೊರ್ವ ಮೊಬೈಲ್ ಅಂಗಡಿಯ ಮಾಲೀಕನಿಗೆ ಕರೋನಾ ವೈರಸ್ ತಗಲಿದೆ ಎಂದು ವಾಟ್ಸಾಪ್ ನಂತಹ ಸಮಾಜಿಕ ತಾಣಗಳಲ್ಲಿ ಅಪಪ್ರಚಾರ ಗೈಯುತ್ತಿದ್ದಾನೆಂದು ಸಂತೃಸ್ಥ ಮೊಬೈಲ್ ಅಂಗಡಿ ಮಾಲೀಕರು ಸನ್ ಠಾಣೆಯ ಕದ ತಟ್ಟುವ ಸನ್ನಾಹದಲ್ಲಿದ್ದಾರೆನ್ನಲಾಗಿದೆ. ಈ ಹಿಂದೆಯೂ ಸಹಾ ವೃತ್ತಿ ವೈಷ್ಯಮದಿಂದ ಸಾರ್ವಜನಿಕ ಪ್ರತಿಭಟನೆಯೊಂದನ್ನು ಬಳಸಿಕೊಂಡ ಆರೋಪಿ ಮೊಬೈಲ್ ಅಂಗಡಿಯ ಮಾಲೀಕ ಸಾಮಾಜಿಕ ತಾಣಗಳಲ್ಲಿ ಇವರ ಬಗ್ಗೆ ಅಪಪ್ರಚಾರಗೈದಿರುವ ಆರೋಪ ಎದುರಿಸಿದ್ದಾನೆನ್ನಲಾಗಿದೆ.