ವಿಶ್ವಯೋಗ ದಿನಚಾರಣೆಯ ಅಂಗವಾಗಿ ಬಾಬಾ ಸ್ಥಬ್ದಚಿತ್ರಕ್ಕೆ ಪೂಜೆ

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ವಿಶ್ವಯೋಗ ದಿನಚಾರಣೆಯ ಅಂಗವಾಗಿ ಬಾಬಾ ಸ್ಥಬ್ದಚಿತ್ರಕ್ಕೆ ಪೂಜೆ  
ರಾಯಲ್ಪಾಡು : ಪ್ರತಿಯೊಬ್ಬರು ಪ್ರತಿದಿನದ ದಿನಚರಿಯಂತೆ ಯೋಗಾಭ್ಯಾಸವನ್ನ ಮಾಡುವುದರಿಂದ ಚಿರನೂತನ ಸಮರಸ ಜೀವನಕ್ಕೆ ವರದಾನವಾಗಲಿದೆ ಎಂದು ಯೋಗ ಕೇಂದ್ರದ ಶಿಕ್ಷಕರಾದ ಪ್ರಕಾಶ್‍ಶೇಠ್ ತಿಳಿಸಿದರು.ರಾಯಲ್ಪಾಡಿನ ಪ್ರೌಡಶಾಲಾವರಣದಲ್ಲಿನ ಬಾಬಾ ಯೋಗ ಕೇಂದ್ರದಲ್ಲಿ ಮಂಗಳವಾರ ವಿಶ್ವಯೋಗ ದಿನಚಾರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮನಷ್ಯ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಡವಾಗಿರಬೇಕಾದರೆ ಯೋಗವು ಸಹಕಾರಿಯಾಗಿದೆ . ಕರೋನಾ ದಂತಹ ಮಾರಕ ರೋಗದ ಭೀತಿ ಹರಡಿರುವಾಗ ಮಾನಸಿಕ ಸದೃಡತೆಗೆ ಯೋಗಾಭ್ಯಾಸ, ಧ್ಯಾನ ಸಹಕಾರಿಯಾಗಲಿದೆ ಎಂದರು.ಎನ್.ಶಿವನ್ ಮಾತನಾಡಿ ಇಂದಿನ ಬಿಡುವಿಲ್ಲದ ಒತ್ತಡ ನಡುವೆ ಶಾಂತಿ, ನೆಮ್ಮದಿ ಜೀವನ ಸಾಗಿಸಲು ಯೋಗವೊಂದೆ ದಿವ್ಯ ಔಷಧ ಆದ್ದರಿಂದ ಪ್ರತಿಯೊಬ್ಬರೂ ಸರಳ ಯೋಗಾಸನಗಳನ್ನು ನಿತ್ಯ ಅಭ್ಯಾಸ ಮಾಡಬೇಕು ಎಂದರು.
ಯೋಗ ಕೇಂದ್ರದ ಸದಸ್ಯರಾದ ಬಿ.ಎನ್.ಶ್ರೀನಿವಾಸ್,ಜಿ.ವಿ.ರಾಮಕೃಷ್ಣಾರೆಡ್ಡಿ,ಮಿಟ್ಟಾಪ್ರಸಾದ್, ಆರ್.ಗಂಗಾಧರ್, ಆರ್.ವಿ.ನರೇಶ್,ಕೆ.ವಿ.ಶ್ರೀನಿವಾಸ್, ಶೇಷಾದ್ರಿ, ಸಿ.ಎಸ್.ಮಂಜುನಾಥ್,ಸತೀಶ್‍ರೆಡ್ಡಿ,ಎಸ್.ಎನ್.ವೆಂಕಟೇಶ್, ಆರ್.ವಿ.ಶ್ರೀರಾಮ್,ಅಪ್ಪಿ, ಪಿ.ಮಾರಣ್ಣ, ನಾಗರಾಜರೆಡ್ಡಿ, ಆರ್.ಎನ್.ಸೋಮಶೇಖರರೆಡ್ಡಿ, ಆರ್.ವಿ.ದೇವರಾಜ್ ,ಶಿವಾರೆಡ್ಡಿ , ಸುಮಿತ್ ಇತರರಿದ್ದರು.